Tuesday, 26th November 2024

7035 ಸಂಸಾರಕ್ಕೆ ಮನೆಯ ಅವಶ್ಯಕತೆ ಇದೆ

ಮಧುಗಿರಿ: ತಾಲೂಕಿನಲ್ಲಿನ ಮನೆಗಳ ಸಮಸ್ಯೆಗೆ ಮುಕ್ತಿ ಕೊಡಿಸುವಲ್ಲಿ ಸದನದಲ್ಲಿ ಶ್ರಮಿಸಿದ ಶಾಸಕ ಎಂ.ವಿ.ವೀರಭದ್ರಯ್ಯ ನವರ ಪರಿಶ್ರಮದಿಂದ ತಾಲೂಕಿಗೆ ಅಗತ್ಯವಾದ ೨ ಸಾವಿರ ಮನೆಗಳನ್ನು ನೀಡಲು ಸದನದಲ್ಲಿ ವಸತಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.

ತಾಲೂಕಿನಲ್ಲಿ ನೆರೆ ಹಾವಳಿ ಹಾಗೂ ಮನೆಗಳ ವಿಚಾರವಾಗಿ ಸದನದಲ್ಲಿ ವಿಸ್ತÈತವಾಗಿ ಚುಕ್ಕೆ ಗುರುತಿನ ಪ್ರಶ್ನೆಯಡಿ ಚರ್ಚೆ ಆರಂಭಿಸಿದ ಶಾಸಕ ಎಂ.ವಿ.ವೀರಭದ್ರಯ್ಯ ಮಧುಗಿರಿ ಕ್ಷೇತ್ರ ಡಾ.ನಂಜು0ಡಪ್ಪನವರ ವರದಿಯಂತೆ ತೀರ ಹಿಂದುಳಿದ ಕ್ಷೇತ್ರ. ಪದೆ ಪದೆ ಬಗರಾ ಲಕ್ಕೆ ತುತ್ತಾದ ಪ್ರದೇಶ. ಇಲ್ಲಿ ಸಚಿವರ ಮಾಹಿತಿಯಂತೆ ೭೦೩೫ ಸಂಸಾರಕ್ಕೆ ಮನೆಯ ಅವಶ್ಯಕತೆ ಇದೆಯೆಂದು ತಿಳಿಸಿದ್ದಾರೆ.

ಅದರಂತೆ ೨೦೧೯-೨೦ ಹಾಗೂ ೨೦೨೦-೨೧ ನೇ ಸಾಲಿನಲ್ಲಿ ೧೪೪೮ ಮನೆಗಳನ್ನು ನೀಡಿದ್ದು, ೨೦೨೧-೨೨ ರಲ್ಲಿ ೧೩೮೪ ಮನೆಗಳನ್ನು ನೀಡಿದ್ದಾರೆ. ಆದರೆ ಅಗತ್ಯ ಬೇಡಿಕೆ ಪೂರೈಸಿಲ್ಲ. ಇತ್ತೀಚಿನ ನೆರೆ ಹಾವಳಿಯಿಂದ ೪೦೦ ಮನೆಗಳಿಗೆ ಹಾನಿಯಾಗಿದ್ದು ಕನಿಷ್ಟ ೨ ಸಾವಿರ ಮನೆಗಳಿಗೆ ಮಂಜೂರಾತಿ ನೀಡುವಂತೆ ಒತ್ತಾಯಿಸಿದರು.

೨ ಸಾವಿರ ಮನೆಗಳಿಗೆ ಅಸ್ತು ಎಂದ ಸಚಿವ :ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ ತಾಲೂಕಿನಲ್ಲಿ ೭೩೭೭ ಜನ ವಸತಿ ರಹಿತರಿದ್ದು, ೩೯೫೦ ಕುಟುಂಬ ನಿವೇಶನ ರಹಿತರಿದ್ದಾರೆ. ಈ ವರದಿಯಂತೆ ಪ್ರಥಮವಾಗಿ ೧೪೪೮ ಮನೆಗಳನ್ನು ನೀಡಿದ್ದು, ಈ ಬಾರಿ ೧೩೮೬ ಮನೆಗಳನ್ನು ನೀಡಿದ್ದೇವೆ. ಶಾಸಕರಾದ ಎಂ.ವಿ.ವೀರಭದ್ರಯ್ಯನವರ ಮನವಿಯಂತೆ ಸೂಕ್ತ ದಾಖಲೆಗಳನ್ನು ಒದಗಿಸಿದರೆ ೨ ಸಾವಿರ ಮನೆಗಳನ್ನು ನೀಡಲು ಸಿದ್ಧ ಎಂದು ಭರವಸೆ ನೀಡಿದರು.

***

ಜನರ ಕೆಲಸ ಮಾಡಲೆಂದೆ ನಾನು ಶಾಸಕನಾಗಿರುವುದು. ಅದನ್ನು ಶಕ್ತಾನುಸಾರ ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ಸೂಕ್ತ ದಾಖಲಾತಿ ಸಮೇತ ೨ ಸಾವಿರ ಮನೆಗಳನ್ನು ಕ್ಷೇತ್ರಕ್ಕೆ ತರಲಾಗುವುದು.

– ಎಂ.ವಿ.ವೀರಭದ್ರಯ್ಯ, ಶಾಸಕರು, ಮಧುಗಿರಿ.