Friday, 20th September 2024

ಹಂಜಗಿ ಗ್ರಾಮದ ಜನತೆಯ ಖುಣ ಜೀವನದ ಕೊನೆ ಉಸಿರು ಇರುವವೆಗೂ ಮರೆಯುವುದಿಲ್ಲ: ಯಶವಂತರಾಯಗೌಡ ಪಾಟೀಲ

ಇಂಡಿ: ಹಂಜಗಿ ಗ್ರಾಮ ನನ್ನ ರಾಜಕೀಯ ಜೀವನಕ್ಕೆ ಮುನ್ನಡೆಯೊಂದಿಗೆ ಭದ್ರಬುನಾದಿ ಹಾಕಿದ ಗ್ರಾಮವಾಗಿದ್ದು ಈ ಗ್ರಾಮದ ಜನತೆ ಹೃದಯ ವಂತರಾಗಿದ್ದಾರೆ. ನನ್ನ ಜೀವನದ ಕೊನೆ ಉಸಿರು ಇರುವವೆಗೂ ಗ್ರಾಮದ ಖುಣತೀರಿಸಲಾಗದು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

೨೦೨೧-೨೨ನೇ ಸಾಲಿನ ಜಲಜೀವನ ಮಷನ್ ಯೋಜನೆ ಇಂಡಿ ವಿಧಾನ ಸಭಾ ಹಂಜಗಿ ಗ್ರಾಮ ಹಾಗೂ ಹಂಜಗಿ ತಾಂಡಾ ಮನೆ ನಳ ಸಂಪರ್ಕ ಮೋತ್ತ.೨೨೬.೦೦ ಲಕ್ಷ ಯೋಜನೆ ಕಾಮಗಾರಿ ಭೂಮಿ ಪೂಜಾ ಹಾಗೂ ಹಂಜಗಿ ಕೆರೆಯ ಬಾಗೀನ ಅರ್ಪಣೆ ಕಾರ್ಯಕ್ರಮ ನೆರವೇರಿಸಿ ಮಾತ ನಾಡಿದ ಅವರು ಈ ಗ್ರಾಮದಲ್ಲಿ ಅನೇಕ ಹಿರಿಯರು ನನಗೆ ರಾಜಕೀಯವಾಗಿ ಮಾರ್ಗದರ್ಶನ ನೀಡಿದ್ದಾರೆ.

ಮುತ್ತುಲಾಲ ಸಾಹುಕಾರ ಹೀಗೆ ಅನೇಕ ಹಿರಿಯರು ಈ ಹಿಂದೆ ನನ್ನ ಕಷ್ಟದ ದಿನಗಳಲ್ಲಿ ಬೆಂಗಾವಲಾಗಿ ನಿಂತಿದ್ದಾರೆ. ಹಂಜಗಿ ಗ್ರಾಮ ಗತವೈಭವ ಕೆದಕಿದಾಗ ಈ ಭಾಗದ ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆದು ರಾಷ್ಟç ,ಅಂತರಾಷ್ಟಿçÃಯ ಮಟ್ಟದಲ್ಲಿ ತಮ್ಮದೆಯಾದ ಛಾಪು ಮೂಡಿಸಿದರು ತದನಂತರದ ಕೆಲ ವರ್ಷಗಳು ಹನಿ ನೀರಿಗೂ ಗತ್ತಿ ಇಲ್ಲದೆ ಕುಡಿಯಲೂ ನೀರು ಇಲ್ಲದೆ ಈ ಭಾಗದ ರೈತಾಪಿ ವರ್ಗ ಸಾಲ ಸೂಲ ಮಾಡಿ ಸಂಕಷ್ಟದ ದಿನಗಳು ಕಳೆಯುವಂತಾಗಿತ್ತು. ರೈತರು ಬೆಳೆದ ಲಿಂಬೆ ಗಿಡಗಳಿಗೆ ನೀರು ಇಲ್ಲದೆ ಇರುವದರಿಂದ ಎಷ್ಟೂ ರೈತರು ಕಡಿದು ಹಾಕಿ ಕುಟುಂಬ ನಿರ್ವಹಣೆ ಮಾಡಲು ಸಹ ಆಗದೆ ಸಂಕಷ್ಟದಲ್ಲಿದ್ದರು ಇದನ್ನು ಅರಿತ ನಾನು ನನ್ನ ೪೦ ವರ್ಷಗಳ ಸುಧೀರ್ಘ ರಾಜಕೀಯ ಅನುಭವ ನೀವು ನೀಡಿದ ಸಹಕಾರದಿಂದ ಇದಕ್ಕೋಂದು ಸ್ಫರ್ಶ ನೀಡಿ ಈ ಭಾಗದ ನೀರಾವರಿ ಯೋಜನೆಗಳನ್ನು ತಂದು ರೈತರ ಕಷ್ಟ ಬಗೆಹರಿಸಲೇಬೇಕು ಎಂಬ ಸಂಕಲ್ಪದೊಂದಿಗೆ ವಿಧಾನ ಸಭೆ ಒಳ ಹೊರಗೂ ಪ್ರಶ್ನೆಗಳನ್ನು ಮಾಡಿ ಈ ಭಾಗದ ಕೆರೆ ,ಕಾಲುವೆಗಳನ್ನು ನಿರ್ಮಿಸಲು ಪ್ರಮಾಣಿ ಪ್ರಯತ್ನ ಮಾಡಿರುವೆ.

ಇಂದು ಕೆರೆಗಳಿಗೆ ನೀರು ತುಂಬಿರುವದರಿAದ ಬಹುತೇಕ ಬೋರವೇಲ್‌ಗಳು ಳು ರೀಚಾರ್ಚ ಆಗಿವೆ. ಕಳೇದ ಬೇಸಿಗೆಯಲ್ಲಿ ಇಸ್ರೋತಂತ್ರಜ್ಞಾನ ದಿಂದ ಬೋರವೇಲ್ ಕೊರೇಯಸಿದರೂ ಹನಿ ನೀರು ಬಿದ್ದಿಲ್ಲ ಈಗ ಅನೇಕ ಪ್ರದೇಶದಲ್ಲಿ ಸ್ಥಗಿತಗೊಂಡ ಬೋರವೇಲ್‌ಗಳಿಂದ ನೀರು ಬರುತ್ತಿವೆ ಎಂದು ರೈತರು ಸಂತಸ ಪಟ್ಟಿದ್ದಾರೆ.ಇದಕ್ಕಿಂತ ಪುಣ್ಯ ಮತ್ತೊಂದಿಲ್ಲ. ನಡೇದಾಡುವ ದೇವರಾದ ಶ್ರೀಸಿದ್ದೇಶ್ವರ ಶ್ರೀಗಳು ಈ ಭೂಮಿಗೆ ಒಂದು ಹನಿ ನೀರು ಕೊಡಿ ಎಂಬ ರೈತರ ಮೇಲಿನ ಪ್ರೀತಿ, ಮಮತೆ ,ಕಾಳಜಿಯಿಂದ ಸದಾಶೇಯ ಹೊತ್ತ ಅವರು ಅವರ ಅಣತಿಯಂತೆ ನಡೇದುಕೊಂಡಿದ್ದೇವೆ . ಶ್ರೀಸಿದ್ದೇಶ್ವರ ಮಹಾಸ್ವಾಮಿಗಳು ನಮ್ಮ ಮಧ್ಯ ಇರದಿದ್ದರೂ ಕೂಡಾ ಅವರು ನುಡಿದ ಅಮೃತ ಜ್ಞಾನದ ದಾಸೋಹ ಪ್ರತಿಯೊಬ್ಬರ ಅಂತರಾತ್ಮದಲ್ಲಿ ಅಳವಡಿಸಿಕೊಂಡು ಹೋಗಬೇಕು ಅವರ ಆದರ್ಶಗಳೇ ಪ್ರೇರಣೆಯಾಗಲಿ ಎಂದರು.

ಸಾಹೇಬಗೌಡ ಪಾಟೀಲ, ಶಿವಾನಂದ ಹಂಜಗಿ .ಮುತ್ತಪ್ಪ ಪೂತೆ ಮಾತನಾಡಿದರು.

ಗ್ರಾ.ಪಂ ಅಧ್ಯಕ್ಷೆ ರಿಯಾನಬಿ ಕಾರಬಾರಿ, ಮುತ್ತುಲಾಲ ತಾಂಬೆ, ಕೆಂಚಪ್ಪ ಪೂಜಾರಿ, ಹಣಮಂತರಾಯಗೌಡ ಪಾಟೀಲ, ಮುತ್ತಪ್ಪ ಪೋತೆ, ಮಾಹಾದೇವಸಾಹುಕಾರ ಮಾಳಗೆ, ಜಾವೀದ ಮೋಮಿನ, ಅಂಬಿಕಾ ತಡ್ಲಗಿ, ಜಾವೀದ ಕುಣಬಿ, ಸಿದ್ದು ಚವ್ಹಾಣ, ಫಯಾಜ ಕಾರಬಾರಿ, ಅಬ್ಬಸಲಿ ಜಮಖಂಡಿ, ರೇಣುಕಾ ಹಂಜಗಿ, ಶಿವಾನಂದ ಹಂಜಗಿ, ಎಲ್.ಎನ್ ಕುಣಬಿ, ಸೈನಾಜ ಕುಣಬಿ, ಭೀಮವ್ವ ಮೇತ್ರಿ, ಲೀಲಾ ರಾಠೋಡ, ರಮೇಶ ಕೋಟಲಗಿ, ಮಾಳಪ್ಪ ಪೂಜಾರಿ, ಸಿದ್ದಪ್ಪ ಬಗಲಿ, ಸೈನಜಾ ಚೌದರಿ, ಬಿ.ಸಿ ಸಾಹುಕಾರ, ಚಂದ್ರಶೇಖರ ರೂಗಿ.ಅಶೋಕ ಮಿರ್ಜಿ.ನಾಗೇಶ ತಳಕೇರಿ, ಅವಿನಾಶ ಬಗಲಿ, ಸುಧೀರ ಕರಕಟ್ಟಿ, ಕಾಮಣ್ಣಾ ದಶವಂತ ವೇದಿಕೆಯಲ್ಲಿದ್ದರು.

ಬಾಬು ಅಳೂರ, ಹಣಮಂತ ಕಂಟಿಕಾರ, ಮಾಳಪ್ಪ ಕಂಟಿಕರ, ಅಬ್ದುಲ ಚೌದರಿ, ರಾಜುಗೌಡ ಬಿರಾದಾರ, ಮೌಲಾಲಿ ಚೌದರಿ, ಜಗದೀಶ ರಾಠೋಡ, ಖಾಜೇಸಾಬ ಸೈಯ, ಧರ್ಮು ಪವಾರ, ಚಂದ್ರಶೇಖರ ಕೋಟಲಗಿ, ,ಮಹಮ್ಮದ ದೇವರ,ಸುಭಾಸಗೌಡ ಬಿರಾದಾರ ಸೇರಿದಂತೆ ಅನೇಕ ಜನರು ಇದ್ದರು.

*

ಬರಗಾಲ ಪೀಡಿತ ನಂಜುಂಡಪ್ಪ ಆಯೋಗದ ವರದಿಯ ಪ್ರಕಾರ ಅತ್ಯಂತ ಹಿಂದುಳಿದ ಗಡಿ ಭಾಗದ ತಾಲೂಕು ಇಚಿಡಿ . ಈ ಭಾಗದ ಸಮಗ್ರ ನೀರಾವರಿ ಕುರಿತು ಸದನದಲ್ಲಿ ಸಾಕಷ್ಟು ಬಾರಿ ಧ್ವನಿ ಎತ್ತುವ ಮೂಲಕ ಈ ಭಾಗದ ಸಮಸ್ಯಯನ್ನು ಸಕಾರಕ್ಕೆ ಮನವರಿಕ ಮಾಡಿಕೊಟ್ಟಿದ್ದೇನೆ. , ಬೆಸಿಗೆಯಲ್ಲಿ ರೈತರು ಟ್ಯಾಕರ ಮೂಲಕ ನೀರು ಹಾಕಿರುವುದನ್ನು ಕಂಡದ್ದೇನೆ. ಈ ಭಾಗದ ಕೆರೆಗಳನ್ನು ತುಂಬಿಸುವ ಕೆಲಸಕ್ಕೆ ಅನುಧಾನ ಬಿಡುಗಡೆ ಮಾಡಿ ಕೆರೆಗಳಿಗೆ ನೀರು ತುಂಬಿರುವ ಮುಖ್ಯ ಮಂತ್ರಿ ಬಸವರಾಜ ಬೋಮ್ಮಾಯಿ, ನೀರಾವರಿ ಸಚಿವ ಗೋವಿಂದ ಕಾರಜೋಳ ಅವರಿಗೆ ತಾಲೂಕಿನ ಜನತೆಯಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.
ಶಾಸಕ ಯಶವಂತರಾಯಗೌಡ ಪಾಟೀಲ.