Thursday, 19th September 2024

ವಕೀಲ ವೃತ್ತಿ ಸಾಮಾಜಿಕ ನ್ಯಾಯದ ಪ್ರತೀಕ: ಎಚ್.ಶಶಿಧರ್ ಶೆಟ್ಟಿ

ಬೆಂಗಳೂರು: ವಕೀಲ ವೃತ್ತಿಯು ಸಾಮಾಜಿಕ ನ್ಯಾಯದ ಪ್ರತೀಕ. ಅನ್ಯಾಯದ ವಿರುದ್ಧ ಹೋರಾಟ ಮಾಡುವ ಕಾನೂನಿನ ಬದ್ಧತೆ ಹಾಗೂ ಜ್ಞಾನ ಹೊಂದಿರಬೇಕು ಎಂದು ಸುಪ್ರೀಂಕೋರ್ಟ್ ನ ರಿಜಿಸ್ಟ್ರಾರ್ ಎಚ್.ಶಶಿಧರ್ ಶೆಟ್ಟಿ ಅವರು ಅಭಿಪ್ರಾಯಪಟ್ಟರು.

ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಕಾನೂನೂ ಕಾಲೇಜು ವಿಶ್ವವಿದ್ಯಾಲಯ ಸಹಯೋಗದಲ್ಲಿ ನಡೆದ ಗುರುವಾರ ನಡೆದ ‘ಬಿಯಾಂಡ್ ದ ಕೋರ್ಟ್ ರೂಮ್-ಎಕ್ಸ್ ಪ್ಲೋರಿಂಗ್ ಟ್ರಡೀಷನಲ್ ಆಂಡ್ ಅವೆಂಟ್ ಗ್ರೇಡ್ ಲೀಗಲ್ ಕೆರಿಯರ್ಸ್’ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರಮ, ಶ್ರದ್ಧೆ ಹಾಗೂ ಕಾನೂನಿನ ಬಗ್ಗೆ ಸಾಕಷ್ಟು ಜ್ಞಾನ ಹೊಂದಿದ್ದರೆ ಉತ್ತಮ ವಕೀಲನಾಗಲು ಸಾಧ್ಯ. ವಕೀಲ ವೃತ್ತಿಯಲ್ಲಿ ಎದರಾಗುವ ಸವಾಲುಗಳನ್ನು ಎದುರಿಸಲು ಸದಾ ಸಿದ್ಧರಾಗಿರಬೇಕು. ಕಾನೂನು ಕ್ಷೇತ್ರ ಅಷ್ಟೊಂದು ಸುಲಭವಾದುದಲ್ಲ. ಸಾಂಪ್ರದಾಯಿಕ ನಿಯಮಗಳು ಮತ್ತು ಸಾಂಪ್ರದಾಯಿಕ ವಲ್ಲದ ನಿಯಮಗಳೆರೆಡು ಕಾನೂ‌ನಿನ ಎರಡು ವಿಧಗಳು ಎಂದು ಮಾಹಿತಿ ನೀಡಿದರು.

ಸಾಮಾಜಿಕ ಕ್ಷೇತ್ರಕ್ಕೆ ಏನಾದರೂ ಕಾಳಜಿ ತೋರಬೇಕಾದರೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡುವ ಮೂಲಕ ನೆರವಾಗಬಹುದು. ಸಮಾಜದಲ್ಲಿ ನ್ಯಾಯ ಒದಗಿಸುವ ಪ್ರವೃತ್ತಿ ಮುಂದುವರಿದಾಗ ಮಾತ್ರ ಕಾನೂನಿನ ಮೌಲ್ಯ ಕಡಿಮೆಯಾಗುತ್ತದೆ. ಮೂಲಭೂತ ಹಕ್ಕುಗಳನ್ನು ಕಾಪಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಸಾಮಾಜಿಕ ನ್ಯಾಯ ಕಲ್ಪಿಸುವಲ್ಲಿ ವಕೀಲರ ಪಾತ್ರ ಬಹಳ ಮುಖ್ಯವಾದುದು. ಕಾನೂನಿನ ತೊಡಕು ಗಳನ್ನು ನಿವಾರಿಸುವಲ್ಲಿ ಸಾಕಷ್ಟು ತಿಳುವಳಿಕೆ ಹೊಂದಿರಬೇಕು ಎಂದು ತಿಳಿಸಿದರು.

ಯಾವುದೇ ವ್ಯಾಜ್ಯ ಇತ್ಯರ್ಥಪಡಿಸಬೇಕಾದರೆ ಕೋರ್ಟ್ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಎದುರಿಸಬೇಕಾದ ಕಾನೂನಿನ ಚೌಕಟ್ಟಿನ ಬಗ್ಗೆ ತಿಳಿದುಕೊಳ್ಳಬೇಕು. ಕಾನೂನನಿನ ಮೌಲ್ಯವನ್ನು ಜನತೆಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.

ಕಾನೂನೂ ಕಾಲೇಜು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸತೀಶ್ ಗೌಡ ಅವರು ಮಾತನಾಡಿ, ಕಾನೂನು ಪದವಿ ಪಡೆದವರಿಗೆ ಸಾಕಷ್ಟು ಅವಕಾಶಗಳಿವೆ. ವ್ಯಾಜ್ಯಗಳನ್ನು ಇತ್ಯರ್ಥಪಡಿಸುವಲ್ಲಿ ಅವರಿಗೆ ಉತ್ತಮ ಕೌಶಲ ಇರಬೇಕಾಗುತ್ತದೆ. ಕೋರ್ಟಿನಲ್ಲಿ ವ್ಯಾಜ್ಯ ಇತ್ಯರ್ಥಪಡಿಸಬೇಕಾದರೆ ಕೆಲವೊಂದು ಮೂಲಭೂತ ಅಂಶಗಳನ್ನು ತಿಳಿದುಕೊಳ್ಳಬೇಕಾಗಿರುತ್ತದೆ. ಕಾನೂನು ವೃತ್ತಿಪರತೆ ಬಗ್ಗೆ ಸಾಕಷ್ಟು ಪ್ರಶಿಕ್ಷಣ ಹೊಂದಿರಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸುವಲ್ಲಿ ಉಪನ್ಯಾಸ ಕಾರ್ಯಕ್ರಮಗಳು ನೆರವಾಗಲಿದೆ ಎಂದು ತಿಳಿಸಿದರು.

ನಿವೃತ್ತ ಪ್ರಾಧ್ಯಾಪಕ ಡಾ.ಎನ್. ದಶರಥ್ ಅವರು ಮಾತನಾಡಿ, ಎಲ್ಲಾ ಕ್ಷೇತ್ರಗಳೂ ಸಂವಿಧಾನದ ಮೇಲೆ ಅವಲಂಬಿತವಾಗಿದೆ. ಕಾನೂನಿನ ಕ್ಷೇತ್ರದಲ್ಲಿ ಸಂವಿಧಾನದ ಸಂಪೂರ್ಣವಾಗಿ ಅವಲಂಬಿತವಾಗಿದೆ. ಸಮಾಜದಲ್ಲಿ ವಕೀಲರಾದವರು ಸಾಮಾಜಿಕ ನ್ಯಾಯ ಒದಗಿಸುವ ವೃತ್ತಿಪರತೆ ಹೊಂದಿರಬೇಕು. ಸಮಾಜದಲ್ಲಿ ನೊಂದವರ ಪರವಾಗಿ ಯಾವುದೇ ಅಪೇಕ್ಷೆ ಇಲ್ಲದೆ ನ್ಯಾಯ ಒದಗಿಸುವ ಗುಣ ಹೊಂದಿರಬೇಕು. ಕಾನೂನಿನ ಜತೆಗೆ ಹೊರಗಿನ ವಿಷಯಗಳ ಬಗ್ಗೆ ಅರಿವು ಇದ್ದರೆ ಇನ್ನಷ್ಟು ಕಾನೂನು ಬಲವರ್ಧನೆಗೆ ಅನುಕೂಲಕರವಾಗಲಿದೆ ಎಂದು ಅವರು ತಿಳಿಸಿದರು.

*
ಕಾನೂನು ಶಿಕ್ಷಣದ ಜತೆಗೆ ಸಾಮಾಜಿಕ ಜವಾಬ್ದಾರಿಯನ್ನು ಕಾನೂನು ವಿದ್ಯಾರ್ಥಿಗಳು ಅರಿವು ಹೊಂದಿರಬೇಕು. ಈ ಕ್ಷೇತ್ರದಲ್ಲಿರುವ ಸದಾವಶಕಾಶ ಗಳನ್ನು ಬಳಸಿಕೊಂಡು ಕಾನೂನಿವ ಮೌಲ್ಯ ಎತ್ತಿಹಿಡಿಯಬೇಕು.

-ಡಾ.ಎಸ್.ಎಮ್. ಜಯಕರ, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ