ವಿದ್ಯುನ್ಮಾನ ಗೋಷ್ಠಿಯಲ್ಲಿ ವಿಶ್ರಾಂತ ಕುಲಪತಿ ಡಾ. ಚಿದಾನಂದ ಗೌಡ ಹಕ್ಕೊತ್ತಾಯ
ಕನ್ನಡ ಮುದುಕರ ಭಾಷೆ ಆಗುತ್ತಿದೆ: ಜಿಎನ್ಎಂ
ಹರೀಶ್ ಕೇರಾ
ಸಮಾನಾಂತರ ವೇದಿಕೆ ೧ಮಂಡ್ಯ: ತಂತ್ರಜ್ಞಾನ ಯುಗದಲ್ಲಿ ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಡಿಜಿಟಲ್ ಪ್ರಾಧಿಕಾರ ರೂಪಿಸಿಕೊಂಡು ಪ್ರಯತ್ನ ಮಾಡಬೇಕಾಗಿದೆ ಎಂದು ಸೃಜನಶೀಲತೆ – ವಿದ್ಯುನ್ಮಾನ ಮಾಧ್ಯಮಗಳ ಸವಾಲುಗಳು ಗೋಷ್ಠಿಯಲ್ಲಿ ಸರಕಾರವನ್ನು ಒತ್ತಾಯಿಸಲಾಯಿತು.
ಎಐ, ಸೃಜನಶೀಲತೆ ಎಲ್ಲವೂ ಮನುಷ್ಯನ ಮಿತ್ರನಾಗಬೇಕೇ ಹೊರತು ಶತ್ರು ಆಗಬಾರದು. ಮಾನವನ ಆಸ್ತಿ ಸೃಜನಶೀಲತೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ತಂತ್ರಜ್ಞಾನವನ್ನು ಬಳಸಿಕೊಳ್ಳುವ, ಮನುಷ್ಯನನ್ನು ಬೆಳೆಸುವ ಕೆಲಸ ಆಗಬೇಕು. ಕಲೆ, ವಿಜ್ಞಾನ, ಶಿಕ್ಷಣ ಎಲ್ಲ ಕಡೆಯೂ ತಂತ್ರಜ್ಞಾನದ ಬೆಳವಣಿಗೆ ಸಾಕಷ್ಟಿದೆ. ತಂತ್ರಜ್ಞಾನ ಬೆಳೆದಂತೆ ಮನುಷ್ಯನ ನೈತಿಕತೆಗೂ ಧಕ್ಕೆಯಾಗುವ ಭಯ ಇದೆ.
ಕನ್ನಡ ವರ್ಚುವಲ್ ಯುನಿವರ್ಸಿಟಿ ಹಾಗೂ ಡಿಜಿಟಲ್ ಪ್ರಾಧಿಕಾರ ಸ್ಥಾಪಿಸಿ ಮುಂದುವರಿಯಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಕುಲಪತಿ ಡಾ. ಚಿದಾನಂದ ಗೌಡ ನುಡಿದರು.
ವಿದ್ಯುನ್ಮಾನ ಮಾಧ್ಯಮ; ಕನ್ನಡ ಪಾರಮ್ಯ ಅಗತ್ಯ: ಇವತ್ತಿನ ಕನ್ನಡ ಮುದುಕರ ಕನ್ನಡವಾಗುತ್ತಿದೆ. ಕನ್ನಡ ಮನೆಮನಗಳಿಂದ ಮರೆಯಾಗುತ್ತಿದೆ. ಮಕ್ಕಳು ಕನ್ನಡವನ್ನು ಬಳಸುತ್ತಿಲ್ಲ. ಹೀಗಾಗಿ ವಿದ್ಯುನ್ಮಾನ ಮಾಧ್ಯಮದಲ್ಲಿ ಕನ್ನಡದ ಪಾರಮ್ಯವನ್ನು ಸಾಧಿಸುವುದು ಅತ್ಯಗತ್ಯವಾಗಿದೆ ಎಂದು ಗೋಷ್ಠಿಯ ಆಶಯ ಭಾಷಣ ಮಾಡಿದ ಹಿರಿಯ
ಪತ್ರಕರ್ತ ಜಿ.ಎನ್ ಮೋಹನ್ ನುಡಿದರು. ನಾವು ಕಂಪ್ಯೂಟರ್ನಲ್ಲಿ ಎಷ್ಟು ಕನ್ನಡ ಪದಗಳನ್ನು ಬಳಸುತ್ತಿದ್ದೇವೆ, ಅದಕ್ಕೆ ಸರಿಯಾಗಿ ಕನ್ನಡ ಕಲಿಸಿದ್ದೇವೆಯೇ ಎಂದು ನೋಡಬೇಕಿದೆ. ಮುಂದಿನ ಎಲೆಕ್ಟ್ರಾನಿಕ್ ಯುಗದಲ್ಲಿ ಕನ್ನಡ ಉಳಿಯಬೇಕು. ಕನ್ನಡ ತಂತ್ರಾಂಶ ರೂಪಿಸಬೇಕು. ಹಂಪಿ ವಿಶ್ವ ವಿದ್ಯಾಲಯರೂಪಿಸಿದ ಕುವೆಂಪು ತಂತ್ರಾಂಶದ ಕತೆ
ಏನಾಯಿತೋ ಗೊತ್ತಿಲ್ಲ. ಸರಕಾರಕ್ಕೆ ಕನ್ನಡ ತಂತ್ರಾಂಶದ ಕಿವಿಯೇ ಇಲ್ಲ. ಇಂಟರ್ನೆಟ್ ಅನ್ನು ಮಾತ್ರ ಉಪಯೋಗಕ್ಕೆ ತಕ್ಕಷ್ಟು ಬಳಸುತ್ತಿದೆ. ಇದನ್ನೆಲ್ಲ ಸರಿಯಾಗಿ ನಿರ್ವಹಿಸಲು ಡಿಜಿಟಲ್ ಕನ್ನಡ ಪ್ರಾಧಿಕಾರ ಬೇಕು ಎಂದು ಅವರು ಒತ್ತಾಯಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಎಲ್ಲವೂ ಲಭ್ಯ: ಕನ್ನಡ ಸಾಹಿತ್ಯ ಮತ್ತು ಸಾಮಾಜಿಕ ಜಾಲತಾಣ ವಿಷಯದ ಬಗ್ಗೆ ಐಟಿ ತಜ್ಞ ಓಂಶಿವಪ್ರಕಾಶ್ ಮಾತನಾಡಿ, ಸಾಮಾಜಿಕ ಜಾಲತಾಣ ಎಂದರೆ ಊರಲ್ಲಿನ ಅರಳಿಕಟ್ಟೆಯಂತೆ. ಇಲ್ಲಿ ಎಲ್ಲ ವಿಷಯಗಳಿಗೂ ಸ್ಥಾನವಿದೆ. ಆದರೆ ನಮ್ಮ ಕನ್ನಡ ಸಾಹಿತ್ಯಕ್ಕೆ ಸರಕಾರ ಅಲ್ಲದೆ, ಜನಸಾಮಾನ್ಯರು ಏನೆ ಮಾಡು ತ್ತಿದ್ದೇವೆ ಎಂದು ನಾವು ನಮ್ಮನ್ನು ಕೇಳಿಕೊಳ್ಳಬೇಕು. ಸಮುದಾಯ ಸಾಮಾಜಿಕ ಜಾಲತಾಣಗಳಿಂದ ಇಂಟರ್ ನೆಟ್ ಸಾಕಷ್ಟು ಕೊಡುಗೆ ಪಡೆದಿದೆ. ವಿಕಿಪೀಡಿಯ 300ಕ್ಕೂ ಹೆಚ್ಚು ಭಾಷೆಯಲ್ಲಿ ಇದೆ. ಕನ್ನಡದಲ್ಲೂ ಇದರಲ್ಲಿ ಸಾಕಷ್ಟು ಮಾಹಿತಿ ಇದೆ. ಇದು ಸಾಧ್ಯವಾದುದು ಸೋಶಿಯಲ್ ಮೀಡಿಯಾ ಗಳಿಂದ. ವಚನ ಸಾಹಿತ್ಯ, ದಾಸ ಸಾಹಿತ್ಯ ಮುಂತಾದವು ಡಿಜಿಟಲೀಕರಣಗೊಂಡು ಇಂದು ಬೆರಳ ತುದಿಯಲ್ಲಿ ಲಭ್ಯವಿವೆ ಎಂದು ಅವರು ನುಡಿದರು.
ಎಲ್ಲಿ ಮಾಧ್ಯಮಗಳಲ್ಲಿ ಕನ್ನಡ ಬಳಕೆಯಾಗಲಿ
ತಂತ್ರeನ ಯುಗದಲ್ಲಿ ಕನ್ನಡದ ಅನುಸಂಧಾನ ವಿಚಾರದಲ್ಲಿ ಮಾತನಾಡಿದ ಶಂಕರ್ ಸಿಹಿಮೊಗ್ಗೆ, ಎಲ್ಲಾ ಸಾಮಾ ಜಿಕ ಜಾಲತಾಣಗಳಲ್ಲಿ, ವೈದ್ಯಕೀಯ, ಇಂಜಿನಿ ಯರಿಂಗ್ ಕ್ಷೇತ್ರದಲ್ಲಿ ಕನ್ನಡವನ್ನು ಹೆಚ್ಚು ಬಳಸಬೇಕು ಹಾಗೂ ತಂದೆ – ತಾಯಂದಿರು ಮಕ್ಕಳ ಜೊತೆಗೆ ಹೆಚ್ಚು ಮಾತೃಭಾಷೆ ಕನ್ನಡ ವನ್ನು ಬಳಸಬೇಕು. ಹಾಗಾದರೆ ಮಾತ್ರ ಕನ್ನಡ ಆಧುನಿಕ ಯುಗದಲ್ಲಿ ಉಳಿಯಲು ಸಾಧ್ಯ ಎಂದರು.
*
ತಂತ್ರಜ್ಞಾನ ಮಾನವನ ಮಿತ್ರನಾಗಬೇಕು; ಸೃಜನಶೀಲತೆ ಸಮರ್ಪಕ ಬಳಕೆಗೆ ಆಗ್ರಹ
ತಂತ್ರಜ್ಞಾನ ಬೆಳೆದಂತೆ ಮಾನವನ ನೈತಿಕತೆಗೂ ಧಕ್ಕೆಯಾಗುವ ಭೀತಿ ಭವಿಷ್ಯದಲ್ಲಿ ಕೃತಕ ತಂತ್ರಜ್ಞಾನದಿಂದ
ಅಪಾಯ ಖಚಿತ: ತಜ್ಞರ ಎಚ್ಚರಿಕೆ
ಸಾಮಾಜಿಕ ಜಾಲತಾಣ, ಇತರ ಮಾಧ್ಯಮಗಳಲ್ಲಿ ಕನ್ನಡ ಬಳಕೆಗೆ ಒತ್ತಾಯ
ವಿದ್ಯುನ್ಮಾನ ಮಾಧ್ಯಮದಲ್ಲೂ ಕನ್ನಡ ಪಾರಮ್ಯ ಅತ್ಯಗತ್ಯ , ಕನ್ನಡ ತಂತ್ರಾಂಶ ರೂಪಿಸಲು ಮನವಿ
*
ಕೃತಕ ಬುದ್ಧಿಮತ್ತೆ ಸದ್ಯದ ಮನುಷ್ಯನ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಿದೆ. ನಾವು ಸ್ವತಂತ್ರ ಎಂದು ತಿಳಿದಿದ್ದೇವೆ. ಆದರೆ ಎಐ ಆಲ್ಗಾರಿದಂ ನಮ್ಮನ್ನು ಸತತವಾಗಿ ಗಮನಿಸಿ ನಮ್ಮ ವರ್ತನೆಗಳನ್ನು ನಿಯಂತ್ರಿಸುತ್ತಿರುತ್ತದೆ. ಎಐಯಿಂದ ನಾವು ಸೃಷ್ಟಿ ಮಾಡುವ ಕಂಟೆಂಟ್ ಮತ್ತೆ ಅದೇ ವ್ಯವಸ್ಥೆಯನ್ನು ಇಂಟರ್ನೆಟ್ ಮೂಲಕ ಸೇರಿಕೊಂಡು
ಅದೇ ಗಾಳಿಯನ್ನು ಮತ್ತೆ ಮತ್ತೆ ಉಸಿರಾಡುವ ಇಕೋ ಚೇಂಬರ್ಗಳಾಗಿ ನಾವು ಬದಲಾಗಲಿದ್ದೇವೆ.
-ವೈ.ಎನ್ ಮಧು, ಸಾಹಿತಿ