ಚಿಕ್ಕಬಳ್ಳಾಪುರ: ಮೋಡ ಕವಿದ ವಾತಾವರಣ, ಭಾರೀ ಮಳೆಯಾಗುವ ಸಂದರ್ಭದಲ್ಲಿ ತೋಟಗಾರಿಕೆ ಬೆಳೆಗಳಲ್ಲಿ ರೋಗಬಾಧೆ ಹೆಚ್ಚಾಗುತ್ತಿರುವುದರಿಂದ ರೈತರು ಎಚ್ಚರವಹಿಸಿದರೆ ಬೆಳೆ ಕಾಪಾಡಿಕೊಳ್ಳಬಹುದು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಅಕ್ಟೋಬರ್ 19 ರಿಂದ ಅ.24 ರವರೆಗೆ ಜಿಲ್ಲೆಯಾದ್ಯಂತ ಸತತ ಮಳೆ, ಮೋಡಕವಿದ ವಾತಾವರಣ ಹಾಗೂ ಹೆಚ್ಚು ಆರ್ದತೆಯುಳ್ಳ ಹವಾಗುಣ ಮುಂದುವರೆದುದರಿ0ದ ಜಿಲ್ಲೆಯಲ್ಲಿ ಬೆಳೆದಿರುವಂತಹ ಹಲವಾರು ತೋಟಗಾರಿಕಾ ಬೆಳೆಗಳಲ್ಲಿ ಪೋಷಕಾಂಶಗಳು ಮತ್ತು ರೋಗಗಳ ನಿರ್ವಹಣೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಈ ಕೆಳಗಿನಂತೆ ತಿಳಿಸಿದೆ.
ಟೊಮೆಟೋ, ಆಲೂಗೆ ಅಂಗಮಾರಿ
ಅಂಗಮಾರಿ ರೋಗದ ಲಕ್ಷಣಗಳೆಂದರೆ, ನೀರಿನಿಂದ ಆವೃತವಾದ ಕಂದು ಮಿಶ್ರೀತ ಕಪ್ಪು ಬಣ್ಣದ ಚುಕ್ಕೆಗಳು ಎಲೆ, ಕಾಂಡ ಮತ್ತು ಹಣ್ಣಿನ ತೊಟ್ಟುಗಳಲ್ಲಿ ಕಂಡು ಬರುತ್ತದೆ. ಎಲೆಯ ಮೇಲೆ ಚುಕ್ಕೆಗಳು ಕಂದು ಬಣ್ಣದಿಂದ ಕೂಡಿರು ತ್ತದೆ. ನಂತರ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಎಲೆಯ ಕೆಳಗಡೆ ಅರಳೆಯಂತಹ ಬಿಳಿ ಬಣ್ಣದ ಶಿಲೀಂಧ್ರದ ಬೆಳವಣಿಗೆ ಕಂಡು ಬರುತ್ತದೆ. ಆದುದರಿಂದ ರೈತರು ಮಳೆಯಿಂದ ಬಿಡುವು ಸಿಕ್ಕಾಗ ಅಂತರ ವ್ಯಾಪಿ ಶಿಲೀಂದ್ರ ನಾಶಕಗಳಾದ ೨ ಗ್ರಾಂ ಸೈಮಾಕ್ಸಾನಿಲ್ (೮%)+ಮ್ಯಾಂಕೋಜೆಬ್ (೬೪% ಡಬ್ಲ್ಯೂಪಿ) ಅಥವಾ ಮೆಟಲಾಕ್ಸಿಲ್ ೪%+ಮ್ಯಾಂಕೋಜೆಬ್ ೬೪% ಅಥವಾ ಮೆಟಿರಾಮ್ ೫೫+ಪೈರಾಕ್ಲೋಸ್ಟ್ರಾಬಿನ್ ೫% ಡಬ್ಲ್ಯೂಜಿ, ೩ ಗ್ರಾಂ ಅಥವಾ ಫೆಮೊಕ್ಸಡೋನ್ ೧೬.೬%+ಸೈಮಾಕ್ಸಾನಿಲ್ ೨೨% @ ೧ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಲು ತಿಳಿಸಲಾಗಿದೆ. ಸಿಂಪರಣೆ ಯ ನಂತರ ಕನಿಷ್ಟ ೪ ಗಂಟೆಯಾದರೂ ಮಳೆಯಿಂದ ಬಿಡುವು ಇರಬೇಕು ಇಲ್ಲದೇ ಹೋದರೆ ಸಿಂಪರಣೆಯನ್ನು ಪುನಾರವರ್ತಿಸಬೇಕು.
ದೊಣ್ಣಮೆಣಸಿನ ಕಾಯಿಗೆ ಚಿಬ್ಬುರೋಗ ನಿಯಂತ್ರಣ
ದೊಣ್ಣಮೆಣಸಿನಕಾಯಿ ಬೆಳೆಯಲ್ಲಿ ಚಿಬ್ಬುರೋಗ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮವಾಗಿ ಹೂವಾಡುವ ಹಂತದಲ್ಲಿ ಪ್ರಥಮ ಸಿಂಪರಣೆ ಮತ್ತು ಕಾಯಿ ಕಟ್ಟುವ ಹಂತದಲ್ಲಿ ಎರಡನೇ ಸಿಂಪರಣೆ. ನಂತರದ ೧೫ ದಿನಗಳಲ್ಲಿ ಮೂರನೇ ಸಿಂಪರಣೆಗಾಗಿ ತಾಮ್ರದ ಆಕ್ಸಿಕ್ಲೋರೈಡ್ ೩ ಗ್ರಾಂ ಅಥವಾ ಹೆಕ್ಸಾಕೊನಜೋಲ್ ೧ ಮಿ.ಲೀ ಅಥವಾ ಕ್ಯಾಪ್ಟನ್ (೦.೨%) ಅಥವಾ ಡೈಫೆನ್ ಕೊನೊಜೋಲ್ ೦.೫ ಮಿ.ಲೀ ಶಿಲೀಂದ್ರನಾಶಕಗಳನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ಈಗಾಗಲೇ ಕಾಯಿಗಳು ಚಿಬ್ಬುರೋಗದಿಂದ ಬಾಧಿತವಾಗಿದ್ದರೆ ಸಂಯುಕ್ತ ಶಿಲೀಂದ್ರ ನಾಶಕಗಳಾದ ಟೆಬುಕೊನಾಜೋಲ್+ಟ್ರೆöÊಫ್ಲೋಕ್ಸಟ್ರೋಬಿನ್ ೭೫ ಡಬ್ಲೂಜಿ (೫೦%+೨೫% ಡಬ್ಲೂ. ಡಬ್ಲೂ)ಅನ್ನು ೦.೫ ಗ್ರಾಮ/ಲೀ ನೀರಿಗೆ ಬೆರೆಸಿ ಸಿಂಪಡಿಸುವುದರಿAದ ನಿಯಂತ್ರಣಕ್ಕೆ ಬರಲಿದೆ.
ಕೋಸು ಜಾತಿಯ ತರಕಾರಿಗಳಲ್ಲಿ ದುಂಡಾಣುವಿನಿAದ ಬರುವ ಕಪ್ಪುಕೊಳೆ ರೋಗದ ನಿಯಂತ್ರಣಕ್ಕಾಗಿ ತಾಮ್ರದ ಆಕ್ಸಿಕ್ಲೋರೈಡ್ ೩ ಗ್ರಾಂ ಜೊತೆಗೆ ಸ್ಟ್ರೆಪ್ಟೋಮೈಸಿನ್ ಸಲ್ಪೇಟ್ ೦.೫ ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು.
ಕುಂಬಳಜಾತಿ ತರಕಾರಿಗಳು ಹಣ್ಣಿನ ನೊಣಗಳಿಂದ ಬಾಧಿತ ಕಾಯಿಗಳಲ್ಲಿ ಮರಿಹುಳುಗಳು ಹಣ್ಣಿನ ಒಳಭಾಗ ವನ್ನು ತಿನ್ನುವುದರಿಂದ ಅಂತಹ ಕಾಯಿಗಳು ಕೊಳೆಯುತ್ತವೆ. ಇದರ ನಿಯಂತ್ರಣಕ್ಕಾಗಿ ೨ ಮಿ.ಲೀ. ಮೆಲಾಥಿಯನ್ ೫೦ ಇ.ಸಿ+೧೦ ಗ್ರಾಂ ಸಕ್ಕರೆ ಅಥವಾ ಬೆಲ್ಲದೊಂದಿಗೆ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಅಲ್ಲದೆ ಕ್ಯೂ ಲ್ಯೂರ್ ಮೋಹಕ ಬಲೆಗಳನ್ನು ಎಕರೆಗೆ ೪-೬ ರಂತೆ ಕಟ್ಟುವುದು ಸೂಕ್ತ ಎನ್ನಲಾಗಿದೆ.
ಚೆಂಡುಹೂವಿನಲ್ಲಿ ಶಿಲೀಂದ್ರ
ಚೆAಡುಹೂವಿನಲ್ಲಿ ಶಿಲೀಂದ್ರದಿ0ದ ಬರುವ ಎಲೆ ಚುಕ್ಕೆರೋಗ ಮತ್ತು ಹೂಅಂಗಮಾರಿ ರೋಗವು ಹೆಚ್ಚಾಗುವ ಸಾಧ್ಯತೆಯಿದ್ದು, ಹತೋಟಿಗೆ ಕ್ಲೋರೋಥಲೊನಿಲ್ ೨ ಗ್ರಾಂ ಅಥವಾ ಮ್ಯಾಂಕೋಜೆಬ್ ೩ ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡುವುದು. ಪ್ರತಿ ಸಿಂಪರಣೆ ಕೈಗೊಳ್ಳಬೇಕಾದಲ್ಲಿ ೦.೫ ಮಿ.ಲೀ ಅಂಟನ್ನು ಮಿಶ್ರಣ ಮಾಡುವುದನ್ನು ಮರೆಯಬಾರದು. ಟೊಮ್ಯಾಟೊ ಮತ್ತು ಬಳ್ಳಿ ತರಕಾರಿಗಳನ್ನು ಎತ್ತಿ ಕಟ್ಟುವಾಗ ಗಿಡಗಳ ಮಧ್ಯ ಸಾಕಷ್ಟು ಗಾಳಿ ಮತ್ತು ಬೆಳಕು ಆಡುವಂತೆ ಇದ್ದರೆ ಹಾಗೂ ವಿವಿಧ ತರಕಾರಿ ಬೆಳೆಗಳಲ್ಲಿ ನೆಲಕ್ಕೆ ಅಥವಾ ಪ್ಲಾಸ್ಟಿಕ್ ಹೊದಿಕೆಗೆ ತಾಕುವ ಹಳೆಯ ಎಲೆಗಳನ್ನು ಗಿಡಕ್ಕೆ ಹಾನಿಯಾಗದಂತೆ ತೆಗೆಯುವುದರಿಂದ ರೋಗಗಳ ಹಾವಳಿಯನ್ನು ಅಲ್ಪಮಟ್ಟಿಗೆ ಕಡಿಮೆ ಮಾಡಬಹುದು.
ದ್ರಾಕ್ಷಿ ಬೆಳೆಯಲ್ಲಿ ಬೂಜು ತುಪ್ಪಟ ರೋಗ: ಎಲೆಗಳ ಹಿಂಭಾಗದಲ್ಲಿ ಬಿಳಿ ತುಪ್ಪಟದಂತಹ ಶಿಲೀಂದ್ರದ ಬೆಳವಣಿಗೆ ಕಂಡು ಬಂದು ಎಲೆ ಒಣಗಿಬಾಡುತ್ತವೆ. ಗೊಂಚಲುಗಳಲ್ಲಿ ಹಣ್ಣುಗಳು ಮುದರಿ ಜೋತು ಬೀಳುತ್ತವೆ. ಈ ರೋಗ ಮಳೆಗಾಲದಲ್ಲಿ ಹೆಚ್ಚು ತೀವ್ರವಾಗಿರುತ್ತದೆ. ಎಲೆಗಳ ಮೇಲೆ ಕಂದು ಬಣ್ಣದ ಚುಕ್ಕೆಗಳು ಕಂಡು ಬಂದು, ಕೊಳೆಯುವಿಕೆ ಕಂಡುಬರುತ್ತದೆ.
ಚಾಟನಿ ಮಾಡಿದ ೧-೨ ದಿನಗಳ ನಂತರ ಶೇ.೧ರ ಬೋರ್ಡೋ ದ್ರಾವಣ ಸಿಂಪಡಿಸುವುದು.ಚಾಟನಿ ಮಾಡಿದ ೪-೫ ದಿನಗಳ ನಂತರ ೨ಗ್ರಾಂ ಮ್ಯಾಂಕೋಜೆಬ್ ೭೫ಡಬ್ಲುö್ಯಪಿ+ಶೇ.೨ರಷ್ಟು ಹೈಡ್ರೀಜನ್ ಸೈನಯಡ್ನ್ನು ಲೇಪಿಸುವುದು. ಚಾಟನಿ ಮಾಡಿದ ೧೦-೧೫ ದಿನಗಳ ನಂತರ (೨-೩ಎಲೆಯ ಹಂತದಲ್ಲಿ) ಪ್ರತಿ ಲೀಟರ್ ನೀರಿಗೆ ೨.೫ಗ್ರಾಂ ಮೆಟಲಾಕ್ಸಿಲ್+ಮ್ಯಾಂಕೋಜೆಬ್ ೭೨ ಡಬ್ಲುö್ಯಪಿ ಅಥವಾ ೨ಗ್ರಾಂ ಸೈಮಾಕ್ಸಿಲ್ ೮+ಮ್ಯಾಂಕೊಜೆಬ್ ೬೪ ಡಬ್ಲುö್ಯಪಿ ಅನ್ನು ಸಿಂಪಡಿಸುವುದು.
ಚಾಟನಿ ಮಾಡಿದ ೨೫-೩೦ ದಿನಗಳ ನಂತರ (೫-೭ ಎಲೆಯ ಹಂತದಲ್ಲಿ) ೨ಗ್ರಾಂ ಪಾಸಿಟಾ??? ಎಲ್ ೮೦ WP ಅಥವಾ ೦.೭೫ಗ್ರಾಂ ಡೈಮೆಥೋಮಾರ್ಫ ೫೦ಡಬ್ಲುö್ಯಪಿ +೨ಗ್ರಾಂ ಮ್ಯಾಂಕೋಜೆಬ್ ೭೫ ಡಬ್ಲುö್ಯಪಿ ಸಿಂಪಡಿಸುವುದು.ಚಾಟನಿ ಮಾಡಿದ ೪೦ ದಿನಗಳ ನಂತರ ೨.೨೫ಗ್ರಾಂ ಇಪ್ರೋವಾಲಿಕಾರ್ಬ್ ೫.೫+ಪ್ರೋಪಿನೆಬ್ ೬೧.೨೫ WP ಮತ್ತು ೫೦ದಿನಗಳ ನಂತರ ೦.೮ ಮೀ.ಲೀ ಮ್ಯಾಂಡಿಪ್ರೋಪಾಮಿಡ್ ೨೩.೪ Sಅ ಅಥವಾ ೨ಮಿ.ಲೀ ಅಜಾಕ್ಸಿಸ್ಟೋಬಿನ್ ೨೩ Sಅ ಸಿಂಪಡಿಸುವುದು.
ಬೂದಿ ರೋಗ:- ಎಲೆಗಳ ಮೇಲ್ಬಾಗದಲ್ಲಿ ಬೂದು ಶಿಳೀಂದ್ರದ ಬೆಳವಣಿಗೆ ಕಂಡುಬAದು, ಎಲೆ ಮುದುರಿ ಉದುರುತ್ತವೆ. ಹಣ್ಣುಗಳ ಮೇಲೆ ಕೂಡ ಬೂದು ಬೆಳವಣಿಗೆ ಕಂಡುಬAದು ಅವು ಉದುರುವುದು.
ದುಂಡಾಣು ಎಲೆ ಚುಕ್ಕೆ ರೋಗ:
ಎಲೆಗಳ ಮೇಲೆ ಹಳದಿ ಉಂಗುರದಿ0ದ ಸುತ್ತುವರಿದ ಕಪ್ಪು ಚುಕ್ಕೆಗಳು ಕಂಡು ಬಂದು ಅವು ಕೊಳೆಯಲು ಪ್ರಾರಂಭಿಸುತ್ತವೆ. ಕಾಂಡಗಳಲ್ಲಿ ಸೀಳುವಿಕೆ ಕಂಡು ಬರುತ್ತದೆ. ಹಣ್ಣುಗಳು ಸೀಳುವದು ಕಂಡುಬರುತ್ತದೆ. ಸಮಗ್ರ ಹತೋಟಿ ಕ್ರಮಗಳು ಚಾಟನಿ ಮಾಡುವಾಗ ಚಾಟನಿಯ ಕತ್ತರಿಯನ್ನು ಪ್ರತಿ ಲೀಟರ್ ನೀರಿಗೆ ೨೫ ಮಿ.ಲೀ ಸೋಡಿಯಂ ಹೈಪೋಕ್ಲೋರೈಡ್ ಬೆರಸಿದ ದ್ರಾವಣದಲ್ಲಿ ಅದ್ದಿ ಚಾಟನಿ ಮಾಡುವುದರಿಂದ ರೋಗಾಣುಗಳ ಹರಡುವಿಕೆಯನ್ನು ತಡೆಗಟ್ಟಬಹುದು. ರೋಗದ ಲಕ್ಷಣಗಳು ಕಂಡ ತಕ್ಷಣ ಒಂದು ಲೀಟರ್ ನೀರಿನಲ್ಲಿ ೨ ಗ್ರಾಂ ಕಾರ್ಬೆನ್ಡೆಜಿಮ್ ೧೨+ ಮ್ಯಾಂಕೋಜೆಬ್ ೬೩ ಡಬ್ಲ್ಯೂಪಿ ಅಥವಾ ೦.೫ ಮಿ.ಲೀ ಡೈಪೆನ್ ಕೋನೋಝೆಲ್ ೨೫ ಇ.ಸಿ ಮಿಶ್ರಣ ಮಾಡಿ ಗಿಡಗಳ ಬುಡದ ಸುತ್ತ ಮಣ್ಣಿಗೆ ಸುರಿಯಬೇಕು. ರೋಗದ ತೀವ್ರತೆ ಹೆಚ್ಚಾದಲ್ಲಿ ೧ ಗ್ರಾಂ ಟೆಬೂಕೋನೋಝೆಲ್ ೫೦+ ಟ್ರೆöÊಕೋಡರ್ಮಾ ೨ ಲೀ + ಸುಡೋಮೋನಾಸ್ ೨ ಲೀ+೧ ಕೆ.ಜಿ ಕಡಲೆಹಿಟ್ಟು+೫೦೦ ಗ್ರಾಂ ಬೆಲ್ಲ+೧೦ ಲೀ ನೀರಿನೊಂದಿಗೆ ಮಿಶ್ರಣಮಾಡಿ ೫ ದಿನಗಳಕಾಲ ನೆರಳಿನಲ್ಲಿ ಇಟ್ಟು ನಂತರ ಈ ದ್ರಾವಣವನ್ನು ೨೦೦ ಲೀ ನೀರಿನಲ್ಲಿ ಮಿಶ್ರಣ ಮಾಡಿ ಗಿಡಗಳ ಬುಡದ ಸುತ್ತ ಮಣ್ಣಿಗೆ ಸುರಿಯಬೇಕು .
ಸೇವಂತಿಗೆ ಸೊರಗು ರೋಗ:
ಮೊದಲಿಗೆ ಗಿಡದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣ ಕಂದು ಬಣ್ಣಕ್ಕೆ ತಿರುಗುತ್ತವೆ. ನಂತರ ಗಿಡವು ಬಾಡಿ ಒಣಗುತ್ತದೆ. ರೋಗ ಪೀಡಿತ ಗಿಡಗಳನ್ನು ಸೀಳಿ ನೋಡಿದಾಗ ಕಾಂಡದ ಅಂಚಿನಲ್ಲಿ ಕಂದು ಬಣ್ಣದ ಮಚ್ಚೆಗಳು ಕಾಣುತ್ತವೆ. ಈ ರೋಗವು ಹೆಚ್ಚು ಮಣ್ಣಿನ ತೇವಾಂಶವಿರುವ ಕಡೆ ಹೆಚ್ಚಾಗಿ ಕಂಡು ಬರುತ್ತದೆ. ಬಹುಬೇಗ ನೀರಿನ ಮೂಲಕ ಗಿಡದಿಂದ ಗಿಡಕ್ಕೆ ಹರಡುತ್ತದೆ.ನಾಟಿ ಮಾಡುವ ಮೊದಲು ಭೂಮಿಗೆ ಕೊಟ್ಟಿಗೆ ಗೊಬ್ಬರ ಮತ್ತು ಟ್ರೆöÊಕೋಡರ್ಮಾದಿಂದ ಸಸಿಗಳ ಬೇರುಗಳನ್ನು ಟ್ರೆöÊಕೋಡರ್ಮಾ ದ್ರಾವಣದಲ್ಲಿ(೧೦ಗ್ರಾಂ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ) ಅದ್ದಿ ನಾಟಿ ಮಾಡುವುದು.
ರೋಗ ನಿವಾರಣೆ ಹೇಗೆ?
ರೋಗದ ಲಕ್ಷಣಗಳು ಕಂಡ ತಕ್ಷಣ ಒಂದು ಲೀಟರ್ ನೀರಿನಲ್ಲಿ ೨ಗ್ರಾಂ ಕಾರ್ಬೆನ್ಡೆಜಿಮ್ ೧೨+ಮ್ಯಾಂಕೋಜೆಬ್ ೬೩ ಡಬ್ಲ್ಯೂಪಿ. ಅಥವಾ ೦.೫ ಮಿ.ಲೀ. ಡೈಪೆನ್ ಕೋನೋಝೊಲ್ ೨೫ ಇಸಿ ಮಿಶ್ರಣ ಮಾಡಿ ಗಿಡಗಳ ಬುಡದ ಸುತ್ತ ಮಣ್ಣಿಗೆ ಸುರಿಯಬೇಕು.ರೋಗದ ತೀವ್ರತೆ ಹೆಚ್ಚಾದಲ್ಲಿ ೧ಗ್ರಾಂ ಟೆಬೂಕೋನೋಝೊಲ್ ೫೦+ ಟ್ರೆöÊಪ್ಲೋಸ್ಟೊçà ಬಿನ್ ೨೫ ಡಬ್ಲ್ಯೂಜಿ. ಮಿಶ್ರಣ ಮಾಡಿ ಗಿಡಗಳ ಬುಡದ ಸುತ್ತ ಮಣ್ಣಿಗೆ ಸುರಿಯಬೇಕು. ೭ ದಿನಗಳ ನಂತರ ಟ್ರೆöÊಕೋಡರ್ಮಾ ೨ ಲೀ + ಸುಡೋಮೋನಾಸ್ ೨ ಲೀ + ೧ ಕೆ.ಜಿ. ಕಡಲೆಹಿಟ್ಟು + ೫೦೦ಗ್ರಾಂ ಬೆಲ್ಲ + ೧೦ ಲೀ ನೀರಿನೊಂದಿಗೆ ಮಿಶ್ರನ ಮಾಡಿ ೫ ದಿನಗಳ ಕಾಲ ನೆರಲಿನಲ್ಲಿಟ್ಟು ನಂತರ ಈ ದ್ರಾವಣವನ್ನು ೨೦೦ ಲೀ ನೀರಿನಲ್ಲಿ ಮಿಶ್ರಣ ಮಾಡಿ ಗಿಡಗಳ ಬುಡದ ಸುತ್ತ ಮಣ್ಣಿಗೆ ಸುರಿಯಬೇಕು.
ಮೇಲಿನ ಎಲ್ಲಾ ಹತೋಟಿ ಕ್ರಮಗಳನ್ನು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಶಿಫಾರಸ್ಸು ಮಾಡಿದ್ದು ಸದರಿ ಶಿಫಾರಸ್ಸುಗಳನ್ನು ಎಲ್ಲಾ ತಾಲ್ಲೂಗಳ ರೈತರು ಅಳವಡಿಸಿಕೊಳ್ಳಬೇಕೆಂದು ತೋಟಗಾರಿಕೆ ಉಪನಿರ್ದೇಶಕರು ಕೋರಿರುತ್ತಾರೆ.
ಇದನ್ನೂ ಓದಿ: Crop Survey Problems: ‘ಬೆಳೆ ಸಮೀಕ್ಷೆ’, ‘ದಿಶಾಂಕ್’ ಆ್ಯಪ್‌ಗಳ ನಕ್ಷೆಯಲ್ಲಾಗಿದೆ ಭೂ ಕುಸಿತ, ಭೂ ಪಲ್ಲಟ!