ತುಮಕೂರು: ಪುರೋಹಿತರು ಮಂತ್ರಕ್ಕಾಗಿ ಮೊಬೈಲ್ ಮೊರೆ ಹೋಗಬೇಡಿ ಎಂದು ಎಂದು ಹಿರೇಮಠದ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಕಿವಿಮಾತು ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾದ ತುಮಕೂರು ಜಿಲ್ಲಾ ಶಾಖೆ ಉದ್ಘಾಟನೆ ಹಾಗೂ ಶ್ರೀ ವೀರ ಭದ್ರೇಶ್ವರರ ಜಯಂತೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಮಂತ್ರಗಳ ಸ್ಪಷ್ಟ ಉಚ್ಚಾರಣೆಯ ಜತೆಗೆ ಅವುಗಳ ಅರ್ಥವನ್ನು ಜನರಿಗೆ ಬಿಡಿಸಿ ಹೇಳುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಿ, ಜನರು ನಮಗೆ ಗೌರವ ಕೊಡುತ್ತಾರೆ ಎಂದರೆ, ಅವರು ನಮ್ಮಿಂದ ಕೆಲವನ್ನು ನಿರೀಕ್ಷಿಸುತ್ತಾರೆ. ಹಾಗಾಗಿ ಪುರೋಹಿತರಾಗಿರುವ ನಾವುಗಳು, ಜನರ ನಿರೀಕ್ಷೆಗೆ ತಕ್ಕಂತೆ, ಆಚಾರ, ವಿಚಾರ, ಉಡುಗೆ, ತೊಡುಗೆಗಳನ್ನು ಹೊಂದುವುದು ಸೂಕ್ತ ಎಂದರು.
ಹಿರೇಮಠದ ವತಿಯಿಂದ ಹಳೆ ನಿಜಗಲ್ ಬಳಿ ನಿರ್ಮಾಣವಾಗಿರುವ ಶ್ರೀವೀರಭದ್ರಸ್ವಾಮಿ ತಪೋವನದಲ್ಲಿ ವೇದೋಪನಿಷತ್ತಿನ ಜತೆಗೆ,ರುದ್ರ, ಅಷ್ಟೋತ್ತರ ಸೇರಿದಂತೆ ಹಲವು ಮಂತ್ರ ಕಲಿಸುವ ತರಗತಿಯನ್ನು ಮೇಲಿಂದ ಮೇಲೆ ನಮ್ಮ ನೇತೃತ್ವದಲ್ಲಿಯೇ ಆಯೋ ಜಿಸಲಾಗುತ್ತದೆ. ತಮ್ಮಲ್ಲಿ ಯಾರಾದರು ಕಲಿಯಲು ಆಸಕ್ತಿ ಉಳ್ಳವರು ಬಂದರೆ, ಅವರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾದ ರಾಜ್ಯ ನಿರ್ದೇಶಕ ದೇವರಾಜಶಾಸ್ತಿç, 2018ರಿಂದಲೂ ಈ ಸಮಾವೇಶ ನಡೆಸಬೇಕೆಂಬ ನಮ್ಮ ಕನಸು ಇಂದು ನೆರವೇರಿದೆ.ವಿವಿದ ಸಂಸ್ಕೃತಿ, ಪರಂಪರೆಯನ್ನು ಹೊಂದಿರುವ ಭಾರತದಲ್ಲಿ ವೀರಶೈವ ಸಂಸ್ಕೃತಿ ಅತ್ಯಂತ ಶ್ರೇಷ್ಠವಾದುದ್ದು, ಪಾವರ್ತಿ, ಪರಮೇಶ್ವರರ ಅಶೀರ್ವಾದದ ಫಲವಾಗಿ ಹುಟ್ಟಿದ ಶ್ರೀವೀರಭದ್ರಸ್ವಾಮಿಗೆ ವೇದ, ಉಪನಿಷತ್ತುಗಳಲ್ಲಿಯೂ ಪ್ರಮುಖ ಸ್ಥಾನವಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಯಡಿಯೂರಿನ ಶ್ರೀರೇಣುಕಾಶಿವಾಚಾರ್ಯಸ್ವಾಮೀಜಿ,ದೊಡ್ಡಗುಣಿಯ ಶ್ರೀರೇವಣ್ಣ ಸಿದ್ದೇಶ್ವರ ಶಿವಾಚಾರ್ಯಸ್ವಾಮೀಜಿ,ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯಸ್ವಾಮೀಜಿ, ತೆವಡಹಳ್ಳಿಯ ಶ್ರೀಚನ್ನಬಸವೇಶ್ವರ ಶಿವಾಚಾರ್ಯಸ್ವಾಮೀಜಿ ವಹಿಸಿದ್ದರು.
ವೇದಿಕೆಯಲ್ಲಿ ಅಕವೀಪುಮಹಾಸಭಾ ರಾಜ್ಯಪ್ರಧಾನ ಕಾರ್ಯದರ್ಶಿ ಕೆ.ಎಸ್.ವೀರಪ್ಪ ದೇವರು, ತುಮಕೂರು ಜಿಲ್ಲಾಧ್ಯಕ್ಷ ಟಿ.ಆರ್.ರುದ್ರೇಶಶಾಸ್ತ್ರೀ ಉಪಸ್ಥಿತರಿದ್ದರು.
ಇದೇ ವೇಳೆ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಗುಬ್ಬಿಯ ಲಿಖಿತ್,ಅರೆಯೂರಿನ ಎ.ಎಂ. ಭೂಮಿಕಾ, ಜೋನಿಗರಹಳ್ಳಿಯ ಪ್ರೀತಂ, ಮಾಕನಹಳ್ಳಿ ಭೂಮಿಕಾ, ಕುಂಭಿಪಾಳ್ಯದ ಕುಮಾರಿ ಹರ್ಷಿತಾ, ರುದ್ರೇಶ್ ಅವರು ಗಳನ್ನು ಅಭಿನಂದಿಸಲಾಯಿತು
ಕಾರ್ಯಕ್ರಮಕ್ಕೂ ಮುನ್ನ ಮೆರವಣಿಗೆಗೆ ತುಮಕೂರು ನಗರ ಶಾಸಕ ಜಿ.ಬಿ,ಜೋತಿಗಣೇಶ್ ಚಾಲನೆ ನಗರದ ಟೌನ್ಹಾಲ್ ವೃತ್ತದಿಂದ ವೀರಶೈವ ಕಲ್ಯಾಣ ಮಂಟಪದವರೆಗೆ ಶ್ರೀವೀರಭದ್ರಸ್ವಾಮೀಯ ಪುತ್ಥಳಿಯನ್ನು ವೇಧ ಘೋಷ, ರುದ್ರ ಪಠಣ ಹಾಗೂ ವಿವಿಧ ಕಲಾತಂಡಗಳ ಪ್ರದರ್ಶನದ ಮೂಲಕ ಉತ್ಸವ ನಡೆಸಲಾಯಿತು.