Sunday, 5th January 2025

Identity Card: ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಕಾರ್ಡುಗಳ ವಿತರಿಸಿದ ಶಾಸಕ ಪುಟ್ಟಸ್ವಾಮಿಗೌಡ

ಗೌರಿಬಿದನೂರು: ಬೀದಿ ಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗದ ಒತ್ತುವರಿ ಮಾಡಿಕೊಳ್ಳದೆ ಸಾರ್ವಜನಿಕರಿಗೆ ಕಿರಿಕಿರಿ ಮಾಡದೆ ತಮ್ಮ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಳ್ಳುವುದಕ್ಕೆ ತಾಲೂಕು ಆಡಳಿತ ಸಹಕಾರ ನೀಡಲಿದೆ ಎಂದು ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ ತಿಳಿಸಿದರು.

ನಗರದ ನಗರಸಭೆಯ ಆವರಣದಲ್ಲಿ ಹಮ್ಮಿಕೊಳಲಾಗಿದ್ದ ಬೀದಿ ಬದಿಯ ಸಣ್ಣ ವ್ಯಾಪರಸ್ಥರುಗಳಿಗೆ ನಗರಸಭೆ ವತಿಯಿಂದ ನೀಡುವ ಗುರುತಿನ ಕಾರ್ಡುಗಳನ್ನು ವಿತರಿಸಿ ಮಾತನಾಡಿದರು.

ಇದೇ ವೇಳೆ ನಗರದ ಹೊರ ವಲಯದ ಸಮಾನತಾ ಸೌಧದ ಆವರಣದಲ್ಲಿ ಕರ್ನಾಟಕ ಸರ್ಕಾರದ ಮಹತ್ವವಾದ ಯೋಜನೆಯಾದ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ವಯಕ್ತಿಕವಾಗಿ ಕೊಳವೆ ಬಾವಿ ಕೊರೆದ ಅರ್ಹ ಫಲಾನುಭವಿಗಳಿಗೆ ಪಂಪು,ಮೋಟಾರ್,ಮತ್ತು ಸಲಕರಣೆಗಳನ್ನು ಕೂಡ ವಿತರಣೆ ಮಾಡಿದರು.

ತೊಂಡೇಭಾವಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಲ್ಲಿಪುರ ರಸ್ತೆಯಿಂದ ಎ.ಸಿ.ಸಿ.ಕಾರ್ಖಾನೆಯ ವರೆಗೆ ಸಿ.ಸಿ.ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೇರವೇರಿಸಿ, ಮೇಳ್ಯಾ ಗ್ರಾಮ ಪಂಚಾಯತಿ ವ್ಯಾಪ್ತಿಯ ದಿನ್ನೆ ಹುಣಸೇನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಅನಿರ್ಬಂದಿತ ಅನುದಾನದಲ್ಲಿ ನಿರ್ಮಿಸಲಾದ ಶುದ್ದ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಅಧಿಕಾರಿ ವರ್ಗದವರು, ತೊಂಡೇ ಭಾವಿ, ಮೆಳ್ಯಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರಮುಖ ಮುಖಂಡರುಗಳು, ಗ್ರಾಮ ಪಂಚಾಯತಿ ಅಧ್ಯಕ್ಷರುಗಳು, ಸದಸ್ಯರುಗಳು,ಕಾರ್ಯಕರ್ತರುಗಳು,ಗ್ರಾಮಸ್ಥರುಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: chikkaballapurnews