Monday, 28th October 2024

Flower Farming: ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಸಾಧ್ಯ,ಇದು ಚೆಂಡು ಹೂವು ಬೆಳೆದ ಆಚೇಪಲ್ಲಿ ರೈತ

ಬಾಗೇಪಲ್ಲಿ: ರೈತರು ಹೊಸ ಪ್ರಯೋಗಗಳಿಗೆ ಇಳಿಯುವ ಮುನ್ನ ಸಾವಿರ ಬಾರಿ ಯೋಚಿಸಬೇಕಾಗುತ್ತದೆ. ಹೊಸದಾಗಿ ಹಾಕಿದ ಬೆಳೆ ಕೈ ಹಿಡಿದರೆ ಸರಿ, ಇಲ್ಲದಿದ್ದರೆ ಏನು ಗತಿ ಎಂಬ ಚಿಂತೆ ಖಂಡಿತವಾಗಿಯೂ ಎಲ್ಲರನ್ನೂ ಕಾಡುತ್ತದೆ. ಹೂವಿನ ಕೃಷಿಯೂ ಕೂಡ ಹಾಗೆಯೇ. ಸೇವಂತಿಗೆ ಹಾಗೂ ಚೆಂಡು ಹೂವು ಬೆಳೆಯಲು ಪ್ರಸಿದ್ದಿ ಯಾಗಿರುವ ಆಚೇಪಲ್ಲಿ ಗ್ರಾಮದಲ್ಲಿ 3 ಎಕರೆಯಲ್ಲಿ ಚೆಂಡು ಹೂವು ಬೆಳೆದು ಆರಂಭದ ಹಂತದಲ್ಲಿಯೇ ಲಾಭ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಇವರು ಎರಡು ವರ್ಷದ ಹಿಂದೆ 5 ಎಕರೆಯಲ್ಲಿ ಸೇವಂತಿ ಹೂವು ಬೆಳೆದು ಹೆಚ್ಚಿನ ಲಾಭ ಪಡೆದು ಜಿಲ್ಲೆಯಲ್ಲಿಯೇ ಪ್ರಸಿದ್ಧಿ ಪಡೆದಿದ್ದಾರೆ.

ಆಚೇಪಲ್ಲಿ ರೈತ ಚಂದ್ರಪ್ಪ ಪತ್ರಿಕೆಗೆ ಪ್ರತಿಕ್ರಿಯೆ ವ್ಯಕ್ತಿಪಡಿಸಿ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬ ಸಮೀಪಿಸುತ್ತಿದ್ದು, ಹೋಬಳಿಯ ವಿವಿಧ ಗ್ರಾಮಗಳಲ್ಲಿ ರೈತರು ಬೆಳೆದಿರುವ ಚೆಂಡು ಹೂವಿಗೆ ಬೇಡಿಕೆ ಹೆಚ್ಚಿದೆ.

ಸೇವಂತಿ ಹಾಗೂ ಚೆಂಡು ಹೂ ಹಬ್ಬದ ಪ್ರಮುಖ ಆಕರ್ಷಣೆಯಾಗಿದ್ದು, ವಾಹನ, ಆಯುಧಗಳನ್ನು ಅಲಂಕರಿಸಲು ಚೆಂಡು ಹೂಗೆ ಭರ್ಜರಿ ಬೇಡಿಕೆ ಇರುತ್ತದೆ. ಸೇವಂತಿ ಹೂವಿಗೆ ಹೋಲಿಸಿದರೆ ಚೆಂಡು ಹೂವು ತುಸು ಅಗ್ಗ. ಇದನ್ನ ರಿತ ಆಚೇಪಲ್ಲಿ ಚಂದ್ರಪ್ಪ ರೈತರು ಹಬ್ಬದ ಸಂದರ್ಭದಲ್ಲಿ ದ್ವಿಗುಣ ಲಾಭ ಗಳಿಸಲು ಚೆಂಡು ಹೂ ಬೆಳೆಸಿದ್ದಾರೆ.

ಕೇವಲ 60 ದಿನಗಳಲ್ಲಿ ಸಸಿಗಳು ಬೆಳೆದು ಭರ್ಜರಿ ಹೂಗಳಿಂದ ಕಂಗೊಳಿಸುತ್ತವೆ. ಹಬ್ಬಗಳನ್ನು ಗಮನದಲ್ಲಿರಿಸಿ ಕೊಂಡು ಚೆಂಡು ಹೂ ಸಸಿಗಳನ್ನು ನಾಟಿ ಮಾಡಿದ್ದೆವು. ಕೊಳವೆ ಬಾವಿ, ನೀರಾವರಿ ಸೌಲಭ್ಯವಿರುವ ರೈತರು ಅಲ್ಪ ನೀರಿನಲ್ಲಿಯೂ ಚೆಂಡು ಹೂ ಬೆಳೆಯಬಹುದು. ನರ್ಸರಿಗಳಲ್ಲಿ ಒಂದಕ್ಕೆ ? 3 ರಂತೆ ಸಸಿಗಳನ್ನು ತಂದು ನಾಟಿ ಮಾಡಿದ್ದೆವು. 30 ದಿನಗಳಲ್ಲಿಯೇ ಹೂ ಬಿಡಲು ಆರಂಭವಾಗಿದೆ’ ಎಂದು  ತಿಳಿಸಿದರು.

ಬಾಗೇಪಲ್ಲಿ ತಾಲ್ಲೂಕು ಬರಗಾಲದ ಬರಡು ಭೂಮಿಯಲ್ಲಿ ಕಡಿಮೆ ಖರ್ಚು ಅಂದರೆ  ಚಿಕ್ಕಬಳ್ಳಾಪುರ, ಬೆಂಗಳೂರು ಹಾಗೂ ಹೈದರಾಬಾದ್ ಅತಿ ದೊಡ್ಡ ಮಾರ್ಕೆಟಗೆ ಚಂಡು ಹಾಗೂ ಸೇವಂತಿಗೆ ಸಾಗಿಸಿ ಹಾಗೂ ಹೂ ಕೀಳಲು ಕೂಲಿ ಮಹಿಳೆಯರಿಗೆ 300 ರಿಂದ 400 ಕೊಡಬೇಕು. ಹೈದರಾಬಾದ್ ಮಾರುಕಟ್ಟೆ ಯಲ್ಲಿ 1 ಕೆ.ಜಿ.ಗೆ 40 ರಿಂದ 50 ರ ವರೆಗೆ ಮಾರಾಟ ಆಗುತ್ತದೆ. ಅಂದರೆ ಒಂದು ತಿಂಗಳಲ್ಲಿ ಒಂದು ಟನ್  ಚಂಡು ಹಾಗೂ ಸಂಪಿಗೆ ಹೂ ಹೈದರಾಬಾದ್ ಹೂವಿನ ಮಾರುಕಟ್ಟೆಯಲ್ಲಿ 30 ರಿಂದ 40 ಸಾವಿರ ಲಾಭ ಸಿಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಪುಷ್ಪಭಾಷೆ: ಹೂವುಗಳ ಮೂಲಕ ಭಾವಗಳ ಸಂವಹನ