ಜಯಕರ್ನಾಟಕ ಜನಪರ ವೇದಿಕೆಯಿಂದ ೧೭೬ನೇ ಬೃಹತ್ ಉಚಿತ ಆರೋಗ್ಯ ಶಿಬಿರ
ತಿಪಟೂರು: ಪ್ರಸ್ತುತ ಸಂದರ್ಭದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೊಂದಿರುವ ವ್ಯಕ್ತಿಗಳೆ ಭಾಗ್ಯಶಾಲಿಗಳೆಂದು ಮಾಜಿ ಶಾಸಕ ಕೆ.ಷಡಕ್ಷರಿ ತಿಳಿಸಿದರು.
ತಾಲ್ಲೂಕಿನ ಮಣಕೀಕೆರೆ ಗ್ರಾಮದ ಶ್ರೀಕರಿಯಮ್ಮದೇವಿ ಕಲ್ಯಾಣ ಮಂಟಪದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಸಪ್ತಗಿರಿ ಆಸ್ಪತ್ರೆ ಬೆಂಗಳೂರು, ಜ್ಯೋತಿ ನೇತ್ರಾಲಯ ತಿಪಟೂರು ಮತ್ತು ಸತ್ಯಕುಮಾರ್ ರಿಲೀಫ್ ಪೌಂಡೇಷನ್ ಇವರ ಸಹಯೋಗದೊಂದಿಗೆ ಜಯಕರ್ನಾಟಕ ಜನಪರ ವೇದಿಕೆಯ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ೧೭೬ನೇ ಉಚಿತ ಬೃಹತ್ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿನ ಜನರು ನಗರ ಪ್ರದೇಶದ ಜನರಿಗೆ ಹೋಲಿಸಿದರೆ ಹೆಚ್ಚು ನೆಮ್ಮದಿಯಿಂದ ಕೂಡಿರುತ್ತಾರೆ.
ಗ್ರಾಮೀಣ ಭಾಗದಲ್ಲಿ ಸಣ್ಣಪುಟ್ಟ ದೈಹಿಕ ಖಾಯಿಲೆ ಗಳು ಬಿಟ್ಟರೆ ಗಮನಾರ್ಹವಾದ ಮಾನಸಿಕ ಖಾಯಿಲೆಗಳು ತುಂಬಾ ಅಪರೂಪ. ನಗರ ಪ್ರದೇಶದಲ್ಲಿ ಹಣದ ಆಮಿಷಕ್ಕೆ ಒಳಗಾಗುವ ಜನರು ದೈಹಿಕ ಮತ್ತು ಮಾನಸಿಕ ನೆಮ್ಮದಿಗಳನ್ನು ಕಳೆದುಕೊಳ್ಳುತ್ತಿದ್ದಾರೆ. ವಿದ್ಯಾಭ್ಯಾಸ ಪಡೆದಿರುವವರೇ ಇಂತಹ ಆಸೆಗಳಿಗೆ ಒಳಗಾಗಿ ನೆಮ್ಮದಿಯನ್ನು ಕಳೆದುಕೊಳ್ಳು ತ್ತಿರುವುದು ಕಳವಳಕಾರಿ ಎಂದರು.
ಗ್ರಾಪಂ ಅಧ್ಯಕ್ಷ ಎಂ.ಡಿ.ಮ0ಜುನಾಥ್ ಮಾತನಾಡಿ, ಆರೋಗ್ಯ ಎನ್ನುವುದು ಬೆಲೆಬಾಳುವ ವಸ್ತುವಾಗಿಬಿಟ್ಟಿದೆ. ಅಂದಿನ ಕಾಲದಲ್ಲಿ ಎಲ್ಲರಬಳಿಯೂ ಇದ್ದ ಆರೋಗ್ಯ ಇಂದು ಯಾರಬಳಿಯಿದೆ ಎಂದು ಹುಡುಕುವ ಪರಿಸ್ಥಿತಿ ಗ್ರಾಮೀಣ ಪ್ರದೇಶಗಳಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಆರೋಗ್ಯ ದುಬಾರಿ ಯಾಗಿರುವ ಕಾಲಘಟ್ಟದಲ್ಲಿ ಇಂತಹ ಶಿಬಿರಗಳು ಹೆಚ್ಚು ನಡೆಯಬೇಕು, ಗ್ರಾಮೀಣ ಭಾಗದ ಜನರು ಇದರ ಅನುಕೂಲತೆಗಳನ್ನು ಪಡೆದುಕೊಳ್ಳ ಬೇಕೆಂದು ತಿಳಿಸಿದರು.
ತಾಪಂ ಮಾಜಿ ಸದಸ್ಯ ಎಚ್.ಡಿ. ರವಿಕುಮಾರ್ ಮಾತನಾಡಿ, ಬಡವರ್ಗದ ಜನರು ಕನಿಷ್ಟ ಆರೋಗ್ಯ ಸವಲತ್ತು ಗಳನ್ನು ಪಡೆಯದೇ ಅಸುನೀಗುತ್ತಿದ್ದಾರೆ. ಇಂದಿನ ಸಂದರ್ಭದಲ್ಲಿ ಆರೋಗ್ಯ ಎನ್ನುವುದು ಶ್ರೀಮಂತರಿಗಷ್ಠೇ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಗೆ ತೆರಳಿದರೆ ಸಾವಿರಾರು ರೂಗಳ ವ್ಯಯವಾಗುವುದರಿಂದ ಅತಿಸಾಮಾನ್ಯರು ಆಸ್ಪತ್ರೆಯ ಸೌಲಭ್ಯದಿಂದ ದೂರವೇ ಉಳಿಯಲಿದ್ದಾರೆ, ಇಂತಹ ಜನರಿಗೆ ಆರೋಗ್ಯ ಶಿಬಿರ ಗಳು ವರದಾನವೆಂದರು.
ಶಿಬಿರದ ಆಯೋಜಕ ಹಾಗೂ ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಬಿ.ಟಿ.ಕುಮಾರ್, ಗ್ರಾಪಂ ಉಪಾಧ್ಯಕ್ಷ ಶಿವಕುಮಾರ್, ಪಿಡಿಓ ಮಂಜೂಷ ಕೆ.ಎಂ. ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಬಿ.ಬಿ.ಬಸವರಾಜು, ಕಾಂಗ್ರೆಸ್ ಅಧ್ಯಕ್ಷ ಮಡೇನೂರು ಕಾಂತರಾಜು ಮುಖಂಡರಾದ ಸ್ವಾಮಿ, ಅನ್ವರ್ ಪಾಷ, ಗ್ರಾಪಂ ಸದಸ್ಯರಾದ ಹರೀಶ್, ಮಂಜುಳಮ್ಮ, ರವೀಶ್, ಬಸವರಾಜು, ಮಾಜಿ ಗ್ರಾಪಂ ಸದಸ್ಯ ಅಮರ್ ಸಿಂಗ್, ದೇವಸ್ಥಾನದ ಧರ್ಮದರ್ಶಿ ಅಶೋಕ್, ರಂಗ ಸ್ವಾಮಿ, ಗ್ರಂಥಪಾಲಕ ಮೂರ್ತಿ, ದೈಹಿಕ ಶಿಕ್ಷಕ ಪ್ರಕಾಶ್, ಸಂಘಟನೆಯ ಪದಾಧಿಕಾರಿಗಳಾದ ರವಿ, ಅನಿಲ್, ಚೇತನ್, ಕೃಷ್ಣಮೂರ್ತಿ, ನಾಗರಾಜು, ಶಂಕರಪ್ಪ, ವೈದ್ಯಾಧಿಕಾರಿ ಸುದರ್ಶನ್, ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ವರ್ಗ, ಸಂಘಟನೆಯ ಪದಾಧಿಕಾರಿಗಳು, ಮುಖಂಡರು, ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.
ಶಿಬಿರದಲ್ಲಿ ಸುಮಾರು ೩೫೦ ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪ್ರಯೋಜನವನ್ನು ಪಡೆದುಕೊಂಡರು.