Monday, 25th November 2024

ಜೆಡಿಎಸ್ ಪಕ್ಷವು ಐತಿಹಾಸಿಕ ದಾಖಲೆ ಬರೆಯುತ್ತದೆ

ಗುಬ್ಬಿ : ಈ ಬಾರಿ ಗುಬ್ಬಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವು ಐತಿಹಾಸಿಕ ದಾಖಲೆ ಬರೆಯುತ್ತದೆ ಎಂದು ಜೆಡಿಎಸ್ ಅಭ್ಯರ್ಥಿ ಬಿ ಎಸ್ ನಾಗರಾಜರವರು ತಿಳಿಸಿದರು.

ತಾಲೂಕಿನ ಮಾರ ಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನೆಮನೆ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜೆಡಿಎಸ್ ಪಕ್ಷಕ್ಕೆ ಮತದಾರರು ಹೆಚ್ಚು ಒಲವು ನೀಡುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳಲ್ಲಿ ಸುಮಾರು 20 ವರ್ಷಗಳಿಂದ ಪಕ್ಷ ಸಂಘಟನೆ ಮಾಡಿದವರಿಗೆ ಬೆಲೆ ನೀಡುತ್ತಿಲ್ಲ.
ತಾಲೂಕಿನ ಜನತೆಗೆ ಬರಿ ಕಾಲಹರಣ ಮಾಡುವ ವ್ಯಕ್ತಿಗಳು ಬೇಕಾಗಿಲ್ಲ ಜನಪರ ಕಾಯಕ ಮಾಡುವ ವ್ಯಕ್ತಿಗಳು ಈ ಕ್ಷೇತ್ರಕ್ಕೆ ಅಗತ್ಯವಾಗಿದೆ.  ಜಿಎನ್ ಬೆಟ್ಟಸ್ವಾಮಿ ಹಾಗೂ ಹೊನ್ನಗಿರಿ ಗೌಡರು ಜೆಡಿಎಸ್ ಪಕ್ಷಕ್ಕೆ ಬಂದಿರುವುದು ಆನೆ ಬಲ ಬಂದಂತಾಗಿದೆ ಹಾಗಾಗಿ ಈ ಬಾರಿ ತಮ್ಮ ಮನೆ ಮಗನೆಂದು ಮತದಾರರು ಹೆಚ್ಚು ಮತಗಳ ಅಂತರ ದಿಂದ ಜಯಶೀಲನ ನ್ನಾಗಿ ಮಾಡುತ್ತಾರೆ ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಜಿಎನ್ ಬೆಟ್ಟಸ್ವಾಮಿ ಮಾತನಾಡಿ ತಾಲೂಕಿನ ಎರಡನೇ ಪಂಚಾಯತಿ ವ್ಯಾಪ್ತಿಯಲ್ಲಿ ಮತಪ್ರಚಾರ ಕೈ ಗೊಂಡಿದ್ದೇವೆ. ಹಿಂದುಳಿದ ವರ್ಗ  ಸಮುದಾಯಕ್ಕೆ ರಾಷ್ಟ್ರೀಯ  ಪಕ್ಷಗಳು  ಮನ್ನಣೆ ನೀಡುತ್ತಿಲ್ಲ. ಧರ್ಮ ಅ  ಧರ್ಮಗಳ ಯುದ್ಧವೆಂದು ಕ್ಷೇತ್ರದ ಮತದಾರರು ಪರಿಗಣಿಸಿದ್ದಾರೆ. ಜಾತ್ಯಾತೀತ ಜನತಾದಳವು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಈ ಕ್ಷೇತ್ರವು ಜೆಡಿಎಸ್ ಭದ್ರಕೋಟೆ ಈ ಬಾರಿ ಅತಿ ಹೆಚ್ಚು ಮತಗಳ ಅಂತರದಿಂದ ಬಿಎಸ್ ನಾಗರಾಜು ಗೆಲ್ಲುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ  ಜಿಎನ್ ಬೆಟ್ಟಸ್ವಾಮಿ,  ಹೊನ್ನ ಗಿರಿಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್, ಹಿಂದುಳಿದ ವರ್ಗಗಳ ಯೋಜನಾ ಆಯೋಗದ ಮಾಜಿ ಸದಸ್ಯ ಯೋಗಾನಂದ ಕುಮಾರ್, ಗಂಗಸಂದ್ರ ಮಂಜುನಾಥ್ ಇತರರು ಇದ್ದರು.