ತರಬೇತಿ ಪಡೆದ ಬೀದಿಬದಿ ವ್ಯಾಪಾರಿಗಳಿಗೆ ತರಬೇತಿ ಪ್ರಮಾಣಪತ್ರ ವಿತರಿಸಿದ ನಗರಸಭೆ
ಚಿಕ್ಕಬಳ್ಳಾಪುರ : ನಗರದ ರಸ್ತೆ ಬದಿಗಳಲ್ಲಿ ತಳ್ಳುಗಾಡಿಗಳಲ್ಲಿ ಆಹಾರ ತಯಾರಿಸಿ ವ್ಯಾಪಾರ ಮಾಡುತ್ತಿದ್ದ ಮಾರಾಟಗಾರರರಿಗೆ ಸೂಕ್ತ ತರಬೇತಿ ನೀಡಿ ಕಾನೂನುಬದ್ಧವಾಗಿ ಜೀವನನಡೆಸಲು ಅವಕಾಶ ಮಾಡಿಕೊಡಲು ಮುಂದಾಗಿರುವ ನಗರಸಭೆ 50 ಮಂದಿಗೆ ತರಬೇತಿ ನೀಡಿತ್ತು.ಆಹಾರ ತಯಾರಿಕೆಯ ತರಬೇತಿ ಪಡೆದಿದ್ದವರಿಗೆ ಅಧ್ಯಕ್ಷ ಗಜೇಂದ್ರ ಮತ್ತು ಉಪಾಧ್ಯಕ್ಷ ನಾಗರಾಜ್ ಜೆ ಪ್ರಮಾಣ ಪತ್ರಗಳನ್ನು ವಿತರಿಸಿದರು.
ನಗರದ ಬೀದಿ ಬದಿ ಬದಿಯಲ್ಲಿ ಇಡ್ಲಿ, ದೋಸೆ, ಕಬಾಬ್, ಪಾನಿಪೂರಿ ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ತಯಾರಿಸಿ ತಳ್ಳುವ ಗಾಡಿಗಳಲ್ಲಿ ಇಟ್ಟಿಕೊಂಡು ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ ವ್ಯಾಪಾರಿಗಳಿಗೆ ಈ ಹಿಂದೆಯೇ ತರಬೇತಿ ನೀಡಲಾಗಿತ್ತು.ಪ್ರಮಾಣ ಪತ್ರಗಳನ್ನು ವಿತರಣೆ ಮಾಡಿರಲಿಲ್ಲ. ಸುಮಾರು 50ಕ್ಕೂ ಹೆಚ್ಚು ವ್ಯಾಪಾರಿಗಳಿಗೆ ನಗರಸಭೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಅಧ್ಯಕ್ಷ ಗಜೇಂದ್ರ, ವ್ಯಾಪಾರಿಗಳು ಆಹಾರ ಸುರಕ್ಷತೆ ಬಗ್ಗೆ ತರಬೇತಿ ಯನ್ನು ಈಗಾಗಲೇ ಪಡೆದಿದ್ದು, ಅವರೆಲ್ಲರೂ ಸುರಕ್ಷತಾ ನಿಯಮಗಳನ್ನು ಪಾಲಿಸಿ, ವ್ಯಾಪಾರ ವಹಿವಾಟು ನಡೆಸುವಂತೆ ಕೋರಿದರು.
ನಗರಸಭೆ ಉಪಾಧ್ಯಕ್ಷ ನಾಗರಾಜ್ ಮಾತನಾಡಿ,ಬೀದಿ ಬದಿ ವ್ಯಾಪಾರಿಗಳಿಗೆ ತೊಂದರೆಯಾಗದ0ತೆ ಇರಲೆಂದು ಪ್ರಮಾಣಪತ್ರಗಳನ್ನು ವಿತರಿಸಲಾಗಿದೆ. ವ್ಯಾಪಾರಿಗಳೂ ಕೂಡ ಗ್ರಾಹಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸುರಕ್ಷತಾ ಮಾನದಂಡಗಳ0ತೆ ವ್ಯಾಪಾರ ಮಾಡಬೇಕು. ನಿಮ್ಮ ಆಹಾರ ಚೆನ್ನಾಗಿದ್ದರೆ ಗ್ರಾಹಕರ ಆರೋಗ್ಯ ಚೆನ್ನಾಗಿರಲಿದೆ. ಗ್ರಾಹಕರು ಆರೋಗ್ಯವಾಗಿದ್ದರೆ ನಿಮ್ಮ ವ್ಯಾಪಾರವೂ ಚೆನ್ನಾಗಿರಲಿದೆ. ಅಪಾಯಕಾರಿ ರಾಸಾಯನಿಕ ಬಳಕೆ,ಕಡಿಮೆ ಬೆಲೆಯ ಎಣ್ಣೆ, ಜಿಡ್ಡುಪದಾರ್ಥಗಳನ್ನು ಬಳಸದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಯತೀಶ್ ಹನುಮಂತಪ್ಪ ಮುಖಂಡ ಸಂತೋಷ್ ಉಪಸ್ಥಿತರಿದ್ದರು.
ಇದನ್ನೂ ಓದಿ: Chikkaballapur News: ನ.24 ರಂದು ಆದಿಕವಿ, ವಾಗ್ದೇವಿ ಪುರಸ್ಕಾರ ಪ್ರದಾನ ಸಮಾರಂಭ