ಆಸ್ಪತ್ರೆಯಲ್ಲಿ ಔಷಧಿ ಕೇಂದ್ರದಲ್ಲಿ ಸಿಬ್ಬಂದಿಯ ಅಜಾಗರೂಕತೆ; ನೋಟಿಸ್
ಕೊರಟಗೆರೆ: ಸಾರ್ವಜನಿಕ ಆಸ್ಪತ್ರೆಯಲ್ಲಿ ಔಷಧಿ ಕೇಂದ್ರದಲ್ಲಿ ಸಿಬ್ಬಂದಿಯ ಅಜಾಗರೂಕತೆ ಕೆಲಸಕ್ಕೆ ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿಮದ್ದಿನೆನಿ ನೋಟಿಸ್ ನೀಡುವಂತೆ ಸೂಚನೆ ನೀಡಿದ್ದಾರೆ.
ತಾಲೂಕಿನಲ್ಲಿ ಹಲವು ಇಲಾಖೆಗಳ ಪ್ರಗತಿ ಪ್ರರಿಶೀಲನೆಯನ್ನ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿ ನಂತರ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ಅಧಿಕಾರಿಗಳು ಔಷಧಿ ಕೇಂದ್ರದಲ್ಲಿ ಸಿಬ್ಬಂದಿ ಆಸ್ಪತ್ರೆಯ ಒಳ ರೋಗಿಗಳ ವಿವರವನ್ನು ರಿಜಿಸ್ಟಾರ್‌ನಲ್ಲಿ 14 ಎಂದು ನಮೂದಿಸಿದ್ದು, ನಂತರ ಇಲಾಖೆಗೆ ಕಂಪ್ಯೂಟರ್‌ನಲ್ಲಿ ವರದಿ ಸಲ್ಲಿಸುವಾಗ ೧೧೪ ಎಂದು ವರದಿ ನೀಡಲಾಗಿತ್ತು, ಈ ಬಗ್ಗೆ ಕಾರ್ಯದರ್ಶಿಗಳು ವಿಚಾರಿಸಿದಾಗ ಎಂಟ್ರಿಯಲ್ಲಿ ಲೋಪವಾಗಿದೆ ಎಂದು ಸಬೂಬು ಹೀಳಿದ ಸಿಬ್ಬಂಧಿಗೆ ತರಾಟೆ ತೆಗೆದುಕೊಂಡರು. ಈ ಸಂಬಂಧ ಸಿಬ್ಬಂದಿಗೆ ನೊಟೀಸ್ ನೀಡಲು ಸೂಚನೆ ನೀಡಿದರು.
ಕೊರಟಗೆರೆ ತಾಲ್ಲೂಕಿನ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನೆ ನೆಡಸಲು ತುರ್ತು ಸಭೆಯನ್ನ ನಡೆಸಿದರು. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಲ್ಲಿ ಫಲಾನುಭವಿಗಳ ಅಯ್ಕೆ ಮಾಡಲಾಗುತ್ತಿದೆ. ಇನ್ನು ಚುರುಕುಗೊಳಿಸಿ ಅಕ್ಟೋ ಬರ್ ಒಳಗೆ ಆಯ್ಕೆ ಪ್ರಕಿಯೆ ಮುಗಿಸಿ ಡಿಸೆಂಬರ್ ಒಳಗಾಗಿ ಸವಲತ್ತುಗಳನ್ನು ಸಂಪೂರ್ಣವಾಗಿ ವಿತರಿಸು ವಂತೆ ಸೂಚಿಸಲಾಗಿದೆ, ಜಿಲ್ಲೆಯಲ್ಲಿ ಅಂಗವಾಡಿಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಪಡೆದ್ದಿದ್ದು ಈ ತಿಂಗಳ ಅಂತ್ಯದೊಳಗೆ ಅವುಗಳನ್ನು ತುಂಬಲಾಗುವುದು ಈ ಸಂಬಂಧ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳುವರು ಎಂದರು.
ತುಮಕೂರು ಜಿಲ್ಲೆಯಲ್ಲಿ ಪ್ರತಿ ತಾಲ್ಲೂಕಿನಲ್ಲೂ 2000 ನಿವೇಶಗಳನ್ನು ಗುರುತಿಸಿ ಹಂಚುವ ಗುರಿ ಹೊಂದಿದ್ದು ಕೆಲವು ಕಡೆ ಕಲ್ಲು ಬಂಡೆಗಳಿದ್ದು ನಿವೇಶನ ಗುರುತಿಸಲು ವಿಳಂಬವಾಗುತ್ತಿದೆ ಸೂಕ್ತ ಜಾಗಗಳನ್ನು ಗುರುತಿಸ ಲಾಗತ್ತದೆ. ಇದರೊಂದಿಗೆ ಪಹಣ ದಾರರ ಹೆಸರನ್ನು ಆಧಾರ್ ಜೋಡನೆ ಮಾಡುವುದನ್ನು ಮತಷ್ಟು ಚುರುಕು ಗೊಳಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದ್ದು ಪ್ರಸೂತಿ ಹೆಚ್ಚು ಮಹಿಳೆಯರು ಬರುತ್ತಿದ್ದು ಗ್ರಾಮೀಣ ಮಹಿಳೆಯರಿಗೆ ಅನುಕೂಲವಾಗುವ ದೃಷ್ಟಿಯಿಂದ ಅಗತ್ಯತೆಯನ್ನು ತಿಳಿದು ಸ್ಯಾನಿಂಗ್ ಮಿಷನ್‌ನ್ನು ಒದಗಿಸುವ ಮತ್ತು ಅದನ್ನು ನಿರ್ವಹಿಸುವ ರೇಡಿಯೋಲಜಿ ತಜ್ಞರನ್ನು ನೇಮಿಸುವ ವ್ಯವಸ್ಥೆ ಮಾಡಲಾಗುವುದು ಡೆಂಗ್ಯೂ ರೋಗವನ್ನು ಪರಿಶೀಲನೆ ಮಾಡಿದ್ದು ತಾಲ್ಲೂಕಿನಲ್ಲಿ 6 ಪ್ರಕರಣಗಳು ಇದ್ದು ಡೆಂಗ್ಯೂ ನಿಯಂತ್ರಣಕ್ಕೆ ಇಲಾಖೆಯೊಂದಿಗೆ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ, ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ದಿನಕ್ಕೆ ಸರಾಸರಿ ೫೦೦ ಓಪಿಡಿ ರೋಗಿಗಳು ಬರುತ್ತಿದ್ದು ನೂತನ ಆಸ್ಪತ್ರೆಗೆ ಜಾಗ ಮಂಜೂರು ಆಗಿರುವ ಬಗ್ಗೆ ಗಮನಕ್ಕೆ ತಂದಿದ್ದು ಅದನ್ನು ಪರಿಶೀಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮಂಜುನಾಥ್, ತಾಲ್ಲೂಕು ವೈದ್ಯಾಧಿಕಾರಿ ವಿಜಯ್‌ಕುಮಾರ್, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಲಕ್ಷೀಕಾಂತ್, ಡಾ.ಮೋಹನ್‌ದಾಸ್, ಶಿವರಾಜ್, ಕಂದಾಯ ಆಧಿಕಾರಿ ಬಸವರಾಜು ಸೇರಿದಂತೆ ಇತರರು ಹಾಜರಿದ್ದರು.