Tuesday, 26th November 2024

ನಾನು ಉಢಾಫೆಯಿಂದ ಏನನ್ನು ಮಾತನಾಡಿಲ್ಲ: ಸಚಿವ ಜೆ.ಸಿ.ಮಾಧುಸ್ವಾಮಿ

ಚಿಕ್ಕನಾಯಕನಹಳ್ಳಿ : ನಾನು ಉಢಾಫೆಯಿಂದ ಏನನ್ನು ಮಾತನಾಡಿಲ್ಲ ಸಹಕಾರ ಕ್ಷೇತ್ರದಲ್ಲಿ ನಡೆಯುತ್ತಿರುವ ಅನಧಿಕೃತ ವ್ಯವಹಾರಗಳ ಬಗ್ಗೆ ಮಾತನಾಡಿದ್ದೇನೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಅವರಿಗೆ ಸಚಿವ ಜೆ.ಸಿ.ಮಾಧುಸ್ವಾಮಿ ಟಾಂಗ್ ನೀಡಿದರು.

ಮಾಧುಸ್ವಾಮಿ ಕಾನೂನು ಸಚಿವರಾಗಿದ್ದರೂ ಉಡಾಫೆಯಿಂದ ಮಾತನಾಡುತ್ತಿದ್ದಾರೆ ಎಂಬ ಕೆ.ಎನ್ ರಾಜಣ್ಣ ಹೇಳಿಕೆಗೆ ಪಟ್ಟಣದಲ್ಲಿ ತಿರುಗೇಟು ನೀಡಿದ ಅವರು ರಾಜಣ್ಣ ನಾನು ನಿಮಗಿಂತಲೂ ಮೊದಲೇ ಸಹಕಾರಿ ನನ್ನ ರಕ್ತದ ಕಣ ಕಣದಲ್ಲೂ ಸಹಕಾರಿ ಅಂಶ ವಿದೆ. ರಾಜ್ಯದ ಮಹಾಮಂಡಲದ ಅಧ್ಯಕ್ಷನಾಗಿದ್ದವನು ಜವಾಬ್ದಾರಿಯಿಂದ ಕೆಲವು ಪ್ರಶ್ನೆಗಳನ್ನು ಕೇಳುತ್ತೇನೆ ವಿವರಿಸಿ ಎಂದರು.

ಡಿಸಿಸಿ ಬ್ಯಾಂಕ್ಗಳಲ್ಲಿ ಕಾನೂನು ವ್ಯಾಪ್ತಿ ಮೀರಿ ವ್ಯವಹಾರಗಳು ನಡೆಯುತ್ತಿವೆ. ಎಪಿಕ್ ನಿಯಮದ ಪ್ರಕಾರ ಡಿಸಿಸಿ ಬ್ಯಾಂಕ್ಗಳು ವಿಎಸ್ಎಸ್ಎನ್ ಸೊಸೈಟಿಗಳಿಗೆ ರೈತರಿಗೆ ಸಾಲ ನೀಡಲು ಹಣ ಮಂಜೂರು ಮಾಡವುದಷ್ಟೇ ಕೆಲಸ ಆದರೆ ಡಿಸಿಸಿ ಬ್ಯಾಂಕಿನ ಸಿಬ್ಬಂದಿಗಳು ಲೋನ್ ಪಡೆಯುವವರ ವಿವರಗಳನ್ನು ಸಂಗ್ರಹಿಸಿ ಪರಿಶೀಲಿಸುತ್ತಿದ್ದಾರೆ.

ಸಾಲ ನೀಡುವು ದಕ್ಕೆ ಶೇ ೧೦ರಷ್ಟು ಷೇರು ಹಣವನ್ನು ಸಂಗ್ರಹ ಮಾಡುತ್ತಿದ್ದಾರೆ. ಇದರಲ್ಲಿ ಶೇ ೫ ರಷ್ಟು ಡಿಸಿಸಿ, ಶೇ ೫ ರಷ್ಟು ಫ್ಯಾಕ್ಸ್ಗೆ ರ‍್ಗಾವಣೆ ಮಾಡಬೇಕು. ಆದರೆ ಶೇ ೧೦ ರಷ್ಟು ಷೇರು ಹಣವನ್ನು ತುಮಕೂರು ಕೇಂದ್ರ ಡಿಸಿಸಿ ಬ್ಯಾಂಕ್ನವರೆ ಇಟ್ಟುಕೊಳ್ಳುತ್ತಾರೆ. ಇದಕ್ಕೆ ಸರಕಾರದಿಂದಲೂ ಬಡ್ಡಿ ಪಡೆದು ರೈತರಿಂದಲೂ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದರು.

ರೈತರಿಂದ ಅನಧಿಕೃತವಾಗಿ ೧೩೦೦ ರೂಗಳನ್ನು ಡಿಸಿಸಿ ಬ್ಯಾಂಕ್ಗಳು ಸಂಗ್ರಹಿಸುತ್ತಿವೆ. ರಾಜಣ್ಣನವರು ನನ್ನ ಬಳಿ ರಸೀದಿ ಕೇಳುತ್ತಿದ್ದಾರೆ. ರಸೀದಿ ನೀಡಿದ್ದರೆ ಅದನ್ನು ವಿಧಾನಸಭೆಯಲ್ಲಿ ಪ್ರಶ್ನಿಸುತ್ತಿದ್ದೆ ಎಂದು ಗುಡುಗಿದರು. ಸಹಕಾರ ಕ್ಷೇತ್ರದ ಜನರಿಗೆ, ರೈತರಿಗೆ ಸರಿಯಾದ ಆಡಳಿತ ನೀಡಬೇಕೆಂದು ಬದ್ದತೆ ಇದ್ದರೆ ಅವರೇ ತನಿಖೆಗೆ ಆದೇಶಿಸಬೇಕಿತ್ತು. ಆದರೆ ರೈತರ ಪರವಾದ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಇದನ್ನು ಉಡಾಫೆ ಎನ್ನುವುದಾದರೆ ಜನರ ತರ‍್ಮಾನಕ್ಕೆ ಬಿಡುತ್ತೇನೆ. ಬಹಿರಂಗ ರ‍್ಚೆಗೆ ನಾನು ಸಿದ್ದನಿದ್ದೇನೆ. ಮುಂದಿನ ದಿನಗಳಲ್ಲಿ ಹೋರಾಟದ ಹಾದಿ ಹಿಡಿಯುತ್ತೇನೆ ಎಂದು ಎಚ್ಚರಿಸಿದರು.