ಮಧುಗಿರಿ: ವಿದ್ಯಾರ್ಥಿ ಜೀವನದಲ್ಲಿ ಯಾವುದೋ ಆಕರ್ಷಣೆಗೊಳಗಾಗಿ ನಿಮ್ಮ ಬದುಕಿನ ಭವಿಷ್ಯವನ್ನು ಹಾಳು ಮಾಡಿ ಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ವಕೀಲ ಡಿ.ಪಿ. ನರಸಿಂಹಮೂರ್ತಿ ಕಿವಿಮಾತು ಹೇಳಿದರು.
ತಾಲೂಕಿನ ಪುರವರ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಮಧುಗಿರಿ ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವಿನ ಮೂಲಕ ನಾಗರೀಕರ ಸಬಲೀಕರಣ ಅಭಿಯಾನ ಕಾರ್ಯಕ್ರಮವನ್ನು ವಕೀಲ ಡಿ.ಪಿ.ನರಸಿಂಹಮೂರ್ತಿ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣ ಕಲಿಯುವ ವೇಳೆ ಹೆಣ್ಣು ಮಕ್ಕಳಾಗಲಿ ಗಂಡು ಮಕ್ಕಳಾಗಲಿ ಕೆಲವು ಆಕರ್ಷಣೆಗೆ ಒಳಗಾಗಿ ಆತುರದ ನಿರ್ಧಾರಗಳಿಂದ ನಿಮ್ಮ ಬದುಕಿನ ಸುಂದರ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ ಯಾಕೆಂದರೆ ನಿಮಗೆ ಕಾನೂನಿನ ಬಗ್ಗೆ ಅರಿವಿಲ್ಲದೆ ಮಾಡುವ ಕೆಲ ಘಟನೆಗಳಿಂದ ನೀವು ತೊಂದರೆಗೆ ಸಿಲುಕುತ್ತೀರಿ ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ಇದರಲ್ಲಿ ಇಬ್ಬರಿಗೂ ಸಹ ಶಿಕ್ಷೆ ಇರುತ್ತದೆ ಎಂದು ಬಾಲ್ಯ ವಿವಾಹದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿದರು.
ಸಿ ಡಿ ಪಿ ಓ ಇಲಾಖೆಯ ಮೇಲ್ವಿಚಾರಕಿ ರಜನಿ ಹಿರೇಮಠ್ ಮಾತನಾಡಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಕಾನೂನಿನ ಬಗ್ಗೆ ತಿಳಿಯುವ ಮೂಲಕ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕಾಗಿದೆ ಮಹಿಳೆಯರ ಮೇಲೆ ಮಕ್ಕಳ ಮೇಲೆ ದೌರ್ಜನ್ಯಗಳು ಕಡಿಮೆ ಯಾಗಬೇಕೆಂದರೆ ಮೊದಲು ಕಾನೂನಿನ ಬಗ್ಗೆ ತಿಳಿಯುವ ಅವಶ್ಯಕತೆ ಇದ್ದು ಬಾಲ್ಯ ವಿವಾಹಗಳಿಂದ ಪೋಷಕರಿಗೂ ಸಹ ತೊಂದರೆಯಾಗುತ್ತದೆ ಇಂತಹ ಆಚರಣೆಗಳನ್ನು ನಿಲ್ಲಿಸಬೇಕು ಶಾಲಾ ಹಂತದಲ್ಲೇ ಮಕ್ಕಳಿಗೆ ಈ ವಿಚಾರಗಳ ಬಗ್ಗೆ ತಿಳಿಸಿ ಕೊಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಜಯಲಕ್ಷ್ಮಮ್ಮ, ಕಂದಾಯಾಧಿಕಾರಿ ಜಯರಾಮಯ್ಯ, ಪಿಡಿಒ ಪುಂಡಲಿಕ ,ಕಾರ್ಯದರ್ಶಿ ಶಿವಕುಮಾರ್, ಪ್ರಾಂಶುಪಾಲ ತಿಮ್ಮಯ್ಯ ,ಮುಖ್ಯ ಶಿಕ್ಷಕಿ ನಾಗಮ್ಮ, ಪಿ ಎಲ್ ವಿ ಗಳಾದ ಪಿ ಬಿ ಕಲ್ಯಾಣಮ್ಮ, ಇ.ಲೀಲಾವತಿ ,ಅಂಗನವಾಡಿ ಕಾರ್ಯಕರ್ತೆ ಮಾಲಿನಿ, ಗ್ರಾಮಲೆಕ್ಕಿಗರಾದ ಶಿವರಾಮಯ್ಯ, ನಟರಾಜು, ಶ್ರೀಧರ್, ಹಾಗೂ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.