ಗುಬ್ಬಿ: ಬುಡಕಟ್ಟು ಜನಾಂಗವಾದ ಕಾಡುಗೊಲ್ಲ ಸಮುದಾಯ ಪರಿಶಿಷ್ಠ ಪಂಗಡಕ್ಕೆ ಸೇರಲು ರಾಜ್ಯದಂತ ಹೋರಾಟ ಮಾಡ ಲಾಗುತ್ತಿದೆ ಎಂದು ಕಾಡುಗೊಲ್ಲ ಸಂಘದ ರಾಜ್ಯಧ್ಯಕ್ಷರಾದ ರಾಜಣ್ಣ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಜುಂಜುಪನಹಟ್ಟಿ ಗ್ರಾಮದಲ್ಲಿ ಹಮ್ಮಿ ಕೊಂಡಿದ್ದ ಜುಂಜಪ್ಪಸ್ವಾಮಿಯ ಕಾರ್ತಿಕ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಾಡುಗೊಲ್ಲ ಜನಾಂಗವನ್ನು st ಮೀಸಲಾತಿಗೆ ಸೇರಿಸಬೇಕು ಆರ್ಥಿಕವಾಗಿ , ಶೈಕ್ಷಣಿಕವಾಗಿ, ರಾಜಕೀಯವಾಗಿ ಸಮುದಾಯ ಹಿಂದೂಳಿದೆ ಕಾಡುಗೊಲ್ಲರನ್ನು ಪರಿಶಿಷ್ಟ ಜನಾಂಗಕ್ಕೆ ಸೇರ್ಪಡೆ ಮಾಡುವುದು ನಮ್ಮ ಉದ್ದೇಶವಾಗಿದೆ ಸಂಘಟಿತರಾದರೆ ಮಾತ್ರ ಗೊಲ್ಲರಹಟ್ಟಿಗಳು ಅಭಿವೃದ್ದಿಯಾಗುತ್ತೇವೆ ಜತೆಗೆ ಎಸ್ ಟಿ ಸೇರಿಸುವ ವಿಚಾರವಾಗಿ ಶಿರಾದಿಂದ ಬೆಂಗಳೂರು ವರೆಗೂ ಪಾದಯಾತ್ರೆ ಮಾಡುವ ಮೂಲಕ ಎಸ್ ಟಿ ಸೇರಿಸುವು ದಕ್ಕೆ ಹೋರಾಟ ಮಾಡಬೇಕಿದೆ ಆದ್ದರಿಂದ ನಾವೆಲ್ಲರೂ ಸಹ ಸಂಘಟಿತರಾಗಬೇಕು ಎಂದು ತಿಳಿಸಿದರು.
ಕಾಡುಗೊಲ್ಲ ಸಂಘದ ತಾಲ್ಲೂಕ್ ಅಧ್ಯಕ್ಷ ದೇವರಾಜು ಮಾತನಾಡಿ ರಾಜ್ಯದ್ಯಕ್ಷರಾದ ರಾಜಣ್ಣ ನೇತೃತ್ವದಲ್ಲಿ ಎಸ್ ಟಿ ಮೀಸಲಾತಿ ಪರ ಹೋರಾಟ ಮಾಡುತ್ತಿದ್ದಾರೆ ನಾವೆಲ್ಲರೂ ಸಹ ರಾಜಣ್ಣ ಅವರ ಕೈಬಲಪಡಿಸಿಕೊಳಬೇಕು ಸಮುದಾಯ ಒಗ್ಗಟ್ಟಿನಿಂದ ಎಸ್ ಟಿ ಮೀಸಲಾತಿಗೆ ಹೋರಾಡಬೇಕಿದೆ ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಮುಖಂಡರಾದ ಗುಡ್ಡದಹಳ್ಳಿ ಬಸವರಾಜು , ತಿಮ್ಮಪ್ಪನಹಟ್ಟಿ ತಿಮ್ಮಯ್ಯ , ಡಿವೈಎಸ್ ಪಿ ಬಸವರಾಜು , ಗಂಗಾಧರ್ , ಜಯಣ್ಣ , ಮಂಜಣ್ಣ ಕಕ್ಕೇನಹಳ್ಳಿ ಜುಂಜೇಗೌಡ , ಶ್ರೀನಿವಾಸ್ ,ಹಾಲೇಗೌಡ , ಉಮೇಶ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.