Tuesday, 26th November 2024

ಗುಡಿಸಲು ಮುಕ್ತ ಕೊರಟಗೆರೆ ಕ್ಷೇತ್ರವನ್ನಾಗಿ ಮಾಡ್ತೀನಿ

೨೪ಗ್ರಾಪಂಗೆ ೩೬೬೯ಮನೆ ಮಂಜೂರು.. ೫೧೮೬ಜನರಿಗೆ ಇಲಾಖೆಯ ಸರಕಾರದ ಸವಲತ್ತು..

ಕೊರಟಗೆರೆ ಕ್ಷೇತ್ರದ ಅಭಿವೃದ್ದಿಗೆ ೧೧೯ಕೋಟಿ ಮೀಸಲು

೫೦ ಸ್ತ್ರೀ ಶಕ್ತಿ ಸಂಘಗಳಿಗೆ ೭೫ಲಕ್ಷ ಸಾಲಸೌಲಭ್ಯ. ಗ್ರಾಪಂ ಅಧ್ಯಕ್ಷರಿಗೆ ಹೆಚ್ಚಿನ ಜವಾಬ್ದಾರಿ ಅಗತ್ಯ

ಕೊರಟಗೆರೆ: ಗುಡಿಸಲು ಮುಕ್ತ ಕೊರಟಗೆರೆ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಪ್ರಮುಖ ಗುರಿ.. ಕೊರಟಗೆರೆಯ ೨೪ ಗ್ರಾಪಂ ವ್ಯಾಪ್ತಿಯ ೩೬೬೯ ಜನರಿಗೆ ಮನೆಗಳ ಮಂಜೂರಾತ್ರಿ ಆದೇಶ ಪತ್ರ ನೀಡಿದ್ದೇನೆ. ೧೦ ವಿವಿಧ ಸರಕಾರಿ ಇಲಾಖೆಯಿಂದ ೫೧೮೬ಜನ ಗ್ರಾಮೀಣ ಫಲಾನುಭವಿಗಳಿಗೆ ಸರಕಾರದ ಸೌಲಭ್ಯ ವಿತರಣೆ ಮಾಡಿದ್ದೇನೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿ ದರು.

ಕೊರಟಗೆರೆ ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಕೊರಟಗೆರೆ ಆಡಳಿತ, ತಾಪಂ, ೨೪ಗ್ರಾಪಂ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಶನಿವಾರ ಏರ್ಪಡಿಸಲಾಗಿದ್ದ ವಸತಿ ಯೋಜನೆಯ ಮನೆ ಮಂಜೂರಾತಿ ಪತ್ರ, ಸ್ತ್ರೀ ಶಕ್ತಿ ಸಂಘಗಳಿಗೆ ಸಿಐಎಫ್ ಸಾಲದ ಚೆಕ್ ಮತ್ತು ವಿವಿಧ ಸವಲತ್ತು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೊರಟಗೆರೆಯ ಬಡಜನರಿಗೆ ದೇವರಾಜು ಅರಸು ಯೋಜನೆಯಡಿ ೭೭೦ ಮನೆ, ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆ ಯಡಿ ೭೨೨ ಮನೆ, ಬಸವ ವಸತಿ ಯೋಜನೆಯಡಿ ೨೧೭೭ಮನೆ ಸೇರಿ ಒಟ್ಟು ಕೊರಟಗೆರೆಗೆ ೩೬೬೯ ಮನೆಗಳು ಮಂಜೂರಾಗಿವೆ.

ತೋಟಗಾರಿಕೆ-೩೫, ಕಂದಾಯ ಇಲಾಖೆ-೬೦೦, ಮೀನುಗಾರಿಕೆ-೯, ರೇಷ್ಮೆ-೧೨, ಅರಣ್ಯ ಇಲಾಖೆ-೪, ಪಶು ಇಲಾಖೆ-೪೬, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ-೨೦, ತಾಪಂ-೪೪೦೦, ಪಪಂ-೫೦ ಮತ್ತು ಕೃಷಿ ಇಲಾಖೆ-೧೦ ಸೇರಿ ಒಟ್ಟು ೫೧೮೬ಜನ ಪಲಾನುಭವಿಗಳಿಗೆ ಸರಕಾರದ ಸೌಲಭ್ಯ ವಿತರಿಸಿದ್ದೇನೆ ಎಂದರು.

ಕೊರಟಗೆರೆ ತಾಲೂಕಿನಲ್ಲಿ ೯೬೫ಸ್ವಸಹಾಯ ಸಂಘ ಮತ್ತು ೧೧೪ಒಕ್ಕೂಟಗಳಿವೆ. ಎನ್‌ಆರ್‌ಎಲ್‌ಎಂ ಯೋಜನೆಯಡಿ ೨೦೨೧-೨೨ರಲ್ಲಿ ೧೧೪೮೬ಜನ ಮಹಿಳೆಯರಿಗೆ ೪ಕೋಟಿ ೫೯ಲಕ್ಷ ಅನುಧಾನ ವಿತರಣೆ, ೫೭೧ಜನರಿಗೆ ಪಿಂಚಣಿ ಸೌಲಭ್ಯ ಮತ್ತು ೨೪ಜನರಿಗೆ ಮನೆಗಳ ಹಕ್ಕುಪತ್ರ ವಿತರಣೆ, ಮತ್ತು ಕೊಳಚೆ ನಿರ್ಮೂಲನೆ ಮಂಡಳಿ ಯಿ0ದ ಕೊರಟಗೆರೆ ಪಟ್ಟಣದ ಜನತೆಗೆ ೫೭೫ಮನೆಗಳ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದೆ. ಕೊರಟಗೆರೆ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ನಾನು ಹಗಲುರಾತ್ರಿ ದುಡಿಯುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಪಂ ಉಪ ಕಾರ್ಯದರ್ಶಿ ಅತಿಕ್‌ಪಾಷ, ತಾಪಂ ಆಡಳಿತಾಧಿಕಾರಿ ದೀಪಾಶ್ರೀ, ತಹಶಿಲ್ದಾರ್ ನಾಹೀದಾ, ತಾಪಂ ಇಓ ಡಾ.ದೊಡ್ಡಸಿದ್ದಯ್ಯ, ಪಪಂ ಮುಖ್ಯಾಧಿಕಾರಿ ಭಾಗ್ಯ, ಕೃಷಿ ಇಲಾಖೆ ನಾಗರಾಜು, ಅರಣ್ಯ ಇಲಾಖೆ ಸುರೇಶ್, ಸಿಡಿಪಿಓ ಅಂಬಿಕಾ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅರಕೆರೆಶಂಕರ್, ಯುವಧ್ಯಕ್ಷ ವಿನಯ್, ತಾಪಂ ಮಾಜಿ ಅಧ್ಯಕ್ಷ ಮಾಜಿ ಉಪಾಧ್ಯಕ್ಷ ವೆಂಕಟಪ್ಪ ಸೇರಿದಂತೆ ೨೪ಗ್ರಾಪಂಗಳ ಪಿಡಿಓ ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

೫೦ಸ್ತ್ರೀಶಕ್ತಿ ಸ್ವಸಹಾಯ ಸಂಘಕ್ಕೆ ೭೫ಲಕ್ಷ..
ಮಹಿಳೆಯರಿಗೆ ಶೇ.೫೦ರಷ್ಟು ಮೀಸಲಾತಿನ ಸ್ಥಾನಮಾನ ನೀಡಿದ್ದು ಅಂದಿನ ಪ್ರಧಾನಿ ರಾಜೀವ್‌ಗಾಂಧಿ. ಮಹಿಳೆಯರಿಗೆ ಅಧಿಕಾರ ದೊರೆತರೇ ಗ್ರಾಮೀಣ ಪ್ರದೇಶ ಅಭಿವೃದ್ದಿ ಆಗಲಿದೆ. ಮಹಿಳೆಯರ ಆರ್ಥಿಕ ಅಭಿವೃದ್ದಿಗಾಗಿ ಎನ್‌ಆರ್‌ಎಲ್‌ಎಂ ಯೋಜನೆಯಡಿ ಕೊರಟಗೆರೆಯ ೫೦ಸ್ತಿçÃಶಕ್ತಿ ಸ್ವಸಹಾಯ ಸಂಘಗಳಿಗೆ ತಲಾ ೭೫ಲಕ್ಷ ಸಾಲಸೌಲಭ್ಯ ವಿತರಣೆ ಮಾಡಿದ್ದೇನೆ ಎಂದು ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಕೊರಟಗೆರೆಗೆ ೧೧೯ಕೋಟಿ ಅನುದಾನ ಮೀಸಲು..
ಪ್ರಸ್ತುತ ೨೦೨೨-೨೩ನೇ ಸಾಲಿನಲ್ಲಿ ಪಂಚಾಯತ್ ರಾಜ್-೨೦ಕೋಟಿ, ಕರ್ನಾಟಕ ಮೂಲಸೌಕರ್ಯ ಅಭಿವೃದ್ದಿ ನಿಗಮ-೧೯ಕೋಟಿ, ಪಿಡ್ಲೂö್ಯಡಿ ಇಲಾಖೆ-೫ಕೋಟಿ, ತಾಪಂ-೩ಕೋಟಿ, ಮುಖ್ಯಮಂತ್ರಿ ವಿಶೇಷ ನಿಧಿ-೩೦ಕೋಟಿ, ವಿಶ್ವೇಶ್ವರಯ್ಯ ಜಲನಿಗಮ-೬ಕೋಟಿ, ಕಾವೇರಿ ನೀರಾವರಿ ನಿಗಮ-೪ಕೋಟಿ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ-೨ಕೋಟಿ, ಸಮುದಾಯ ಆರೋಗ್ಯ ಕೇಂದ್ರ-೩೦ಕೋಟಿ ಸೇರಿ ಕೊರಟಗೆರೆ ಕ್ಷೇತ್ರದ ಶಾಶ್ವತ ಅಭಿವೃದ್ದಿಗೆ ೧೧೯ಕೋಟಿ ಅನುಧಾನ ಮೀಸಲಿದೆ ತ್ವರಿತವಾಗಿ ಕಾಮಗಾರಿ ಪ್ರಾರಂಭ ಆಗಲಿದೆ ಎಂದು ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.

***

ಕೊರಟಗೆರೆ ಕ್ಷೇತ್ರವು ಅತಿವೃಷ್ಟಿಯಿಂದ ನಲುಗಿದೆ. ಮನೆಗಳು ನಾಶವಾಗಿ ಜನ ಸಾಯ್ತಿದಾರೇ. ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಓಗೆ ಕೊರಟಗೆರೆ ಕ್ಷೇತ್ರದ ಅಭಿವೃದ್ದಿಯ ನಿರ್ಲಕ್ಷವೇಕೆ. ಕಾಲಚಕ್ರ ಹಿಂಗೇ ಇರೋದಿಲ್ಲ ಬದಲಾವಣೆ ಆಗುತ್ತೇ. ಐ ಡೋಂಟ್ ಕೇರ್ ನಾನು ಯಾರಿಗೂ ತಲೆ ಕೆಡಿಸಿಕೋಳ್ಳೊದಿಲ್ಲ. ನನಗೇ ನನ್ನ ಕ್ಷೇತ್ರವನ್ನು ಅಭಿವೃದ್ದಿ ಮಾಡೋದು ಗೋತ್ತು. ನಾನು ಎಲ್ಲವನ್ನು ಸೂಕ್ಷö್ಮವಾಗಿ ಗಮನಿಸುತ್ತಾ ಇದೀನಿ ನಮಗೂ ಕಾಲ ಬರುತ್ತೇ.
ಡಾ.ಜಿ.ಪರಮೇಶ್ವರ್. ಮಾಜಿ ಡಿಸಿಎಂ. ಕೊರಟಗೆರೆ