Thursday, 28th November 2024

ವಿವಿ ಮಟ್ಟದ ಅಂತರ ಕಾಲೇಜು ಕ್ರೀಡಾಕೂಟಕ್ಕೆ ಚಾಲನೆ

ತುಮಕೂರು: ತುಮಕೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ಆಯೋಜಿಸುತ್ತಿರುವ ೨೦೨೨-೨೩ನೇ ಸಾಲಿನ ಅಂತರ್ ಕಾಲೇಜು ಕ್ರೀಡಾಕೂಟಗಳ ಉದ್ಘಾಟನಾ ಸಮಾರಂಭ ಶ್ರೀ ಸಿದ್ಧಗಂಗಾ ಮಠದ ಆವರಣದಲ್ಲಿ ಗುರುವಾರ ನೆರವೇರಿತು.

ಅಂತರ್ ಕಾಲೇಜು ಕ್ರೀಡಾಕೂಟಗಳ ಅಂಗವಾಗಿ ಪುರುಷ ಮತ್ತು ಮಹಿಳೆಯರ ಗುಡ್ಡಗಾಡು ಓಟದ ಸ್ಪರ್ಧೆಯು ಉದ್ಘಾಟನಾ ಸಮಾರಂಭದ ನಂತರ ನಡೆಯಿತು. ಶ್ರೀ ಸಿದ್ಧಗಂಗಾ ಮಠದ ಪೀಠಾಧ್ಯಕ್ಷರು ಶ್ರೀ ಸಿದ್ಧಲಿಂಗ ಸ್ವಾಮಿಯವರು ಮತ್ತು ವಿವಿಯ ಕುಲಪತಿಗಳು ಪ್ರೊ. ಎಂ ವೆಂಕಟೇಶ್ವರಲು ಹಸಿರು ಬಾವುಟ ಹಾರಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು.

ಮಠದ ಸಂಸ್ಕೃತ ಪಾಠಶಾಲಾ ಆವರಣದಿಂದ ಆರಂಭವಾದ ಹತ್ತು ಕಿ. ಮೀ. ಓಟದ ಸ್ಪರ್ಧೆ ಸಿದ್ಧಗಂಗಾ ಕ್ರಾಸ್-ಬೆಳಗುಂಬ-ಕು೦ದೂರು ಕ್ರಾಸ್-ಕುಂದೂರು-ದೇವರಾಯಪಟ್ಟಣ-ಬAಡೇಪಾಳ್ಯ ಮಾರ್ಗವಾಗಿ ಶ್ರೀ ಸಿದ್ಧಗಂಗಾ ಮಠದಲ್ಲಿ ಮುಕ್ತಾಯ ವಾಯಿತು.

ಪುರುಷರು ೬೬ ಮಂದಿ ಹಾಗೂ ಮಹಿಳೆಯರು ೪೧ ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿ ದ್ದರು. ವೇಗವಾಗಿ ಅಂತಿಮ ಗೆರೆ ತಲುಪಿದ ತಲಾ ಆರು ಸ್ಪರ್ಧಿಗಳಿಗೆ ಬಹುಮಾನ ವಿತರಿಸಿ ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಯಿತು. ಕುಣಿಗಲ್ ಜಿಎಫ್‌ಜಿಸಿ ತಂಡವು ಪುರುಷರು ಹಾಗೂ ಮಹಿಳೆಯರ ಎರಡೂ ವಿಭಾಗಗಳಲ್ಲೂ ಚಾಂಪಿಯನ್ ಆಗಿ ಹೊರಹೊಮ್ಮಿತು.

ವಿವಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕ ಡಾ. ಎ. ಎಂ. ಮಂಜುನಾಥ್, ಡಾ. ಸುದೀಪ್ ಕುಮಾರ್ ಆರ್., ವಿವಿಯ ಪ್ರಾಧ್ಯಾಪಕರು, ಸಿಂಡಿಕೇಟ್ ಸದಸ್ಯರು, ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜೇತರ ಪಟ್ಟಿ:

ಪುರುಷರ ವಿಭಾಗ:

ಚಿಕ್ಕಣ್ಣ-ಜೆಎಫ್‌ಜಿಸಿ, ಕುಣಿಗಲ್
ಮಂಜುನಾಥ ಎಂ ಕೆ-ಜೆಎಫ್‌ಜಿಸಿ, ಸಿರಾ
ವಿವೇಕ ವಿ ಸಿ-ಜೆಎಫ್‌ಜಿಸಿ, ತಿಪಟೂರು
ದರ್ಶನ್ ಜೆ ಆರ್-ಜೆಎಫ್‌ಜಿಸಿ, ತುರುವೇಕೆರೆ
ಛತ್ರೇಶ-ಜಿಎಫ್‌ಜಿಸಿ, ತುಮಕೂರು
ಋತ್ವಿಕ್-ಜಿಎಫ್‌ಜಿಸಿ, ತಿಪಟೂರು

ಮಹಿಳೆಯರ ವಿಭಾಗ

ಅನುಶಾ ಎಸ್ ಎ-ಜಿಎಫ್‌ಜಿಸಿ ಕುಣಿಗಲ್
ಪಲ್ಲವಿ ಕೆ ಜಿ-ಜಿಎಫ್‌ಜಿಸಿ, ಕುಣಿಗಲ್
ಚೈತ್ರ-ಜಿಎಫ್‌ಜಿಸಿ, ಕುಣಿಗಲ್
ಅಂಕಿತ ಜಿ ಟಿ-ಎಸ್‌ಎಸ್‌ಸಿಡಬ್ಲ್ಯೂ, ತುಮಕೂರು
ಸುಶ್ಮಶ್ರೀ ಡಿ ಕೆ-ಎಸ್‌ಯುಪಿಎಫ್‌ಜಿಸಿ, ಕ್ಯಾತ್ಸಂದ್ರ
ಹರ್ಷಿತ ಆರ್-ಜಿಎಫ್‌ಜಿಸಿ, ಸಿರಾ