ತುಮಕೂರು: ಅ.18 ರಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಯನ್ನು ಚರ್ಚಿಸಿ,ಜಾರಿಗೆ ತರಬೇಕೆಂದು ಒತ್ತಾಯಿಸಿ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ಅ. 16 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ರಾಜ್ಯ ಪ್ರಧಾನ ಸಂಚಾಲಕ ರಾಮಚಂದ್ರಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಳೆದ ೧೧ ವರ್ಷಗಳ ಹಿಂದೆ ಕರ್ನಾಟಕ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ನ್ಯಾಯವಾದಿ ಕಾಂತರಾಜು ಅವರು ಸುಪ್ರಿಂಕೋರ್ಟಿನ ಗೈಡ್ಲೈನ್ಸ್ ಆಧಾರ ದಲ್ಲಿ ಸರಕಾರಿ ನೌಕರರನ್ನು ಬಳಸಿಕೊಂಡು ಕರ್ನಾಟಕದ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ನಡೆಸಿದ್ದು, ಸರಕಾರ ಶೋಷಿತ ಸಮುದಾಯಗಳ ಅಭಿವೃದ್ದಿಗೆ ಕಾರ್ಯಕ್ರಮಗಳನ್ನು ಜಾರಿಗೆ ತರಲು ಈ ವರದಿ ಅತ್ಯಂತ ಅವಶ್ಯಕವಾಗಿರುವ ಹಿನ್ನೆಲೆಯಲ್ಲಿ ಸರಕಾರ ಕೂಡಲೇ ಒಪ್ಪಿ ಇದನ್ನು ಜಾರಿಗೆ ತರಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲು ಶೋಷಿತ ಸಮುದಾಯಗಳ ಪಾಲು ಹೆಚ್ಚಿದೆ.ಬೇರೆ ಸಮುದಾಯಗಳ ಒತ್ತಡಕ್ಕೆ ಮಣಿದು ನ್ಯಾ.ಕಾಂತರಾಜು ವರದಿ ಜಾರಿಗೆ ತರಲು ಹಿಂದೇಟು ಹಾಕಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಎಲ್ಲಾ ಸಚಿವರಿಗೂ ಘೇರಾವ್ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು,ವರದಿಯಲ್ಲಿ ಸುಮಾರು ೭೫ಕ್ಕೂ ಹೆಚ್ಚು ಹೊಸ ಅಲೆಮಾರಿ,ಅರೆ ಅಲೆಮಾರಿ,ಬುಡಕಟ್ಟು ಜಾತಿಗಳು ಪತ್ತೆಯಾಗಿವೆ.ಮೂಲವಾಹಿನಿಯಿಂದ ಬಹುದೂರವೇ ಉಳಿದಿವೆ.
ಇಂತಹ ಸಮುದಾಯಗಳಿಗೆ ಸರಕಾರದ ಸವಲತ್ತು ದೊರೆಯಬೇಕೆಂದರೆ ಅರ್ಥಿಕ,ಸಾಮಾಜಿಕ ಹಾಗೂ ಶೈಕ್ಷಣ ಕ ವರದಿ ಜಾರಿ ಅನಿವಾರ್ಯ.ಹಾಗಾಗಿ ಮುಖ್ಯಮಂತ್ರಿಗಳು ಒತ್ತಡಕ್ಕೆ ಮಣ ಯದೆ ಅ.18ರ ಕ್ಯಾಬಿನೆಟ್ ಸಭೆಯಲ್ಲಿ ವರದಿಯನ್ನು ಮಂಡಿಸಿ,ಜಾರಿಗೆ ತರಬೇಕು.ಈ ಬಗ್ಗೆ ಸರಕಾರದ ಮೇಲೆ ಒತ್ತಡ ತರಲು ಅ.16 ಬುಧವಾರ ಬೆಂಗಳೂರಿನಲ್ಲಿ ಬೃಹತ್ ಹೋರಾಟ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಸ್ಲಂ ಜನಾಂದೋಲನ ಕರ್ನಾಟಕದ ಎ.ನರಸಿಂಹಮೂರ್ತಿ ಮಾತನಾಡಿ, 1931ರ ನಂತರ ದೇಶದಲ್ಲಿ ಜಾತಿ ಸಮೀಕ್ಷೆಗಳೇ ನಡೆದಿಲ್ಲ.ಇದು ಸರಕಾರ ದಮನಿತ ಸಮುದಾಯಗಳಿಗೆ ಕಾರ್ಯಕ್ರಮಗಳನ್ನು ರೂಪಿಸಲು ಸಾಕಷ್ಟು ಹಿನ್ನೆಡೆಗೆ ಕಾರಣವಾಗಿದೆ. ಹಾಗಾಗಿ ನ್ಯಾಯಾವಾದಿ ಕಾಂತರಾಜು ವರದಿಯನ್ನು ಸರಕಾರ ಒಪ್ಪಿಕೊಳ್ಳಲೇ ಬೇಕಿದೆ. ಈಗಾಗಲೇ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆ ವೇಳೆಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಕಾಂತರಾಜು ವರದಿ ಮತ್ತು ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವ ಭರವಸೆ ನೀಡಿತ್ತು. ಆದರೆ ಇದುವರೆಗೂ ಸಾಧ್ಯವಾಗಿಲ್ಲ.ಸಂಪತ್ತು ಮತ್ತು ಭೂಮಿಯಲ್ಲಿ ದಲಿತರಿಗೆ ಸಮನಾದ ಪಾಲು ಸಿಕ್ಕಿಲ್ಲ. ಬಲಾಢ್ಯ ಜಾತಿಗಳು ಈ ವರದಿಯನ್ನು ವಿರೋಧಿಸುವ ಬದಲು,ಸಾರ್ವಜನಿಕ ಚರ್ಚೆ ವೇಳೆ ತಮ್ಮ ತರಕಾರು ಸಲ್ಲಿಸಲಿ.ಸರಕಾರ ಯಾವ ಕಾರಣಕ್ಕೂ ಒತ್ತಡಕ್ಕೆ ಮಣ ಯಬಾರದು. ಶೋಷಿತ ಸಮುದಾಯಗಳು ನಿಮ್ಮ ಜೊತೆಗೆ ಇದೆ ಎಂಬುದನ್ನು ಮುಖ್ಯಮಂತ್ರಿಗಳು ಅರಿತುಕೊಳ್ಳಬೇಕೆಂದರು.
ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಜಿಲ್ಲಾ ಸಂಚಾಲಕ ಕೆಂಪರಾಜು ಮಾತನಾಡಿ, ಅ.16 ರಂದು ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ನಡೆಯುವ ಪ್ರತಿಭಟನೆಗೆ ತುಮಕೂರು ಜಿಲ್ಲೆಯಿಂದ ಸುಮಾರು ೨೦೦೦ ಸಾವಿರ ಜನರು ತೆರಳಲಿದ್ದು, ಸರಕಾರದ ಮೇಲೆ ಒತ್ತಡ ತರುವ ಕೆಲಸ ಮಾಡುತ್ತೇವೆ.ಅರ್ಥಿಕ, ಸಾಮಾಜಿಕ ಶೈಕ್ಷಣ ಕ ವರದಿ ಅತಿ ಅಗತ್ಯವಾಗಿ ಬೇಕಾಗಿದೆ. ಹಾಗಾಗಿ ಈ ಹೋರಾಟವನ್ನು ಗಂಭೀರವಾಗಿ ಪರಿಗಣ ಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ,ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಚಾಲಕರಾದ ಆನಂತನಾಯ್ಕ್, ದಲಿತ ಮುಖಂಡರಾದ ಚೇಳೂರು ಶಿವನಂಜಪ್ಪ, ಮುರುಳಿ ಕುಂದೂರು,ಕಾಂಗ್ರೆಸ್ ಎಸ್ಟಿ ಘಟಕದ ಅಧ್ಯಕ್ಷ ನರಸಿಂಹಯ್ಯ, ಇರ್ಫಾನ್,ಎಡ್ವಿನ್,ಮಡಿವಾಳ ಸಮಾಜ ಶಾಂತಕುಮಾರ್,ಜಿಲ್ಲಾ ಕುರುಬರ ಸಂಘದ ಉಪಾಧ್ಯಕ್ಷ ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: Tumkur News: ಭಕ್ತರ ಸಮ್ಮುಖದಲ್ಲಿ ಭಕ್ತಿ ಪರಾಕಾಷ್ಠೆಯಿಂದ ನಡೆದ ಚೌಡೇಶ್ವರಿದೇವಿ ಮುಳ್ಳುಗದ್ದಿಗೆ ಉತ್ಸವ