ಒಟ್ಟು ೪೨೦ ಮತಗಳ ಪೈಕಿ ೪೧ ಮತಗಳು ಚಲಾವಣೆ ಆಗಿವೆ
ಮತ ಸೆಳೆಯಲು ಉಡುಗೊರೆಗಳ ಮೊರೆ ಹೋದ ವಕೀಲರ ಬಣಗಳು
ಚಿಕ್ಕಬಳ್ಳಾಪುರ : ಜಿಲ್ಲಾ ಕೇಂದ್ರದ ವಕೀಲರ ಸಂಘದ ೨೦೨೪-೨೬ನೇ ಸಾಲಿನ ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಉಪಾಧ್ಯಕ್ಷ, ಕಾರ್ಯ ದರ್ಶಿ ಖಜಾಂಚಿ ಸೇರಿ ೨೦ ಮಂದಿ ನಿರ್ದೇಶಕ ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ೪೨೦ ಒಟ್ಟು ಮತಗಳ ಪೈಕಿ ೪೧೩ ಮತಗಳು ಚಲಾವಣೆಗೊಂಡಿದ್ದು ಮತ ಎಣಿಕೆ ಕಾರ್ಯಭರದಿಂದ ಸಾಗಿದೆ.
ನಗರದ ಜಿಲ್ಲಾ ಕೋರ್ಟ್ ಅವರಣದಲ್ಲಿ ಗುರುವಾರ ನಡೆದ ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ವಕೀಲಕೆ.ಹೆಚ್ ತಮ್ಮೇಗೌಡ, ಕೆ.ಎಂ,ಗೋವಿ0ದ ರೆಡ್ಡಿ, ಆರ್.ಮಟಮಪ್ಪ, ಯುವ ವಕೀಲ ಕೆ.ವಿ.ಅಭಿಲಾಷ್ ಸ್ಪರ್ಧೆ ಮಾಡಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಕೆ.ವಿ.ಬಾಲಾಜಿ, ಹೆಚ್,ಮುನಿರಾಜು, ಎಂ.ಜೆ.ರಾಮು, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಟಿ.ಎಂ.ವೆಂಕಟೇಶ್, ಜಿ.ಎಸ್.ಹರಿಕೃಷ್ಣ, ಮಂಜುನಾಥ್, ಜಂಟಿ ಕಾರ್ಯದರ್ಶಿ ಚಂದ್ರಶೇಖರ್, ಬಿ.ಆರ್. ಶ್ರೀದೇವಿ, ಖಜಾಂಚಿ ಸ್ಥಾನಕ್ಕೆ ಅಯೂಬ್ ಖಾನ್, ಕೆ.ಎನ್. ಶಿವಾರೆಡ್ಡಿ, ಆರ್.ಬಿ.ದೇವರೆಡ್ಡಿ, ಸ್ಪರ್ಧಿಸಿದ್ದಾರೆ.ಇವರನ್ನು ಹೊರತುಪಡಿಸಿ ೨೦ ಮಂದಿ ಕಾರ್ಯಕಾರಿ ಮಂಡಳಿಗೆ ಸ್ಪರ್ಧೆ ಮಾಡಿದ್ದಾರೆ.
ಈ ಬಾರಿ ಬಣ ರಾಜಕೀಯ ಜೋರಾಗಿ ಸದ್ದು ಮಾಡಿದೆ. ಎಲ್ಲಾ ಬಣಗಳ ಅಭ್ಯರ್ಥಿಗಳು ಕೂಡ ತಮ್ಮ ಪರ ಹೆಚ್ಚಿನ ಮತಗಳನ್ನು ಸೆಳೆಯಲು ಉಡುಗೊರೆಗಳ ಮೊರೆಹೋಗಿರುವುದು ಫಲಿತಾಂಶದ ಬಾರಿ ಪರಿಣಾಮ ಬೀರುವುದು ಖಚಿತವಾಗಿದೆ.
ಪತ್ರಿಕೆ ಮುದ್ರಣಕ್ಕೆ ಹೋಗುವ ಮೊದಲು ಕಾರ್ಯಕಾರಿ ಸಮಿತಿಗೆ ಸ್ಪರ್ಧಿಸಿದ್ದವರ ಪೈಕಿ ಪ್ರವೀಣ್, ಮುನಿರಾಜು.ಎಸ್,ವೈ,ಎನ್. ಶ್ರೀನಿವಾಸ್ ಜಯಗಳಿಸಿದ್ದಾರೆ ಎಂಬ ಮಾಹಿತಿಯಿದ್ದು ಖಜಾಂಚಿಯಾಗಿ ಅಯೂಬ್ ಖಾನ್ ಸಹ ಗೆಲುವು ಕಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸ್ಪಷ್ಟ ಫಲಿತಾಂಶದ ಮಾಹಿತಿ ನಾಳೆ ಗೊತ್ತಾಗಲಿದೆ ಎನ್ನುವುದು ಹಿರಿಯ ವಕೀಲರೊಬ್ಬರ ಮಾಹಿತಿಯಾಗಿದೆ.
ಇದನ್ನೂ ಓದಿ: chikkaballapurnews