ಬೆಸ್ಕಾಂ-ಗ್ರಾಪ0 ಚೆಲ್ಲಾಟದಿಂದ ಆರೋಗ್ಯಕ್ಕೆ ಕುತ್ತು
ಬೆಸ್ಕಾಂ-ಗ್ರಾಪ0ಯ ಚೆಲ್ಲಾಟ-ಕುಡಿಯುವ ನೀರಿಗೆ ಪರದಾಟ
೬೭ಲಕ್ಷ ವಿದ್ಯುತ್ ಶುಲ್ಕಕ್ಕೆ ೧೭ಲಕ್ಷ ಬಡ್ಡಿ.. ಕೊರಟಗೆರೆಯಲ್ಲಿ ಮಾತ್ರ ಬೆಸ್ಕಾಂ ಕಾರ್ಯಚರಣೆ ಏಕೆ..?
ಕೊರಟಗೆರೆ: ನೀರಿನ ಘಟಕಗಳ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಲಿಸಿದ್ದು, ಸಮರ್ಪಕ ನಿರ್ವಹಣೆಯ ವೈಫಲ್ಯದಿಂದ ಸಾರ್ವಜನಿಕರಿಗೆ ಮತ್ತೆ ಫ್ಲೋರೈಡ್ ನೀರು ಕುಡಿಯಬೇಕಾದ ಪರಿಸ್ಥಿತಿಗೆ ತಂದ ಅಧಿಕಾರಿಗಳು.
ಕೊರಟಗೆರೆ ತಾಲೂಕಿನ ೨೪ಗ್ರಾಪಂಯಲ್ಲಿ ೧೫೪ ಶುದ್ದ ಕುಡಿಯುವ ನೀರಿನ ಘಟಕ ಗಳಿದ್ದು. ೧೫೪ ಘಟಕಗಳಲ್ಲಿ ೨೦ಘಟಕ ಗ್ರಾಪಂಗೆ ಹಸ್ತಾಂತರ ಆಗಿವೆ. ೭೭ ಘಟಕಗಳಿಗೆ ಮರುಟೆಂಡರ್‌ಗೆ ಆಹ್ವಾನಿಸಿ ೨ವರ್ಷ ಕಳೆದಿದೆ. ಇನ್ನೂಳಿದ ಬಹುತೇಕ ನೀರಿನ ಘಟಕ ದುಸ್ಥಿತಿಗೆ ತಲುಪಿವೆ. ಘಟಕಗಳ ನಿರ್ವಹಣೆ ವಿಚಾರದಲ್ಲಿ ಅಧಿಕಾರಿಗಳ ಆಡಳಿತ ವೈಫಲ್ಯ ಕಂಡುಬ0ದಿದೆ. ೪ವರ್ಷದಿಂದ ಬಾಕಿ ಉಳಿದಿರುವ ೮೪ಲಕ್ಷ ವಿದ್ಯುತ್ ಶುಲ್ಕ ಪಾವತಿಸದ ಪರಿಣಾಮ ಬೆಸ್ಕಾಂ ಇಲಾಖೆ ವಿದ್ಯುತ್ ಸಂಪರ್ಕ ಕಡಿತ ಮಾಡಿದೆ.
೨೦೧೯-೨೦ರಲ್ಲಿ ೨೪ಗ್ರಾಪಂಗಳ ೧೫೪ಘಟಕದ ವಿದ್ಯುತ್ ಬಾಕಿ ಶುಲ್ಕ ೬೪ ಸಾವಿರ ಮಾತ್ರ.. ೧೫೪ಘಟಕ ನಿರ್ವಹಣೆ ಮಾಡು ತ್ತೀದ್ದ ಆಂದ್ರಮೂಲದ ಗುತ್ತಿಗೆದಾರರ ೫ವರ್ಷದ ಅವಧಿಯು ೨೦೨೦ಕ್ಕೆ ಮುಕ್ತಾಯ. ಬೆಸ್ಕಾಂ ಇಲಾಖೆಗೆ ೪ ವರ್ಷದಿಂದ ವಿದ್ಯುತ್ ಶುಲ್ಕ ಪಾವತಿಸದೇ ಪ್ರಸ್ತುತ ವಿದ್ಯುತ್ ಶುಲ್ಕ ೬೭ಲಕ್ಷಕ್ಕೆ ಏರಿದೆ. ೬೭ಲಕ್ಷಕ್ಕೆ ಬಡ್ಡಿಯೇ ಈಗ ೧೭ಲಕ್ಷ ಬಂದಿದ್ದು ಒಟ್ಟು ೮೪ಲಕ್ಷ ಬಾಕಿ ಕಟ್ಟಬೇಕಿದೆ. ಬೆಸ್ಕಾಂ ಮತ್ತು ಗ್ರಾಪಂ ಚೆಲ್ಲಾಟಕ್ಕೆ ತಾಲೂಕಿನ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ.
೪ವರ್ಷದಿಂದ ೨೪ಗ್ರಾಪಂಯ ೧೫೪ಶುದ್ದ ನೀರಿನ ಘಟಕಗಳ ವಸೂಲಾತಿ ಹಣದ ಅಂಕಿಅ0ಶ ಎಷ್ಟು.. ಜನರಿಂದ ವಸೂಲಿ ಮಾಡಿದ ಲಕ್ಷಾಂತರ ರೂ ಹಣದಲ್ಲಿ ವಿದ್ಯುತ್ ಶುಲ್ಕ ಪಾವತಿಗೆ ತಡಮಾಡಿದ್ದೇಕೆ. ೪ವರ್ಷದಿಂದ ಬೆಸ್ಕಾಂ ಇಲಾಖೆಯು ೧೫೪ ಘಟಕಗಳ ವಿದ್ಯುತ್ ಶುಲ್ಕ ವಸೂಲಿ ಮಾಡದೇ ಹಾಗೇ ಬಿಡಲು ಕಾರಣವೇನು. ಗ್ರಾಪಂ ಪಿಡಿಓ ನಮಗೇ ಗೊತ್ತೇ ಇಲ್ಲ ಅಂತಾರೇ.. ಬೆಸ್ಕಾಂ ಸಿಬ್ಬಂದಿ ನಾವು ಪ್ರತಿ ತಿಂಗಳು ಬಿಲ್ ಕೊಟ್ಟಿದ್ದೀವಿ ಅಂತಾರೇ. ಗ್ರಾಪಂ ಮತ್ತು ಬೆಸ್ಕಾಂ ಚೆಲ್ಲಾಟದಿಂದ ಈಗ ಜನರ ಆರೋಗ್ಯಕ್ಕೆ ಆತಂಕ ಎದುರಾಗಿದೆ.
ಬೆಸ್ಕಾಂ ಇಲಾಖೆ, ೨೪ಗ್ರಾಪಂ ಪಿಡಿಓ, ತಾಪಂ ಇಓ, ಗ್ರಾಮೀಣ ಕುಡಿಯುವ ನೀರು ಎಇಇ ಮತ್ತು ಕೊರಟಗೆರೆ ಆಡಳಿತ ವೈಫಲ್ಯ ದಿಂದ ಕೊರಟಗೆರೆ ಕ್ಷೇತ್ರದ ಜನರಿಗೆ ಶುದ್ದ ನೀರಿನ ಸಮಸ್ಯೆ ಎದುರಾಗಿದೆ. ಪಾವಗಡದಲ್ಲಿ ೪ಕೋಟಿಗೂ ಅಧಿಕ ನೀರಿನ ವಿದ್ಯುತ್ ಶುಲ್ಕ ಬಾಕಿಇದೆ. ತುಮಕೂರು ಜಿಲ್ಲೆಯಲ್ಲಿಯೇ ಇಲ್ಲದಂತಹ ಬೆಸ್ಕಾಂ ಇಲಾಖೆಯ ವಸೂಲಾತಿ ಕಾರ್ಯಚರಣೆ ಕೊರಟಗೆರೆ ಯಲ್ಲೇ ಮಾತ್ರ ಏಕೆ ಎಂಬುದಕ್ಕೆ ಶಾಸಕ, ಸಂಸದ, ಸಚಿವರೇ ಕೊರಟಗೆರೆಯ ಜನರಿಗೆ ಉತ್ತರ ನೀಡಬೇಕಿದೆ.
ನೀರಿಗೆ ಕತ್ತರಿ ಹಾಕಿದ ಬೆಸ್ಕಾಂ ಇಲಾಖೆ..
ಎಲೆರಾಂಪುರ, ನೀಲಗೊಂಡನಹಳ್ಳಿ, ಹಂಚಿಹಳ್ಳಿ, ಹುಲೀಕುಂಟೆ ಗ್ರಾಪಂ ವ್ಯಾಪ್ತಿಯ ಬೋಡಬಂಡೇನಹಳ್ಳಿ, ಕೆರೆಯಾಗಲಹಳ್ಳಿ, ಡಿ.ನಾಗೇನಹಳ್ಳಿ, ತಂಗನಹಳ್ಳಿ, ದೊಡ್ಡಪಾಲನಹಳ್ಳಿ, ಬೈಚೇನಹಳ್ಳಿ, ಎಲೆರಾಂಪುರ, ಐ.ಕೆ.ಕಾಲೋನಿ, ಅಳಾಲಸಂದ್ರ, ಎ.ವೆಂಕಟಾಪುರ, ಕಾಮರಾಜನಹಳ್ಳಿ, ಗೌರಗಾನಹಳ್ಳಿ ಗ್ರಾಮದ ನೀರಿನ ಘಟಕದ ವಿದ್ಯುತ್ ಸಂಪರ್ಕ ಕಡಿತವಾದ ಪರಿಣಾಮ ೩ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ನೀರು ಮರೀಚಿಕೆ ಆಗಿದೆ.
*
ಸರಕಾರಿ ಕಚೇರಿಯ ವಿದ್ಯುತ್ ಶುಲ್ಕ ಬಾಕಿಇದ್ರೇ ಮುಲಾಜಿಲ್ಲದೇ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತೇವೆ. ಈಗ ನಾವು ಯಾರ ಸಬೂಬು ಕೇಳೊದಿಲ್ಲ. ನಾವು ಯಾರಿಗೂ ಕಾಯುವ ಪ್ರಶ್ನೆಯು ಇಲ್ಲ. ನಮ್ಮ ಎಚ್ಚರಿಕೆಯ ನೊಟೀಸ್‌ಗೆ ಗ್ರಾಪಂಯಿAದ ಉತ್ತರ ಬಂದಿಲ್ಲ. ನೀರಿನ ಸಮಸ್ಯೆ ಆದರೇ ಘಟಕಗಳ ಮೇಲ್ವಿಚಾರಕರೇ ಜವಾಬ್ದಾರಿ.
ಜಗದೀಶ್. ಇಇ. ಬೆಸ್ಕಾಂ ಇಲಾಖೆ. ಮಧುಗಿರಿ
ಕೊರಟಗೆರೆಯ ನೀರಿನ ಘಟಕಗಳ ವಿದ್ಯುತ್ ಸಂಪರ್ಕ ಕಡಿತದ ಬಗ್ಗೆ ತಕ್ಷಣ ಪರಿಶೀಲನೆ ನಡೆಸುವಂತೆ ತುಮಕೂರು ಜಿಪಂ ಸಿಇಓಗೆ ಸೂಚಿಸುತ್ತೇನೆ. ಮೇಲ್ವಿಚಾರಣೆ ವಹಿಸಿರುವ ಗ್ರಾಪಂಯಿ0ದ ಬೆಸ್ಕಾಂ ಇಲಾಖೆಗೆ ಪ್ರತಿ ತಿಂಗಳು ಬೆಸ್ಕಾಂ ಇಲಾಖೆಗೆ ವಿದ್ಯುತ್ ಶುಲ್ಕ ಪಾವತಿಸಬೇಕು. ಕುಡಿಯುವ ನೀರಿನ ವಿಚಾರದಲ್ಲಿ ಅಧಿಕಾರಿವರ್ಗ ಜಾಗೃತಿ ವಹಿಸಬೇಕಿದೆ.
ಅತೀಕ್.ಎಲ್.ಕೆ. ಅಪರ ಮುಖ್ಯ ಕಾರ್ಯದರ್ಶಿ. ಗ್ರಾಮೀಣಾಭಿವೃದ್ದಿ ಇಲಾಖೆ
Read E-Paper click here