ಗುಬ್ಬಿ: ಪಟ್ಟಣದ ಪಂಚಮುಖಿ ದೇವಸ್ಥಾನದ ಆವರಣದಲ್ಲಿ ಮಾನವ ಹಕ್ಕುಗಳ ಮಾಹಿತಿ ಸಮಿತಿ ಹಮ್ಮಿಕೊಂಡಿದ್ದ ವಿವಿಧ ಘಟಕಗಳಿಗೆ ಆಯ್ಕೆಯಾದ ಪದಾಧಿಕಾರಿಗಳಿಗೆ ಆಯ್ಕೆ ಪತ್ರ ಹಾಗೂ ಐಡಿ ಕಾರ್ಡ್ ವಿತರಿಸಿ ಮಾತನಾಡಿದ ಸಮಿತಿಯ ಜಿಲ್ಲಾ ಉಸ್ತುವಾರಿ ನಿಂಗರಾಜು ನಮ್ಮ ಹಕ್ಕುಗಳಿಗಾಗಿ ನಮ್ಮ ಹೋರಾಟ ಎಂಬ ಧ್ಯೇಯ ಘೋಷಣೆಯೊಂದಿಗೆ ರಾಜ್ಯದ್ಯಂತ ಸಮಿತಿಯು ವಿಸ್ತಾರವಾಗುತ್ತಿದ್ದು ಸಮಿತಿಯಿಂದ ಆಯ್ಕೆಯಾದ ಪದಾಧಿಕಾರಿಗಳು ಪ್ರಾಮಾಣಿಕವಾಗಿ ಜನರಿಗೆ ನ್ಯಾಯ ಒದಗಿಸಿ ಕೊಡುವ ಕೆಲಸದಲ್ಲಿ ಮುಂದಾಗಬೇಕು ಎಂದು ತಿಳಿಸಿದರು.
ಸಮಿತಿಯ ತಾಲೂಕು ಅಧ್ಯಕ್ಷ ಮಂಚಲದೊರೆ ರಮೇಶ್ ಮಾತನಾಡಿ ತಾಲೂಕಿನಲ್ಲಿ ಸಮಿತಿಯು ಪ್ರಾರಂಭವಾದ ದಿನಗ ಳಿಂದಲೂ ಸ್ವಯಂ ಪ್ರೇರಿತರಾಗಿ ಹೆಚ್ಚಿನ ಸಂಖ್ಯೆ ಯಲ್ಲಿ ಸದಸ್ಯರು ಸೇರ್ಪಡೆಯಾಗುತ್ತಿದ್ದು ಮುಂದಿನ ತಿಂಗಳುಗಳಲ್ಲಿ 500-600 ಸದಸ್ಯರ ಸೇರ್ಪಡೆಯಾಗಲಿದ್ದು ಮುಂದಿನ ದಿನಗಳಲ್ಲಿ ಬೃಹತ್ ಸಂಘಟನೆಯಾಗಿ ರೂಪಗೊಳ್ಳ ಲಿದೆ ಎಂದು ತಿಳಿಸಿದರು.
ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿರೂಪಾಕ್ಷಮ್ಮ( ರೂಪ ) ಮಾತನಾಡಿ ಮುಂದಿನ ದಿನಗಳಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಹಾಗೂ ಬ್ರಷ್ಟಾಚಾರದ ವಿರುದ್ಧ ಹೋರಾಡಲು ಸಿದ್ದರಿದ್ದು ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಲ್ಲಿ ಕೂಡಲೆ ಸ್ಪಂದಿಸ ಲಾಗುವುದು ಜಿಲ್ಲಾ ಹಾಗೂ ರಾಜ್ಯ ಸಮಿತಿಯ ಸಲಹೆ ಮೇರೆಗೆ ಕಾರ್ಯನಿರ್ವಹಿಸಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಶೇಕ್ ಅನ್ಸರ್ , ಗೌರವಾಧ್ಯಕ್ಷ ಜುಂಜೆ ಗೌಡ ತಾಲೂಕು ಅಧ್ಯಕ್ಷ ಮಂಚದೋರೆ ರಮೇಶ್, ಉಪಾಧ್ಯಕ್ಷ ವಿರೂಪಾಕ್ಷಯ್ಯ, ಮಹಿಳಾ ಅಧ್ಯಕ್ಷೇ ವಿರುಪಾಕ್ಷಮ್ಮ ಶ್ರೀನಿವಾಸ್, ನಾಗರಾಜು, ಗೋವಿಂದ ರಾಜು, ಮಹಿಳಾ ಘಟಕದ ಮಂಜುಳಾ ಸೌಮ್ಯ,ರೂಪಾರಾಣಿ, ಲೀಲಾ, ಬೃಂದ, ಶಿವಮ್ಮ, ಶಶಿಕಲಾ, ಬೀರೇಶ್, ಮಹೇಶ್, ಆನಂದ್ ಕುಮಾರ್, ಅನಿಲ್ ಶ್ರೀಧರ, ಪರಮೇಶ್, ಮಂಜುನಾಥ್ ಮುಂತಾದವರಿದ್ದರು.