ಕಲಬುರಗಿ: ದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಬೇಕಾಗಿದೆ. ನೆರೆ ರಾಷ್ಟ್ರಗಳ ಜತೆಗೆ ಶಾಂತಿಯ ಸಂಬಂಧ ಕಲ್ಪಿಸಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿ ಪ್ರೊ.ದಯಾನಂದ ಅಗಸರ್ ಹೇಳಿದರು.
ನಗರದಲ್ಲಿ ನಡೆದ “ವಾಕಥಾನ್” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಾಂತಿಯ ಸಂಬಂಧ ಗಟ್ಟಿ ಗೊಳಿಸುವ ಉದ್ದೇಶದಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕಲಬುರಗಿ ಜಿಲ್ಲಾ ಶಾಖೆಯ ವತಿಯಿಂದ ರೆಡ್ ಕ್ರಾಸ್ ನಡಿಗೆ ಮಾನವೀಯತೆ ಕಡೆಗೆ ಎಂಬ ಘೋಷ ವಾಕ್ಯದೊಂದಿಗೆ ಜಾಥಾ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದರು.
ಕಲಬುರಗಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ನಿಕಟ ಪೂರ್ವ ಸಭಾಪತಿ ಅಪ್ಪರಾವ್ ಅಕ್ಕೋಣೆ ಮಾತನಾಡಿ, ದೇಶದಲ್ಲಿ ಅಷ್ಟೇ ಅಲ್ಲ ಇಡೀ ವಿಶ್ವದಲ್ಲಿ ಶಾಂತಿ ನೆಲೆಸಬೇಕು. ಪ್ರತಿಯೊಬ್ಬರು ಸಹೋದರ ಭಾವ ಬೇಸುಗೆ ಆಗಬೇಕೆಂದು ಹೇಳಿದರು.
ವಾಕಥಾನ್ ನಡೆಗೆ ಜಗತ್ ವೃತ್ತದಿಂದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತ, ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ನಡೆಸಲಾಯಿತು.
ವಾಕಥಾನ್‌ದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಯುವ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ. ಬಸವ ರಾಜ ಸಣ್ಣಕ್ಕಿ, ರೆಡ್ ಕ್ರಾಸ್ ಜಿಲ್ಲಾ ಶಾಖೆಯ ಉಪ ಸಭಾಪತಿ ಭಾಗ್ಯಲಕ್ಷ್ಮೀ ಎಂ., ಗೌರವ ಕಾರ್ಯದರ್ಶಿ ರವೀಂದ್ರ ಶಾಬಾದಿ, ಖಜಾಂಚಿ ಜಿ. ಎಸ್. ಪದ್ಮಾಜಿ, ಜಿಲ್ಲಾ ಯುವ ರೆಡ್ ಕ್ರಾಸ್ ಸಂಚಾಲಕರು ಡಾ. ಪದ್ಮರಾಜ ರಾಸಣಗಿ, ಆಡಳಿತ ಮಂಡಳಿಯ ಸದಸ್ಯರಾದ ಸುರೇಶ ಬಡಿಗೇರ, ರಾಜೇ ಶಿವಶರಣಪ್ಪ, ವಿಶ್ವನಾಥ ಕೋರವಾರ, ಸಂಧ್ಯಾರಾಜ ಸಾಮ್ಯುವೆಲ್, ಡಾ. ಸೈಯದ್ ಸನಾವುಲ್ಲಾ, ಕಲ್ಯಾಣಕುಮಾರ ಶೀಲವಂತ, ಜೈಪ್ರಕಾಶ ಕಟ್ಟಿಮನಿ, ನೈನಾ ನವೀನ ಸೆಠೀಯಾ, ಸೈಯದ್ ನಿಜಾಮುದಿನ ಚಿಸ್ತಿ ಸೇರಿ ಸುಮಾರು 25 ಕಾಲೇಜುಗಳಿಂದ 3000 ವಿದ್ಯಾರ್ಥಿಗಳು ಭಾಗವಹಿಸಿ ದರು.
ಇದನ್ನೂ ಓದಿ: Bribe: 15 ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಸೆರೆ