Tuesday, 26th November 2024

ಜಾತಿ -ಧರ್ಮಗಳ ನಡುವೆ ವೈಷಮ್ಯ ಬಿತ್ತುವುದೇ ಮಾಜಿ ಮುಖ್ಯಮಂತ್ರಿ ಧ್ಯೇಯ

ಮಧುಗಿರಿ: ಜಾತಿ ಮತ್ತು ಧರ್ಮಗಳ ನಡುವೆ ವೈಷಮ್ಯ ಬಿತ್ತುವುದೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧ್ಯೇಯ ವಾಗಿದೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರು ಅಶ್ವಥ್ ನಾರಾಯಣ ಗೌಡ ತಿಳಿಸಿದರು.

ಪಟ್ಟಣದ ಒಕ್ಕಲಿಗ ಸಮುದಾಯ ಭವನ ಆವರಣದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಜನೋತ್ಸವ ಸಮಾವೇಶದ ಪೂರ್ವ ಸಿದ್ಧತ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಒಂದು ಕಡೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಭಿವೃದ್ದಿಗೆ ಪೂರಕವಾದ ಯೋಜನೆಗಳನ್ನು ರೂಪಿಸುತ್ತಿದ್ದರೆ. ಮತ್ತೊಂದು ವಿರೋಧ ಪಕ್ಷದ ನಾಯಕ ನಮ್ಮ ಸರ್ಕಾರದ ವಿರುದ್ದ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿರುವುದು ಖಂಡನೀಯ. ಕಾಂಗ್ರೇಸ್ ಅವರು ಸಿದ್ದರಾಮಯ್ಯ ಮಹೋತ್ಸವ ಮಾಡುವ ಮೂಲಕ ವ್ಯಕ್ತಿ ಪೂಜೆ ಮಾಡುತ್ತಿದ್ದರೆ ನಾವು ಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ಸಾರ್ವಭೌಮತ್ವ ಎತ್ತಿ ಹಿಡಿಯುತ್ತಿದ್ದೇವೆ ಎಂದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕೋವಿಡ್ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ಭಾಗ್ಯಲಕ್ಷಿö್ಮ, ವಿಧ್ಯಾಸಿರಿಯಂತಹ ಉತ್ತಮ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರು ಎಂದರು.

ಶಾಸಕ ರಾಜೇಶ್ ಗೌಡ ಮಾತನಾಡಿ, ಬಿಜೆಪಿ ಸರ್ಕಾರ ಸಾಧನೆಯಲ್ಲಿ ಸಾರ್ಥಕತೆಯನ್ನು ಕಂಡುಕೊAಡಿದ್ದು, ಜನತೆ ನಮ್ಮ ಸರ್ಕಾರ ಯೋಜನೆಗಳನ್ನು ಒಪ್ಪಿಕೊಂಡಿದ್ದಾರೆ. ಮೋದಿಯವರ ರಾಷ್ಟ್ರವಾದ ಚಿಂತನೆ ಗೆ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿದ್ದು, ದೊಡ್ಡಬಳ್ಳಾಪುರದಲ್ಲಿ ನಡೆಯುವ ಜನೋತ್ಸವ ಕಾರ್ಯಕ್ರಮದಲ್ಲಿ ಮುಂದಿನ ಚುನಾವಣೆಯ ರಣಕಹಳೆ ಮೊಳಗಿಸುತ್ತೇವೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿಕೆ ಮಂಜುನಾಥ್ ಮಾತನಾಡಿ, ಕಾರ್ಯಕರ್ತರಿಗೆ ಯಾವಾಗಲು ಮೊದಲ ಪ್ರಾಶಾಸ್ತ್ರ ನೀಡುವ ಪಕ್ಷ ಎಂದರೆ ಅದು ಬಿಜೆಪಿ ಮಾತ್ರ, ಜಿಲ್ಲೆಯಲ್ಲಿ ಈ ಬಾರಿ ಕಾರ್ಯಕರ್ತರ ಶ್ರಮದಿಂದ ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ನಮ್ಮ ಸರ್ಕಾರ ಅಧಿಕಾರ ಹಿಡಿಯಲಿದ್ದು, ಕಾರ್ಯಕರ್ತರು ಸರ್ಕಾರ ಅನುಷ್ಠಾನ ಗೊಳಿಸಿರುವ ಯೋಜನೆಗಳ ಬಗ್ಗೆ ಜನತೆಗೆ ಮನದಟ್ಟು ಮಾಡಿಕೊಡಬೇಕಾಗಿದೆ ಎಂದ ಅವರು, ಜನೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವಂತೆ ಕರೆ ಕೊಟ್ಟರು.

ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ, ರಾಜ್ಯ ವಕ್ತಾರರಾದ ಮೋಹನ್ ವಿಶ್ವ, ಜಿಲ್ಲಾ ಪ್ರಭಾರಿ ವಿಕಾಸ್ ಪುತ್ತೂರು, ಮಾಜಿ ಶಾಸಕ ಗಂಗಹನುಮಯ್ಯ, ಜಿಲ್ಲಾ ಪ್ರದಾನ ಕಾರ್ಯದಶ್ರೀಗಳಾದ ಪಾವಗಡ ರವಿ, ಜಯಣ್ಣ, ಮಂಡಲ ಅಧ್ಯಕ್ಷರುಗಳಾದ ಪಿ.ಎಲ್.ನರಸಿಂಹಮೂರ್ತಿ, ವಿಜಯರಾಜ್, ಪವನ್, ಪದಾಧಿಕಾರಿಗಳಾದ ಸುರೇಶ್, ಸೀತಾರಾಮ್, ಕಂಬದ ರಂಗಪ್ಪ, ನಾಗೇಂದ್ರ, ಕಾರ್ತಿಕ್ ಆರಾಧ್ಯ, ಆದಿಶೇಷ ಗುಪ್ತ ಹಾಗೂ ಮತ್ತಿತರರು ಇದ್ದರು.