ಚಿಕ್ಕನಾಯಕನಹಳ್ಳಿ: ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಚೇರಿ ಉದ್ಘಾಟನೆ ಸೆ.9ರ ಸೋಮವಾರ ಮಧ್ಯಾಹ್ನ1 ಗಂಟೆಗೆ ತಾಲ್ಲೂಕು ಪಂಚಾಯತ್ ಆವರಣದಲ್ಲಿ ನಡೆಯಲಿದೆ.
ಕರ್ನಾಟಕ ರಾಜ್ಯ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಮತ್ತು ಮೇಲ್ವಿಚಾರಣೆ ಮಾಡಲು ಅನುಷ್ಠಾನ ಸಮಿತಿಯ ಮೂಲಕ ಬಡವರ ಕಲ್ಯಾಣ ಕೈಗೊಳ್ಳಲಾಗುವುದು. ಮತ್ತು ಉಪಾಧ್ಯಕ್ಷ ಹಾಗು ಸದಸ್ಯರುಗಳ ಅಧಿಕಾರ ಸ್ವೀಕಾರ ನಡೆಯಲಿದೆ ಎಂದು ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ತಿಳಿಸಿದರು.
ಈ ಸಮಿತಿಗೆ ಎರಡು ವರ್ಷಗಳ ಅವಧಿ ಇರಲಿದೆ. ಸಮಿತಿಗೆ ಗೌರವಧನ ಹಾಗು ಸಿಟ್ಟಿಂಗ್ ಫೀಸ್ ನೀಡಲಿದ್ದು ಈ ಮೊತ್ತವನ್ನು ರಾಜ್ಯ ಖಜಾನೆಯಿಂದ ಭರಿಸಲಾಗುವುದು ಎಂದು ತಿಳಿದುಬಂದಿದೆ.