Sunday, 15th December 2024

ಕೊಪ್ಪಳದ ವರನನ್ನು ವರಿಸಿದ ಪಶ್ಚಿಮ ಬಂಗಾಳದ ಯುವತಿ

ಕೊಪ್ಪಳ: ಪಶ್ಚಿಮ ಬಂಗಾಳ ಮೂಲದ ಯುವತಿ ಕೊಪ್ಪಳದ ವರನ ಕೈ ಹಿಡಿದ ವಿಶೇಷ ಮದುವೆಯೊಂದು ನಡೆದಿದೆ. ಪೂಜಾ ಘೋಷ್ ಎಂಬ ಯುವತಿ ಕೊಪ್ಪಳದ ಮಂಜುನಾಥ್ ಶ್ರೇಷ್ಠಿ ಎಂಬುವವರ ಜತೆ ಸಪ್ತಪದಿ ತುಳಿದಿದ್ದಾರೆ.

ಆಕೆ ಸುಂದರ ಯುವತಿ, ಆದರೆ ಕಣ್ಣು ಕಾಣಿಸದು. ಆತ ಸುಂದರ ಯುವಕ. ಯುವತಿ ಕನ್ನಡ ನೆಲದವಳಲ್ಲ. ಹೀಗಿದ್ದರೂ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿರಿಸಲು ಇದ್ಯಾವುದೂ ಅಡ್ಡಿಯಾಗಲಿಲ್ಲ. ಭಾಷೆ, ಸಂಸ್ಕೃತಿ ಬೇರೆಯಾಗಿದ್ದರೂ ಭಾವನೆ ಒಂದೇ ಆಗಿತ್ತು. ಸ್ನೇಹಿತರು, ಬಂಧುಗಳು ಹಾಗೂ ಹಿತೈಷಿಗಳು ಮದುವೆಗೆ ಸಾಕ್ಷಿ ಯಾದರು.

ಪೂಜಾ ಘೋಷ್ ಮೂಲತಃ ಪಶ್ಚಿಮ ಬಂಗಾಳದವರು. ಈಕೆಗೆ ತಾಯಿ ಹಾಗೂ ಸಹೋದರ ಇದ್ದು, ಸಹೋದರನಿಗೆ ಆರೋಗ್ಯ ಸಮಸ್ಯೆ ಇದೆ. ಈ ಮಧ್ಯೆ ಪೂಜಾ ಘೋಷ್ ಅವರಿಗೆ ಕಳೆದ ನಾಲ್ಕು ವರ್ಷಗಳ ಹಿಂದೆ ಟ್ಯೂಮರ್ ಆಗಿ ದೃಷ್ಠಿ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಆಕೆ ಚಿಕಿತ್ಸೆಗಾಗಿ ಬೆಂಗಳೂರಿಗೆ ಆಗಮಿಸಿದ್ದು ಇಲ್ಲಿಯೇ ನೆಲೆಸಿದ್ದರು. ಹೀಗಿರುವಾಗ ಮದುವೆ ವಯಸ್ಸಿಗೆ ಬಂದಿದ್ದ ಪೂಜಾ ಅವರಿಗೆ ದೃಷ್ಟಿ ಇಲ್ಲದ ಕಾರಣಕ್ಕೆ ಮದುವೆ ಮಾಡಿಕೊಳ್ಳಲು ಯಾರು ಮುಂದೆ ಬರಲಿಲ್ಲ.

ಯಾವುದೇ ಸಮಸ್ಯೆ ಇಲ್ಲದ ಕೊಪ್ಪಳದ ಮಂಜುನಾಥ ಶ್ರೇಷ್ಠಿ ಅವರು ವಿಶೇಷಚೇತನರನ್ನೇ ಮದುವೆ ಯಾಗುವುದಾಗಿ ತಮ್ಮ ಮಾಹಿತಿಯನ್ನು ಮ್ಯಾಟ್ರಿ ಮೊನಿಯಲ್ಲಿ ಹಾಕಿದ್ದರು. ಪೂಜಾ ಘೋಷ್​ ಕೂಡ ತಮ್ಮ ಸ್ವವಿವರವನ್ನು ಮ್ಯಾಟ್ರಿಮೊನಿಯಲ್ಲಿ ಹಾಕಿದ್ದರು.