Sunday, 15th December 2024

Chikkaballapur News: ನ.24 ರಂದು ಆದಿಕವಿ, ವಾಗ್ದೇವಿ ಪುರಸ್ಕಾರ ಪ್ರದಾನ ಸಮಾರಂಭ

Chikkaballapur News

ಚಿಕ್ಕಬಳ್ಳಾಪುರ: ಅಖಿಲ ಭಾರತೀಯ ಸಾಹಿತ್ಯ ಪರಿಷದ್‌, ರಾಜ್ಯ ಘಟಕದ ವತಿಯಿಂದ ಜಿಲ್ಲೆಯ (Chikkaballapur News) ಚಿಂತಾಮಣಿ ತಾಲೂಕಿನ ಶ್ರೀಕ್ಷೇತ್ರ ಕೈವಾರದಲ್ಲಿ ನವೆಂಬರ್‌ 24 ರಂದು ಭಾನುವಾರ ಬೆಳಗ್ಗೆ 10.30ಕ್ಕೆ ಆದಿಕವಿ ಮತ್ತು ವಾಗ್ದೇವಿ ಪುರಸ್ಕಾರ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ. 2024 ನೇ ಸಾಲಿನ ಆದಿಕವಿ ಪುರಸ್ಕಾರಕ್ಕೆ ವೇದ ವಿದ್ವಾಂಸ ಹಾಗೂ ಸಾಹಿತಿ ವಿಷ್ಣುಭಟ್‌ ಡೋಂಗ್ರೆ ಮತ್ತು 2024 ನೇ ಸಾಲಿನ ವಾಗ್ದೇವಿ ಪುರಸ್ಕಾರಕ್ಕೆ ಕಾದಂಬರಿಕಾರ, ಸಂಶೋಧಕ ಡಾ.ಜಿ.ಬಿ. ಹರೀಶ್‌ ಅವರು ಆಯ್ಕೆಯಾಗಿದ್ದಾರೆ.

ಈ ಸುದ್ದಿಯನ್ನೂ ಓದಿ | Bengaluru Airport: ಬೆಂಗಳೂರಿನಿಂದ ಇನ್ನು 5 ನಿಮಿಷದಲ್ಲಿ ದೇವನಹಳ್ಳಿ ಏರ್‌ಪೋರ್ಟ್‌ ತಲುಪಿ!

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಕ್ಷೇತ್ರ ಕೈವಾರ ಧರ್ಮಾಧಿಕಾರಿ ಡಾ.ಎಂ.ಆರ್‌. ಜಯರಾಮ್‌ ವಹಿಸುವರು. ಮುಖ್ಯ ವಕ್ತಾರರಾಗಿ ದಿವಾಕರ ಹೆಗಡೆ ಕೆರೆಹೊಂಡ ಪಾಲ್ಗೊಳ್ಳುವರು. ಅ.ಭಾ.ಸ.ಪ. ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್‌ ನರೂರ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.

ಈ ಸುದ್ದಿಯನ್ನೂ ಓದಿ | Job News: ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ, ಅಭಿವೃದ್ಧಿ ಸಂಸ್ಥೆಯಲ್ಲಿ ಉದ್ಯೋಗ; ಅರ್ಜಿ ಆಹ್ವಾನ

ಸಾಮಾಜಿಕ ಕಳಕಳಿ ಹಾಗೂ ರಾಷ್ಟ್ರೀಯ ದೃಷ್ಟಿಕೋನವುಳ್ಳ ಹಿರಿಯ ಸಾಹಿತ್ಯ ಸಾಧಕರಿಗೆ ಆದಿಕವಿ ಪುರಸ್ಕಾರವನ್ನೂ, ಕಿರಿಯ ಸಾಹಿತ್ಯ ಸಾಧಕರಿಗೆ ವಾಗ್ದೇವಿ ಪುರಸ್ಕಾರವನ್ನು ಪ್ರತಿವರ್ಷವೂ ನೀಡಲಾಗುತ್ತಿದೆ. ಉದ್ಯಮಿ ಎಸ್‌. ಜಯರಾಮ ಅವರು ಆದಿಕವಿ ಪ್ರಶಸ್ತಿಯ ಪ್ರಾಯೋಜಕರು ಹಾಗೂ ಇಸ್ರೋದ ನಿವೃತ್ತ ವಿಜ್ಞಾನಿ ಕೆ. ಹರೀಶ್‌ ವಾಗ್ದೇವಿ ಪ್ರಶಸ್ತಿಯ ಪ್ರಾಯೋಜಕರಾಗಿದ್ದಾರೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ರಾಜ್ಯ ಘಟಕದ ಅಧ್ಯಕ್ಷ ನಾ. ಮೊಗಸಾಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.