ಬೆಂಗಳೂರು: ಆರೋಗ್ಯ ಮತ್ತು ಕ್ಷೇಮ ಕ್ಷೇತ್ರದಲ್ಲಿನ ಜ್ಞಾನ ಉದ್ಯಮವಾಗಿರುವ ಹ್ಯಾಪಿಯೆಸ್ಟ್ ಹೆಲ್ತ್ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಿ ಗೆಲುವು ಸಾಧಿಸಿದ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಗೌರವ ಸಮರ್ಪಿಸುವ ಸಲುವಾಗಿ ಹೊಸತಾಗಿ ‘ಹೆಲ್ತ್ ಚಾಂಪಿಯನ್’ ಯೋಜನೆಯನ್ನು ಇಂದು ಆರಂಭಿಸಿದೆ. ಈ ಯೋಜನೆಯ ಮೂಲಕ ದೇಶದಾದ್ಯಂತ ಇರುವ ಆರೋಗ್ಯ ಸಮಸ್ಯೆಗಳನ್ನು ಮೀರಿ ಬೆಳೆದ ಮತ್ತು ಅಂಥಾ ವ್ಯಕ್ತಿಗಳಿಗೆ ಕಾಳಜಿ ತೋರಿದ ವ್ಯಕ್ತಿಗಳನ್ನು ತಲುಪುವ ಮತ್ತು ಅವರನ್ನು ದಾರಿದೀಪವಾಗಿ ಗೌರವಿಸುವ, ಸ್ಫೂರ್ತಿ ನೀಡುವ ಗುರಿಯನ್ನು ಸಂಸ್ಥೆಯು ಹೊಂದಿದೆ. ಈ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತರಾಗಿರುವ ನಿತೇಶ್ ಕುಮಾರ್ ಅವರಿಗೆ 2024ರ ಹೆಲ್ತ್ ಚಾಂಪಿಯನ್ ಎಂಬ ಮನ್ನಣೆ ನೀಡಿ ಗೌರವಿಸ ಲಾಯಿತು.
ಉದ್ಘಾಟನಾ ಕಾರ್ಯಕ್ರಮವನ್ನು ನಿತೇಶ್ ಕುಮಾರ್ ಮತ್ತು ಹ್ಯಾಪಿಯೆಸ್ಟ್ ಹೆಲ್ತ್ ನ ಅಧ್ಯಕ್ಷ ಅಶೋಕ್ ಸೂತ ಅವರು ಸಂಸ್ಥೆಯ ಹಿರಿಯ ಆಡಳಿತ ಮಂಡಳಿ ಸದಸ್ಯರು ಮತ್ತು ಮಾಧ್ಯಮದ ಸದಸ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹ್ಯಾಪಿಯೆಸ್ಟ್ ಹೆಲ್ತ್ ನ ಅಧ್ಯಕ್ಷ ಅಶೋಕ್ ಸೂತ ಅವರು, “ಪ್ರತಿಯೊಬ್ಬರಿಗೂ ಘನತೆಯಿಂದ ಮತ್ತು ಆರೋಗ್ಯಯುತವಾಗಿ ಜೀವನ ಸಾಗಿಸುವ ಹಕ್ಕಿದೆ ಎಂದು ಹ್ಯಾಪಿಯೆಸ್ಟ್ ಹೆಲ್ತ್ ನಂಬುತ್ತದೆ. ಆದರೆ ಜೀವನದಲ್ಲಿ ಹತ್ತಾರು ಅಡೆತಡೆಗಳು ಎದುರಾಗುತ್ತವೆ. ಕೆಲವು ಸಣ್ಣದಿದ್ದರೆ, ಇನ್ನು ಕೆಲವು ಅಗಾಧವಾದದ್ದು. ‘ಹೆಲ್ತ್ ಚಾಂಪಿಯನ್’ ಎಂಬುದು ವೈಯಕ್ತಿಕ ಸಾಧನೆಗೆ ಸಲ್ಲುವ ಗೌರವ ಮಾತ್ರವೇ ಅಲ್ಲ, ಜನ ಸಮುದಾಯಕ್ಕೆ ಸ್ಫೂರ್ತಿ ನೀಡುವ ಮತ್ತು ಅವರನ್ನು ಮೇಲಕ್ಕೆತ್ತುವ ಪ್ರಯತ್ನವಾಗಿದೆ. ಇದೊಂದು ಕೇವಲ ಯೋಜನೆ ಮಾತ್ರವೇ ಅಲ್ಲ, ಇದೊಂದು ಆಂದೋಲನ. ಆರೋಗ್ಯ ಸಮಸ್ಯೆಗಳನ್ನು ಗ್ರಹಿಸುವ ವಿಧಾನವನ್ನೇ ಬದಲಿಸುವ ದೊಡ್ಡ ಕ್ರಾಂತಿ” ಎಂದು ಹೇಳಿದರು.
ಮೊದಲ ವರ್ಷದ ಮೊದಲ ಹೆಲ್ತ್ ಚಾಂಪಿಯನ್ ಪ್ರಶಸ್ತಿಯ ತೀರ್ಪುಗಾರರ ಕುರಿತು ಮಾತನಾಡಿದ ಅಶೋಕ ಸೂತ ಅವರು, “2025ನೇ ವರ್ಷದ ನಮ್ಮ ಹೆಲ್ತ್ ಚಾಂಪಿಯನ್ ಅನ್ನು ಜನಪ್ರಿಯ ವೈದ್ಯರಾದ ಡಾ ದೇವಿ ಶೆಟ್ಟಿ ನೇತೃತ್ವದ ಗೌರವಾನ್ವಿತ ತೀರ್ಪುಗಾರರು ಆಯ್ಕೆ ಮಾಡಲಿದ್ದಾರೆ. ಆರೋಗ್ಯ ಸೇವಾ ಕ್ಷೇತ್ರಕ್ಕೆ ಡಾಕ್ಟರ್ ಶೆಟ್ಟಿಯವರ ಕೊಡುಗೆ ಅನುಪಮವಾದುದು. ವಿಶೇಷ ಸಮಸ್ಯೆ ಇರುವವರಿಗೆ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ನೆರವಾಗಲು ಅವರು ಸದಾ ಮುಂದೆ ಇರುತ್ತಾರೆ. ಅಂಥಾ ವ್ಯಕ್ತಿಯ ನೇತೃತ್ವದಲ್ಲಿ 2025ರ ಹೆಲ್ತ್ ಚಾಂಪಿಯನ್ ಮನ್ನಣೆಗೆ ಸೂಕ್ತ ವ್ಯಕ್ತಿ ಆಯ್ಕೆಯಾಗುತ್ತಾರೆ ಎಂಬ ಭರವಸೆ ನನಗಿದೆ” ಎಂದು ಹೇಳಿದರು.
ಹ್ಯಾಪಿಯೆಸ್ಟ್ ಹೆಲ್ತ್ – ನಾಲೆಡ್ಜ್ ಅಂಡ್ ಡಯಾಗ್ನೋಸ್ಟಿಕ್ಸ್ ನ ಸಿಇಓ ಶ್ರೀ ಅನಿಂದ್ಯಾ ಚೌಧರಿ ಅವರು, “ಹೆಲ್ತ್ ಚಾಂಪಿಯನ್’ ಯೋಜನೆಯು ಹ್ಯಾಪಿಯೆಸ್ಟ್ ಹೆಲ್ತ್ ನ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಯಾಕೆಂದರೆ ನಾವು ನಮ್ಮ ಉದ್ದೇಶವನ್ನು ಹೆಚ್ಚು ಜನರಿಗೆ ತಲುಪಿಸಲು ಯತ್ನಿಸುತ್ತಿದ್ದೇವೆ ಮತ್ತು ಹೆಚ್ಚು ಜನರು ತಮ್ಮನ್ನು ತಾವು ತೆರೆದುಕೊಳ್ಳಲು ವೇದಿಕೆ ಕಲ್ಪಿಸಿಕೊಡುತ್ತಿದ್ದೇವೆ. ಈ ಮೂಲಕ ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಕೆಲಸ ಮಾಡಬಲ್ಲ ಆಸಕ್ತರ ಜೊತೆ ಸಹಯೋಗ ಮಾಡಿಕೊಳ್ಳಲು ನಾವು ನೋಡುತ್ತಿದ್ದೇವೆ” ಎಂದು ಹೇಳಿದರು.
ಹೆಲ್ತ್ ಚಾಂಪಿಯನ್ ಮನ್ನಣೆಗೆ ಪಾತ್ರರಾದ ನಿತೇಶ್ ಕುಮಾರ್ ಅವರು, “ಪ್ಯಾರಾಲಿಂಪಿಕ್ ಚಿನ್ನದ ಪದಕವನ್ನು ಗೆಲ್ಲುವುದು ದೊಡ್ಡ ಸಾಧನೆಯಾಗಿದ್ದರೂ ಸ್ಫೂರ್ತಿದಾಯಕವಾಗಿ ಬದುಕುವುದು ಅದಕ್ಕಿಂತ ಬಹಳ ಮಹತ್ವದ್ದಾಗಿದೆ. ನನ್ನ ಬದುಕಿನ ಪ್ರಯಾಣವು ತಮ್ಮ ಆರೋಗ್ಯ ಸಮಸ್ಯೆಗಳನ್ನು ಮೀರಿ ಸಾಧನೆ ಮಾಡುವ ಭರವಸೆಯನ್ನು ಯಾರನ್ನಾದಲೂ ಹುಟ್ಟಿಸಿದರೆ ನನ್ನ ಪ್ರಯತ್ನ ಸಾರ್ಥಕವಾಗುತ್ತದೆ. ಸೈಕ್ಲಿಂಗ್ ಆಗಲಿ, ಜಾಗಿಂಗ್ ಅಥವಾ ವಾಕಿಂಗ್ ಆಗಲಿ ಏನಾದರೂ ಮಾಡಬೇಕು, ಒಟ್ಟಾರೆ ದೈಹಿಕವಾಗಿ ಸಕ್ರಿಯರಾಗಿರಬೇಕು ಎಂದು ನಾನು ಎಲ್ಲರಿಗೂ ಹೇಳಲು ಬಯಸುತ್ತೇನೆ. ಮನರಂಜನೆಗಾಗಿ ಯಾವುದೇ ಕ್ರೀಡೆಗಳನ್ನು ಆಡಿ, ಜೊತೆಗೆ ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ. ಆರೋಗ್ಯಕರ ಆಹಾರ ತಿನ್ನಿರಿ, ಚೆನ್ನಾಗಿ ನಿದ್ದೆ ಮಾಡಿ ಮತ್ತು ಮೊಬೈಲ್ ನೋಡುವ ಸಮಯ ಕಡಿಮೆ ಇರುವಂತೆ ನೋಡಿಕೊಳ್ಳಿ” ಎಂದು ಹೇಳಿದರು.
ಈ ಯೋಜನೆಯಲ್ಲಿ ಹೆಲ್ತ್ ಚಾಂಪಿಯನ್ ಆಫ್ ದಿ ಕ್ವಾರ್ಟರ್ ಮತ್ತು ಹೆಲ್ತ್ ಚಾಂಪಿಯನ್ ಆಫ್ ದಿ ಯಿಯರ್ ಎಂಬ ಎರಡು ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಮುಂದಿನ ವರ್ಷದ ಸೆಪ್ಟೆಂಬರ್ ನಲ್ಲಿ ಮೊದಲ ಹೆಲ್ತ್ ಚಾಂಪಿಯನ್ ಆಫ್ ದಿ ಇಯರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಆಯ್ಕೆ ಸಮಿತಿಯು ತ್ರೈಮಾಸಿಕವಾಗಿ ಸಲ್ಲಿಕೆಯಾಗುವ ನಾಮನಿರ್ದೇಶನಗೊಂಡ ವ್ಯಕ್ತಿಗಳ ಸ್ಫೂರ್ತಿದಾಯಕ ಕತೆಗಳ ಆಧಾರದಲ್ಲಿ ವಿಜೇತರನ್ನು ಆಯ್ಕೆ ಮಾಡುತ್ತದೆ. 2025ರ ಹೆಲ್ತ್ ಚಾಂಪಿಯನ್ ಆಫ್ ದಿ ಯಿಯರ್ ಪ್ರಶಸ್ತಿಗೆ ಆಯ್ಕೆ ಮಾಡುವ ತೀರ್ಪುಗಾರರು ಪೂರ್ವನಿರ್ಧರಿತ ಮಾನದಂಡಗಳ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡುತ್ತಾರೆ. ತ್ರೈಮಾಸಿಕ ‘ಹೆಲ್ತ್ ಚಾಂಪಿಯನ್ಸ್’ ಸ್ವಯಂಚಾಲಿತವಾಗಿ ವಾರ್ಷಿಕ ಪ್ರಶಸ್ತಿಗೆ ಅರ್ಹತೆ ಗಳಿಸುತ್ತಾರೆ.
ತ್ರೈಮಾಸಿಕ ವಿಜೇತರು ಪ್ರಮಾಣಪತ್ರ, ನಗದು ಬಹುಮಾನ, ವೆಲ್ನೆಸ್ ಪ್ಯಾಕೇಜ್ ಪಡೆಯುತ್ತಾರೆ. ಜೊತೆಗೆ ಹ್ಯಾಪಿಯೆಸ್ಟ್ ಹೆಲ್ತ್ ಮ್ಯಾಗಜೀನ್ ನಲ್ಲಿ ಅವರ ಕುರಿತ ಲೇಖನ ಪ್ರಕಟವಾಗುತ್ತದೆ. ವಾರ್ಷಿಕ ‘ಹೆಲ್ತ್ ಚಾಂಪಿಯನ್’ ಗಳು ಹೆಚ್ಚುವರಿಯಾಗಿ ಮಾತನಾಡುವ ಅವಕಾಶಗಳು ಮತ್ತು ಹೆಚ್ಚು ಪ್ರಚಾರ ಗಳಿಸುವ ಅವಕಾಶ ಹೊಂದುತ್ತಾರೆ.
ತೆರೆಮರೆಯ ಸಾಧಕರನ್ನು ಗುರುತಿಸು ಅವರಿಗೆ ಮನ್ನಣೆ ನೀಡಲು ಹ್ಯಾಪಿಯೆಸ್ಟ್ ಹೆಲ್ತ್ ತನ್ನನ್ನು ತಾನು ಸಮರ್ಪಿಸಿಕೊಂಡಿದೆ. ತಮ್ಮ ಅಡೆತಡೆಗಳನ್ನು ಮೀರಿ ಸಾಧನೆ ಮಾಡಲು ಪ್ರೇರೇಪಿಸಬಲ್ಲ ವ್ಯಕ್ತಿಗಳ ಕತೆಗಳನ್ನು ಹೇಳಲು ಹ್ಯಾಪಿಯೆಸ್ಟ್ ಹೆಲ್ತ್ ಅನುವು ಮಾಡಿಕೊಡುತ್ತದೆ. ಅಂತಹ ನೂರಾರು ಸ್ಫೂರ್ತಿದಾಯಕ ಕಥೆಗಳನ್ನು ಪ್ರಕಟಿಸುತ್ತಿದೆ. ಸಂಸ್ಥೆಯು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಉಂಟು ಮಾಡಲು ಶ್ರಮಿಸುತ್ತಿದೆ.
2024ರ ಬೇಸಿಗೆ ಪ್ಯಾರಾಲಿಂಪಿಕ್ಸ್ ನಲ್ಲಿನ ನಿತೇಶ್ ಕುಮಾರ್ ಅವರು ನೀಡಿರುವ ಅಭೂತ ಪ್ರದರ್ಶನದಿಂದ ಅವರು ದೇಶದ ಮೂರನೇ ಪ್ಯಾರಾ-ಬ್ಯಾಡ್ಮಿಂಟನ್ ಚಿನ್ನದ ಪದಕ ವಿಜೇತರಾಗಿ ಹೊರ ಹೊಮ್ಮಿದ್ದಾರೆ. ಈ ಸಾಧನೆ ಮತ್ತು ಅವರ ಜೀವನ ಪ್ರಯಾಣವು ‘ಹೆಲ್ತ್ ಚಾಂಪಿಯನ್’ ಯೋಜನೆಯ ಸಾರವನ್ನು ತಿಳಿಸುತ್ತದೆ. ಯಾಕೆಂದರೆ ಹ್ಯಾಪಿಯೆಸ್ಟ್ ಹೆಲ್ತ್ ಸಂಸ್ಥೆ ಇದೇ ರೀತಿಯ ಸ್ಫೂರ್ತಿದಾಯಕ ಕಥೆಗಳನ್ನು ಜಗತ್ತಿಗೆ ಹೇಳಲು ಬಯಸುತ್ತದೆ.
ಅರ್ಜಿಗಳನ್ನು ಹೇಗೆ ನಮೂದಿಸಬೇಕು ಎಂಬುದರ ಕುರಿತ ವಿವರಗಳಿಗಾಗಿ ಇಲ್ಲಿ ನೋಡಿ:
https://campaigns.happiesthealth.com/Health_Champion/
ಇದನ್ನೂ ಓದಿ: Pakistanis Arrested in Bangalore : ಬೆಂಗಳೂರಿನಲ್ಲಿ ಮತ್ತೆ ಮೂವರು ಪಾಕಿಸ್ತಾನಿ ಪ್ರಜೆಗಳ ಬಂಧನ