ಮಧುಗಿರಿ : ಕೆರೆಗಳ ಅಂತರ್ಜಲ ವೃದ್ಧಿಗೆ ಮೂಲ ಸಂಪನ್ಮೂಲಗಳಾಗಿದ್ದು ಗ್ರಾಮೀಣ ಭಾಗದ ಮನುಕುಲದ ಜೀವನಾಡಿ ಎಂದು ಜನಮುಖಿ ಸಂಸ್ಥೆ ಅಧ್ಯಕ್ಷ ಎಲ್.ಸಿ.ನಾಗರಾಜ್ ಅಭಿಪ್ರಾಯಪಟ್ಟರು.
ತಾಲೂಕಿನ ಹೊಸಕೆರೆ ಕೆರೆಗೆ ಗ್ರಾಮಸ್ಥರು ನೆರವೇರಿಸಿದ ಗಂಗಾಪೂಜೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆರೆಗಳಿಂದ ಬೇಸಾಯ ಬೇಸಾಯದಿಂದ ದೇಶಕ್ಕೆ ಅನ್ನ ಎಂಬುದು ಒಂದಕ್ಕೊAದು ಇರುವ ನಂಟು. ಇದಕ್ಕಾಗಿ ನಮ್ಮ ಪೂರ್ವಜರು ಇಂತಹ ಕೆರೆಗಳನ್ನು ನಿರ್ಮಿಸಿದ್ದಾರೆ. ನಾನು ಕೆರೆ ಕಟ್ಟಿಲ್ಲ. ಹಾಗಾಗಿ ಇದೇ ಗ್ರಾಮಸ್ಥರಿಂದ ನಡೆದ ಗಂಗಾಪೂಜೆ ಯಲ್ಲಿ ಭಾಗವಹಿಸಿದ್ದು ಇವರ ಸಂತೋಷವನ್ನು ನೋಡಿ ತೃಪ್ತಿಯಾಗಿದೆ.
ನಾನು ಚಿಕ್ಕಮಾಲೂರು ಗ್ರಾಮದವನಾಗಿದ್ದು, ಮಿಡಿಗೇಶಿ ನನ್ನ ತಾಯಿಯ ತವರು. ನಾನೂ ಸ್ಥಳೀಯನಾಗಿದ್ದು ನನ್ನ ಜನರ ಸಂಪ್ರಯಾದವನ್ನು ಗೌರವಿಸುವುದು ಹಾಗೂ ಅಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸಂತೋಷ ತರಲಿದೆ. ಈ ಕೆರೆಯ ಅಚ್ಚುಕಟ್ಟು ದಾರರು ಇಂದು ಈ ಪೂಜೆ ನೆರವೇರಿಸಿದ್ದು ಕೆರೆಯ ಸಂರಕ್ಷಣೆ ಎಲ್ಲರ ಹೊಣೆ. ಹಿಂದೆ ೧೨೦೦ ಅಡಿ ಕೊರೆದರೂ ಸಿಗದ ಗಂಗಾಮಾತೆ ಇಂದು ಸ್ವತಃ ಉಕ್ಕಿ ಹರಿಯುತ್ತಿರುವುದಕ್ಕೆ ಇಂತಹ ಕೆರೆಗಳು ಕಾರಣವಾಗಿದ್ದು ಅದೊಂದು ಅಮೂಲ್ಯ ಸಂಪತ್ತು. ಸರ್ಕಾರವೇ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ಇದರಲ್ಲಿ ನಮ್ಮ ಹೊಣೆ ಕೂಡ ಇದ್ದು ಇದನ್ನು ತುಂಬಾ ಜಾಗರೂಕತೆಯಿಂದ ಕಾಪಾಡಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ಹನುಮಂತರಾಯಪ್ಪ, ಮುಖಂಡರಾದ ನೀರಕಲ್ಲು ರಾಮಕೃಷ್ಣ, ಟಿ.ಜಿ.ಗೋವಿಂದರಾಜು, ರಾಘವೇಂದ್ರ, ಚಂದ್ರಣ್ಣ, ಹೊಸಕೆರೆ ಸಿಕೆಜಿಬಿ ಮ್ಯಾನೇಜರ್ ರಾಮಕೃಷ್ಣಯ್ಯ, ಗೋವಿಂದಪ್ಪ, ಮಂಜುನಾಥ್, ಗ್ಯಾಸ್ ರಂಗನಾಥ್, ಮಾಜಿ ಗ್ರಾ.ಪಂ. ಸದಸ್ಯ ಚಿಕ್ಕಣ್ಣ, ಹೂವಿನ ಈರಣ್ಣ, ಹಾಗೂ ನೂರಾರು ರೈತರು ಇದ್ದರು.