ಶ್ರೀದೇವಿ ಸಮೂಹ ವಿದ್ಯಾಸಂಸ್ಥೆಗಳಲ್ಲಿ 76ನೇ ಸ್ವಾತಂತ್ರೋತ್ಸವ ದಿನಾಚರಣೆ
ತುಮಕೂರು: ಭಾರತವು ತನ್ನದೇ ಆದ ಶಕ್ತಿಯಿಂದ ಜ್ಞಾನ ಮತ್ತು ಬೆಳಕು ಹೊಂದಿರುತ್ತದೆ ಹಾಗೂ ಜ್ಞಾನದಿಂದ ತಲ್ಲಿನ ವಾಗಿರುವುದು ಭಾರತಾಂಬೆ. “ತ್ಯಾಗ ಬಲಿದಾನವೇ” ಈ ಸ್ವಾತಂತ್ರೋತ್ಸವ ಹಾಗೂ ರಾಷ್ಟ್ರರಕ್ಷಕ ಮತ್ತು ಅನ್ನದಾತ ಇವೆರಡು ರಾಷ್ಟ್ರಕ್ಕೆ ಮುಖ್ಯ ಹಾಗೂ ಅಗತ್ಯ.
ಖಾಸಗಿ ಶಿಕ್ಷಣ ಸರ್ಕಾರದ ಜೊತೆ ಕೈ ಜೋಡಿಸಿದಾಗ, ವೈಜ್ಞಾನಿಕ ಮತ್ತು ಕೌಶಲ್ಯತೆಯ ಶಿಕ್ಷಣವನ್ನು ನೀಡಬೇಕು. ಇಲ್ಲಿನ ಶಿಕ್ಷಣ ಸಂಸ್ಥೆಗಳು ಗುಣಾತ್ಮಕ ಶಿಕ್ಷಣವನ್ನು ನೀಡಬೇಕು. ಶಿಕ್ಷಣದಿಂದಲೇ ದೇಶದ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯ ಮತ್ತು ಉತ್ತಮ ಶಿಕ್ಷಣವನ್ನು ನೀಡಲು ನಾವೆಲ್ಲರೂ ಸದಾ ಶ್ರಮಿಸಬೇಕು. ಯುವ ಜನಾಂಗಕ್ಕೆ ರಾಷ್ಟ್ರ ಪ್ರೇಮದ ದೀಕ್ಷೆ ನೀಡಿ ಹುರಿದುಂಬಿಸ ಬೇಕು, ಸಾವಿರಾರು ವೀರ ಯೋಧರು ಸಾವನ್ನಪ್ಪಿದ್ದಾರೆ. ಸುಭಾಷ್ ಚಂದ್ರಬೋಸ್, ಗಾಂಧೀಜಿ ಇನ್ನೂ ಮುಂತಾದ ಮಹಾನ್ ವ್ಯಕ್ತಿಗಳನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ರಾಷ್ಟ್ರರಕ್ಷಕ ಮತ್ತು ಅನ್ನದಾತ ಇವೆರಡು ನಮ್ಮ ರಾಷ್ಟದ ಬೆನ್ನುಲುಬು ಎಂದು ಶ್ರೀದೇವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಎಂ.ಆರ್. ಹುಲಿನಾಯ್ಕರ್‌ರವರು ತಿಳಿಸಿದರು.
ನಗರದ ಶಿರಾ ರಸ್ತೆಯ ಶ್ರೀದೇವಿ ಸಮೂಹ ವಿದ್ಯಾಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ 76ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಆಗಸ್ಟ್ 15 ರಂದು ಬೆಳಿಗ್ಗೆ 9 ಗಂಟೆಗೆ ಶ್ರೀದೇವಿ ಸಮೂಹ ಸಂಸ್ಥೆಗಳ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಸ್ವಾತಂತ್ರ‍್ಯ ಹೋರಾಟಗಾರರು, ಹಿರಿಯ ಚಲನಚಿತ್ರ ನಿರ್ದೇಶಕರು ಹಾಗೂ ನಟರಾದ ಬೆಂಗಳೂರು ನಾಗೇಶ್‌ರವರು ಮಾತನಾ ಡುತ್ತಾ ಭಾರತ ಯುವ ಪೀಳಿಗೆಯನ್ನು ಹೊಂದಿರುವ ರಾಷ್ಟ್ರವಾಗಿದೆ ಸಾಧನೆಯೆಂಬುದು ಪ್ರತಿಯೊಬ್ಬ ವ್ಯಕ್ತಿಯೂ ಧ್ಯೇಯವಾಗಬೇಕು. ಉತ್ತಮ ನಾಗರೀಕನಾಗಿರಲು ಒಳ್ಳೆಯ ಕನಸುಗಳನ್ನು ಕಾಣಬೇಕು, ಆ ಕನಸುಗಳೇ ಸಾಧನೆಯ ಮೆಟ್ಟಿಲು ಆಗಬೇಕು.
ಉತ್ತಮ ಸಮಾಜ ವನ್ನು ಕಟ್ಟಲು ವಿದ್ಯಾರ್ಥಿಗಳು ಜವಾಬ್ದಾರಿ ಹೊಂದಬೇಕು. ಮಾತು ಸಾಧನೆಯಾಗಬಾರದು ಸಾಧನೆಯೇ ಸಾಧನವಾಗಬೇಕು ಹಾಗೂ ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು, ಯಾವುದೇ ವಿದ್ಯಾರ್ಥಿಗಳು ಸಾಧನೆಗೆ ಯಾವುದೇ ಕಾರಣಕ್ಕೂ ಅಡ್ಡಿಯಾಗಬಾರದು, ಇನ್ನೊಬ್ಬರ ಸಾಧನೆಗೆ ಸದಾ ದುಡಿಯಬೇಕು, ಉತ್ತಮ ಬೃಹತ್ ರಾಷ್ಟçವನ್ನು ನಿರ್ಮಿಸಲು ನಾವೆಲ್ಲರೂ ಸದಾ ಶ್ರಮಿಸಬೇಕು.
ಸ್ವಾತಂತ್ರ‍್ಯ ಪೂರ್ವದಲ್ಲಿ ಇತಂಹ ಅನಕ್ಷರತೆ, ಬಡತನ, ನಿರ್ಮೂಲನೆಯಲ್ಲಿ ಹೆಚ್ಚು ಒತ್ತುಕೊಟ್ಟು ದೇಶ ಅಭಿವೃದ್ಧಿ ಹೊಂದಲು ಅನೇಕ ಮಹನೀಯರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. ಯುವ ಪೀಳಿಗೆ ಹಾಗೂ ಹಿರಿಯರು ಹಾಕಿಕೊಟ್ಟಿರುವ ಮಾರ್ಗದರ್ಶನಗಳನ್ನು ಅನುಸರಿಸಿ ಉತ್ತಮ ಭಾರತವನ್ನು ನಿರ್ಮಿಸಲು ಕನಸನ್ನು ಹೊಂದಬೇಕು ಗುರುವಿಗೆ ಭಕ್ತಿ ತೋರಿಸುತ್ತಾ ಸರ್ವರಿಗೂ ದೇಶ ಭಕ್ತಿಯನ್ನು ಮೆರೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಡಾ. ರಮಣ್ ಎಂ ಹುಲಿನಾಯ್ಕರ್‌ರವರು ಸ್ವಾಗತ ಕೋರಿ ಮಾತನಾಡುತ್ತಾ ದೇಶ ಸ್ವಾತಂತ್ರ‍್ಯಕ್ಕಾಗಿ ನಡೆದ ತ್ಯಾಗ ಬಲಿದಾನಗಳ ಬಗ್ಗೆ ಸ್ವವಿಸ್ತಾರವಾಗಿ ಮಾತನಾಡುತ್ತಾ ದೇಶ ಸ್ವತಂತ್ರ ದೇಶವಾಗುವಲ್ಲಿ ಮಹಾತ್ಮ ಗಾಂಧೀಜಿಯವರ ಅಹಿಂಸಾ ಮಾರ್ಗದಿಂದ ಆದ ಬದಲಾವಣೆಗಳನ್ನು ವಿವರಿಸಿದರು. ಹಾಗೂ ಸ್ವಾತಂತ್ರ‍್ಯ ದಿನಾಚರಣೆಯ ಸಂದೇಶವನ್ನು ತಿಳಿಸಿದರು.
ಶ್ರೀದೇವಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ದೇಶಭಕ್ತಿಗೀತೆಯ ಮನಮೋಹಕ ನೃತ್ಯಮಾಡಿದರಲ್ಲದೆ, ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸಿ ಆಕರ್ಷಕ ಪಥಸಂಚಲನ ಮಾಡಿದರು. ವಿವಿಧ ಕ್ರೀಡೆಗಳಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಪದಕ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು. ಹಾಗೂ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಲಾಗಿತ್ತು.
ಕಾರ್ಯಕ್ರಮದಲ್ಲಿ ಶ್ರೀದೇವಿ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್. ಪಾಟೀಲ್, ಶ್ರೀದೇವಿ ತಾಂತ್ರಿಕ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಡಾ.ನರೇಂದ್ರವಿಶ್ವನಾಥ್, ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಲ್.ಹರೇ೦ದ್ರಕುಮಾರ್, ಪ್ರೊ.ಸಿ.ನಾಗರಾಜು, ಡಾ.ಕೆ.ಎಸ್.ರಾಮಕೃಷ್ಣ, ಶ್ರೀದೇವಿ ಕಾಲೇಜಿನ ಆಡಳಿತಾಧಿಕಾರಿಯಾದ ಟಿ.ವಿ. ಬ್ರಹ್ಮದೇವಯ್ಯ, ತೀರ್ಪುಗಾರರಾದ ಶ್ರೀದೇವಿ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಪ್ರೊ.ಸಿ.ವಿ.ಷಣ್ಮುಖಸ್ವಾಮಿ, ಪ್ರೊ. ವಾಸುದೇವಮೂರ್ತಿ, ದೈಹಿಕ ಶಿಕ್ಷಕರಾದ ರಾಘವೇಂದ್ರ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಪ್ರಾಂಶುಪಾಲರು ಮತ್ತು ಬೋಧಕ- ಬೋಧಕೇತರ ಸಿಬ್ಬಂದಿಯವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಡಾ.ರಮಣ್ ಎಂ ಹುಲಿನಾಯ್ಕರ್ ಸ್ವಾಗತಿಸಿ, ಪ್ರೊ. ಸಿ.ನಾಗರಾಜ ನಿರೂಪಿಸಿದರು, ಶ್ರೀದೇವಿ ಎಂ.ಬಿ.ಎ. ವಿಭಾಗದ ಮುಖ್ಯಸ್ಥರಾದ ಡಾ. ಕೆ.ಎಸ್.ರಾಮಕೃಷ್ಣ ರವರು ವಂದನಾರ್ಪಣೆ ಮಾಡಿದರು.