Sunday, 15th December 2024

ಅಂತರಗಂಗೆ ಬೆಟ್ಟದ ಬಂಡೆ ಮೇಲೆ ವಿವಾದಾತ್ಮಕ ಬರಹ: ಆರೋಪಿ ಬಂಧನ

ಕೋಲಾರ: ಅಂತರಗಂಗೆ ಬೆಟ್ಟದ ಬಂಡೆ ಮೇಲೆ ವಿವಾದಾತ್ಮಕ ಬರಹ ಬರೆದ ಆರೋಪಕ್ಕೆ ಸಂಬಂಧಪಟ್ಟಂತೆ ಪಾಪರಾಜನಹಳ್ಳಿಯ ಅನ್ವರ್ ಅಲಿಯಾಸ್​ ಪ್ಯಾರೇಜಾನ್ ಎಂಬವನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ‌ ಗುಹೆ ನಿರ್ಮಾಣ ಮಾಡಿಕೊಂಡಿದ್ದ ಎನ್ನುವ ಆರೋಪ ಕೂಡ ಕೇಳಿ ಬಂದಿದೆ.

ವಿವಾದಾತ್ಮಕ ಬರಹಕ್ಕೆ ಸಂಬಂಧಪಟ್ಟಂತೆಅರಣ್ಯ ಇಲಾಖೆಯವರು ಕೋಲಾರ ಗ್ರಾಮಾಂತರ ಠಾಣೆಯಲ್ಲಿ ನೀಡಿದ ದೂರಿನ ಮೇರೆಗ ಆರೋಪಿಯನ್ನು ಪತ್ತೆ ಹಚ್ಚಿ ತಮ್ಮ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಅಂತರಗಂಗೆ ಬೆಟ್ಟದ ಬಂಡೆ ಕಲ್ಲುಗಳ ಮೇಲೆ ಹಸಿರು ಬಣ್ಣ ಬೆಟ್ಟದ ಮೇಲೆ ಪಾಕ್‌ ಧ್ವಜದ ರೀತಿ ಹಸಿರು ಬಣ್ಣದ ಚಿತ್ರ ಬಿಡಿಸಿ, ಪಾಕ್‌ ಚಿಹ್ನೆ ಬಿಡಿಸಿ ಅಲ್ಲದೆ ಅದರಲ್ಲಿ 786 ಎಂದು ಬರೆದಿದ್ದ ಎನ್ನಲಾಗಿದೆ.