ಹರಪನಹಳ್ಳಿ: ದೇಶದಲ್ಲಿ ಇನ್ನೂ ಕೂಡ ಜಾತಿ ವ್ಯವಸ್ಥೆ ಹೋಗಿಲ್ಲ. ಈ ಜಾತಿ ವ್ಯವಸ್ಥೆ ಹೋಗಲಾಡಿಸಬೇಕಾದರೆ ಮೊದಲು ನಾವು ಮನುಷ್ಯರಾಗಿ ಬಳಬೇಕು ನಂತರ ನ್ಯಾಯ ಮತ್ತು ಧರ್ಮದ ಆದಿಯಲ್ಲಿ ನಡೆದಾಗ ಮಾತ್ರ ಜಾತಿ ವ್ಯವಸ್ಥೆಯನ್ನು ಹೋಗ ಲಾಡಿಸುವುದಕ್ಕೆ ಸಾಧ್ಯವಾಗುತ್ತದೆ. ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಭಾರತಿ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘದಲ್ಲಿ ೭೭ನೇ ಸ್ವಾತಂತ್ರ‍್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯ ವನ್ನು ನೆರವೇರಿಸಿ ಬಳಿ ಮಾತನಾಡಿದ ಅವರು, ಮಹಾತ್ಮ ಗಾಂಧಿಜೀ ರವರು ದೇಶದ ಸ್ವಾತಂತ್ರ‍್ಯಕ್ಕಾಗಿ ದೇಶದ ಪ್ರತಿಯೊಂದು ಹಳ್ಳಿ ಹಳ್ಳಿಗೆ ಹೋಗಿ ಕಾಲು ನಡಿಗೆಯಿಂದ ಸ್ವಾತಂತ್ರ‍್ಯ ಹೋರಾಟಕ್ಕಾಗಿ ಜಾಗೃತಿ ಮೂಡಿಸಿ ಬ್ರಿಟಿಷರಿಂದ ದೇಶಕ್ಕೆ ೧೯೪೫ ಮಧ್ಯ ರಾತ್ರಿ ೧೨ ಗಂಟೆಗೆ ದೇಶಕ್ಕೆ ಸ್ವಾತಂತ್ರ‍್ಯ ತಂದು ಕೊಟ್ಟಿದ್ದಾರೆ ಎ0ದರು.
ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ ನಂತಹ ಅನೇಕ ನಾಯಕರು ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಕೀರ್ತಿ ಕರ್ನಾಟಕದ ಜನತೆಗೆ ಸಲ್ಲುತ್ತದೆ. ದೇಶವನ್ನು ಪ್ರೀತಿಸುವ ಹೃದಯವಂತ ಸಂಗೊಳ್ಳಿ ರಾಯಣ್ಣ ರವರು ೧೮೫೭ ನಂತರ ಸ್ವಾತಂತ್ರ‍್ಯ ಪ್ರೇಮ ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರö್ಯ ನೀಡಿದÀ ಮಹನೀಯರನ್ನು ನೆನಯಬೇಕೆ0ದರು.
ಭಗತ್ ಸಿಂಗ್ ರವರು ೨೩ನೇ ವಯಸ್ಸಿನಲ್ಲಿ ಅನೇಕ ಕ್ರಾಂತಿಕಾರಿ ಹೋರಾಟಗಾರರಾಗಿದ್ದರು. ಭಗತ್ ಸಿಂಗ್ ಜೈಲಿನಲ್ಲಿ ೨೫೦ಕ್ಕೂ ಹೆಚ್ಚು ಪುಸ್ತಕಗಳನ್ನು ವ್ಯಾಸಂಗ ಮಾಡಿದ್ದರು. ಚಂದ್ರಶೇಖರ ಅಜಾದ್ ೧೪ ವಯಸ್ಸಿನಲ್ಲಿ ಗಾಂಧಿಜೀ ರವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿ ಬ್ರಿಟಿಷ್ ಪೋಲಿಸ್ ರಿಗೆ ಕಲ್ಲಿನಿಂದ ಹೊಡೆದು ಪರಾರಿಯಾಗಿದ್ದರು. ಜಾನ್ಸಿರಾಣಿ ಲಕ್ಷ್ಮಿಬಾಯಿ ರವರು ಬ್ರಿಟಿಷ್ರು ಜಾರಿಮಾಡಿದ ದತ್ತುಮಕ್ಕಳಿಗೆ ಹಕ್ಕು ಇಲ್ಲ ಎಂಬ ನೀತಿಯ ವಿರುದ್ದ ಹೋರಾಟಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಭಗತ್ ಸಿಂಗ್ ರಾಜಗುರು, ಸುಕುದೇವ್ ಅವರು ಬ್ರಿಟಿಷ ಪೋಲಿಸ್ ಬ್ರಿಟಿಷ್ ನ್ಯಾಯಾಲಯವು ಅವರಿಗೆ ಗಲ್ಲು ಶಿಕ್ಷೆಗೆ ಒಳಪಡಿಸಿದರು ಎಂದು ವಿಶ್ಲೇಷಿಸಿದರು.
ದೇಶಕ್ಕಾಗಿ ಹೋರಾಡಿದ ಮಹನೀಯರು ಒಂದು ಕಡೆಯಾದರೆ ದೇಶದಲ್ಲಿ ಸಮಾನತೆಯನ್ನು ಸಾರಿ ದೇಶದ ಜನರಿಗಾಗಿ ಸಂವಿಧಾನ ರಚಿದ ಮಹಾನ್ ನಾಯಕ ಡಾ:ಬಿ.ಆರ್.ಅಂಬೇಡ್ಕರ್‌ರವರ ಅನುಯಾಯಿಗಳಾಗಿ ನಾವುಗಳು ಬದುಕಬೇಕಾಗಿದೆ ಎಂದರು. ವಕೀಲರ ಸಂಘದ ಅಧ್ಯಕ್ಷ ಮತ್ತಿಹಳ್ಳಿ ಅಜ್ಜಣ್ಣ ಮಾತನಾಡಿದರು.
ಈ ಸಂದರ್ಭಗಳಲ್ಲಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಫಕ್ಕೀರವ್ವ ಕೆಳಗೇರಿ. ನ್ಯಾಯಾಧೀಶರಾದ ವೆಂಕಟೇಶ್ ನಾಯ್ಕ, ಅಪರ ಸರ್ಕಾರಿ ವಕೀಲ ವಿ.ಜಿ.ಪ್ರಕಾಶ್ ಗೌಡ, ಹಿರಿಯ ವಕೀಲರಾದ, ಬಿ.ಕೆ.ಕೃಷ್ಣಮೂರ್ತಿ, ಕೆ.ಚಂದ್ರಗೌಡ, ಬಿ.ರೇವನಗೌಡ, ಎಸ್.ಎಂ.ರುದ್ರಮನಿ ಸ್ವಾಮಿ, ಬಿ.ಗೋಣಿ ಬಸಪ್ಪ, ವೀರಣ್ಣ, ಕೆ.ಎಂ.ಚAದ್ರಮೌಳಿ, ರಾಮ್ ಭಟ್,ಎಂ.ಎಸ್. ಮಂಜುನಾಥ್, ಕೆ. ಪ್ರಕಾಶ್ ಬಿ. ಹಾಲೇಶ್, ಬಸವನಗೌಡ, ವಾಮದೇವ,ಸೇರಿದಂತೆ ಅನೇಕ ಹಿರಿಯ ಮತ್ತು ಕಿರಿಯ ನ್ಯಾಯಾವಾದಿಗಳು ಬಾಗವಹಿಸಿದ್ದರು.