ಚಿಕ್ಕಬಳ್ಳಾಪುರ : ಗುಡಿಬಂಡೆ ತಾಲೂಕು ಹಂಪಸAದ್ರ ಸರಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಹರೀಶ್ ರಾಜ್ ಅರಸ್ ಅವರಿಗೆ ಸರಕಾರ ನೀಡುವ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ೨೦೨೪-೨೫ನೇ ಸಾಲಿನ ಪ್ರೌಢಶಾಲೆ ವಿಭಾಗದಲ್ಲಿ ಬಂದಿದೆ.
ಜಿಲ್ಲೆಯ ಗುಡಿಬಂಡೆ ತಾಲೂಕು ಹಂಪಸAದ್ರದ ಸರಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸು ತ್ತಿರುವ ಹರೀಶ್ ರಾಜ್ ಅರಸ್ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ೨/೦೫/೨೦೦೭ರಲ್ಲಿ ಸೇವೆಗೆ ಸೇರಿದ್ದು ೧೭ ವರ್ಷ ಗಳ ಸೇವಾ ಹಿರಿತನ ಹೊಂದಿದ್ದಾರೆ.
ಗ್ರಾಮೀಣ ಭಾಗದ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ವಿಜ್ಞಾನ ವಿಷಯದ ಬಗ್ಗೆ ಇರುವ ಭಯವನ್ನು ದೂರಮಾಡಿ ಅವರಲ್ಲಿ ಏನಾದರೂ ಹೊಸತನ್ನು ಸೃಷ್ಟಿಸುವ ಹಂಬಲ ತರುವಲ್ಲಿ ಶ್ರಮಿಸಿದ ಇವರು ೧೦ಕ್ಕೂ ಹೆಚ್ಚು ಬಾರಿ ಹಂಪಸAದ್ರ ಶಾಲೆಯ ವಿದ್ಯಾರ್ಥಿಗಳ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗಿಯಾಗುವಂತೆ ಮಾಡಿದ್ದಾರೆ.
೨೦೨೪ರ ಜನವರಿಯಲ್ಲಿ ನಡೆದ ದಕ್ಷಿಣ ಭಾರತ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಶಿಕ್ಷಕರ ವಿಭಾಗದಲ್ಲಿ ಅನಿಲಗಳ ಅಮಾನೀಕರಣ ಎಂಬ ವಿಷಯದಲ್ಲಿ ಪ್ರದರ್ಶಿಸಿದ ಮಾದರಿಗೆ ಮೊದಲ ಸ್ಥಾನ ದೊರೆತಿರುವುದು ಇವರ ಸಾಧನೆ.೪ ಬಾರಿ ಇದೇ ದಕ್ಷಿಣ ಭಾರತ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರಶಸ್ತಿ ಪಡೆದಿದ್ದಾರೆ,
ಹಂಪಸAದ್ರ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರ ನೆರವಿನಿಂದ ಮಾದರಿ ವಿಜ್ಞಾನ ಪ್ರಯೋಗಾಲಯ ಸ್ಥಾಪಿಸಿ ವಿದ್ಯಾರ್ಥಿಗಳಲ್ಲಿ ಪ್ರಯೋಗಾತ್ಮಕ ಮನೋಭಾವ ಹುಟ್ಟುಹಾಕಿದ್ದಾರೆ. ಬೋಧನೆಯನ್ನು ಪ್ರಾಯೋಗಿಕವಾಗಿ ಮಾಡಿ ವಿಜ್ಞಾನ ವಿಷಯ ಕಠಿಣ ಅಲ್ಲ ಎಂಬುದನ್ನು ಮಕ್ಕಳಿಗೆ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ಮಟ್ಟದ ವಿಜ್ಞಾನ ವಿಷಯದ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ಶಿಕ್ಷಕರಾಗಿ ಕಾರ್ಯನಿರ್ವಹಣೆ,ಲೋ ಕಾಸ್ಟ್ ನೋಕಾಸ್ಟ್ ವಸ್ತುಗಳಿಂದ ಮಾದರಿಗಳನ್ನು ಮಕ್ಕಳಿಂದಲೇ ಮಾಡಿಸುತ್ತಿದ್ದಾರೆ.
ಬಹುಮುಖ ಪ್ರತಿಭೆಯ ಹರೀಶ್ ರಾಜ್ ಅರಸ್‌ಗೆ ರಾಜ್ಯಮಟ್ಟದ ಪ್ರಶಸ್ತಿ ಒಲಿದು ಬಂದಂತೆ ರಾಷ್ಟ್ರೀಯ ಪ್ರಶಸ್ತಿಗಳು ಒಲಿದು ಬರಲಿ,ಆಮೂಲಕ ಸಾಧಿಸುವ ಛಲ ಬತ್ತದಿರಲಿ ಎಂದು ಪತ್ರಿಕೆ ಹಾರೈಸುತ್ತದೆ.