ಚಿಕ್ಕನಾಯಕನಹಳ್ಳಿ: ಪಟ್ಟಣಕ್ಕೆ ಆಗಮಿಸಲಿರುವ ಭಾರತ್‌ಜೋಡೋ ಯಾತ್ರೆಯ ಹಿನ್ನಲೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ತಂಡ ಸೋಮವಾರ ಸ್ಥಳ ಪರಿಶೀಲನೆ ನಡೆಸಿದರು.
ಅ.೯ ಹಾಗೂ ೧೦ ರಂದು ಈ ಭಾಗದ ಮಾರ್ಗದಲ್ಲಿ ಹಾದುಹೋಗುವು ರಾಹುಲ್ ಗಾಂಧಿ ಯವರ ಭಾರತ್‌ಜೋಡೋ ಯಾತ್ರೆ ಯಲ್ಲಿ ಭಾಗವಹಿಸುವ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಊಟೋಪಚಾರದ ವ್ಯವಸ್ಥೆಯನ್ನು ಪಟ್ಟಣದ ದೇಶೀಯ ವಿದ್ಯಾಪೀಠ ಪ್ರೌಢಶಾಲೆಯ ಮೈದಾನದಲ್ಲಿ ನಡೆಸಲು ನಿರ್ಧರಿಸಲಾಗಿದೆ. ತುಮಕೂರು, ಹಾಸನ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಆಗಮಿಸುವ ಹಿನ್ನಲೆಯಲ್ಲಿ ಸ್ಥಳಪರಿಶೀಲನೆ ನಡೆಸ ಲಾಯಿತು.
ಅತಿಥಿಗಳು ಒಂದು ದಿನದ ವಾಸ್ತವ್ಯಕ್ಕಾಗಿ ಪೋಚುಕಟ್ಟೆ ಗ್ರಾಮ ಆಯ್ಕೆಯಾಗಿದ್ದು, ಅಲ್ಲಿಯೂ ಸ್ಥಳ ಪರಿಶೀಲನೆ ನಡೆಸಲಾಯಿತು.
ಈ ಸಂಬ0ಧ ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್, ಕಾಂಗ್ರೆಸ್ ವಕ್ತಾರ ಮುರಳೀಧರ ಹಾಲಪ್ಪ, ಮಾಜಿ ಸಚಿವ ಟಿ. ಬಿ. ಜಯಚಂದ್ರ, ಷಡಕ್ಷರಿ ಕೆ.ವಿ, ವಿಧಾನ ಪರಿಷತ್ ಸದಸ್ಯ ರಾಜೇಂದ್ರ, ಮುಖಂಡರಾದ ಸಿ. ಬಸವರಾಜು, ಬಿ.ಲಕ್ಕಪ್ಪ, ಕೆ.ಜಿ. ಕೃಷ್ಣೇಗೌಡ, ಬ್ರಹ್ಮಾನಂದ, ಸೌಭಾಗ್ಯ, ಸಣ್ಣತಾಯಮ್ಮ, ಚಿಕ್ಕಣ್ಣ, ತಿಮ್ಮರಾಜು ಮುಂತಾದವ ರಿದ್ದರು.