Tuesday, 26th November 2024

ಆ.೨೦ ರಂದು ಕಸಬಾ ಹೋಬಳಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ

ಚಿಕ್ಕನಾಯಕನಹಳ್ಳಿ : ಕಸಬಾ ಹೋಬಳಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವು ಆಗಸ್ಟ್ ೨೦ ರಂದು ಪಟ್ಟಣದ ಜೋಗಿಹಳ್ಳಿ ಆದಿ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದರು.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸಮ್ಮೇಳನದಂದು ನಡೆಯುವ ಮೆರವಣಿಗೆ, ಉದ್ಘಾಟನಾ ಕರ‍್ಯಕ್ರಮ, ಉಪನ್ಯಾಸ ಗೋಷ್ಠಿ, ವಿಚಾರ ಗೋಷ್ಠಿ, ಯುವ ಕವಿಗೋಷ್ಠಿ, ರ‍್ಚಾ ಗೋಷ್ಠಿ ಹಾಗೂ ಸಮಾರೋಪ ಸಮಾರಂಭದ ಬಗ್ಗೆ ಮಾಹಿತಿ ನೀಡಿದರು.

ಅಂದು ಬೆಳಗ್ಗೆ ೭.೩೦ ಕ್ಕೆ ಧ್ವಜಾರೋಹಣ ಕರ‍್ಯಕ್ರಮ ನಡೆಯಲಿದೆ. ಬೆಳಗ್ಗೆ ೮.೩೦ಕ್ಕೆ ಮೆರವಣಿಗೆ ಉದ್ಘಾಟನೆ ನಡೆಯಲಿದೆ.

ಬೆಳಗ್ಗೆ ೧೦.೩೦ಕ್ಕೆ ಕರ‍್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದ್ದು ಸಚಿವ ಜೆ.ಸಿ. ಮಾಧುಸ್ವಾಮಿ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಉದ್ಘಾಟನೆ ನೆರವೇರಿಸಲಿದ್ದಾರೆ.

ಹಿರಿಯ ಸಾಹಿತಿ ಹೆಚ್.ಎಸ್.ಶಿವಲಿಂಗಯ್ಯ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಲಿದ್ದಾರೆ. ತಾಲೂಕು ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಕಟ್ಟೆಮನೆ ಸಮ್ಮೇಳನಾಧ್ಯಕ್ಷರಿಗೆ ಧ್ವಜಪ್ರದಾನ ಮಾಡಲಿದ್ದಾರೆ. ಕಸಬಾ ಹೋಬಳಿ ಕಸಾಪ ಅಧ್ಯಕ್ಷ ಗಂಗಾಧರ್ ಮಗ್ಗದಮನೆ ಆಶಯ ನುಡಿಗಳನ್ನಾಡಲಿದ್ದಾರೆ. ತಾ.ಕಸಾಪ ಗೌರವ ಕರ‍್ಯರ‍್ಶಿ ಸಿ.ರವಿಕುಮಾರ್ ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಲಿದ್ದಾರೆ.

ಮಧ್ಯಾಹ್ನ ೧೨.೩೦ ರಿಂದ ೧.೪೫ ರವರೆಗೆ ಸ್ಥಳೀಯ ಗುಡಿ ಕೈಗಾರಿಕೆ ಸಾಧ್ಯತೆ ಬಗ್ಗೆ ಉಪನ್ಯಾಸ ಗೋಷ್ಠಿ ನಡೆಯಲಿದೆ. ೨.೧೫ ರಿಂದ ೩.೩೦ ರವರೆಗೆ ವಿಚಾರ ಗೋಷ್ಠಿ ನಡೆಯಲಿದ್ದು ಹೆಚ್.ಎಸ್.ಎಸ್. ಸಾಹಿತ್ಯದ ಬಗ್ಗೆ ಹಾಗೂ ಆಧುನಿಕ ಸಾಹಿತ್ಯ ಕ್ಷೇತ್ರಕ್ಕೆ ಚಿ.ನಾ.ಹಳ್ಳಿ ಕೊಡುಗೆ ಬಗ್ಗೆ ವಿಷಯ ಮಂಡಣೆ ನಡೆಯಲಿದೆ.

ಮಧ್ಯಾಹ್ನ ೩.೪೫ ಕ್ಕೆ ಯುವ ಕವಿಗೋಷ್ಠಿ ನಡೆಯಲಿದೆ. ಗೋಷ್ಠಿಯಲ್ಲಿ ಯುವಕವಿಗಳು ತಮ್ಮ ಕವಿತೆಗಳನ್ನು ವಾಚಿಸುವರು. ಸಂಜೆ ೫ಕ್ಕೆ ಪ್ರಚಲಿತ ಸವಾಲು – ಶಿಕ್ಷಣ-ಸ್ವಾವಲಂಬನಿ ಬಗ್ಗೆ ರ‍್ಚಾ ಗೋಷ್ಠಿ ನಡೆಯಲಿದೆ.

ಸಂಜೆ ೬.೩೦ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಸಂಸ್ಕೃತಿ ಚಿಂತಕ ಎಸ್.ಜಿ.ಸಿದ್ದರಾಮಯ್ಯ ಸಮಾರೋಪ ನುಡಿ ಗಳನ್ನಾಡುವರು. ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಸಮ್ಮೇಳನ ಅಧ್ಯಕ್ಷರಿಗೆ ಗೌರವರ‍್ಪಣೆ ಮಾಡಲಿದ್ದಾರೆ. ನಿವೃತ್ತ ಪ್ರಾಂಶು ಪಾಲ ತಿಮ್ಮನಹಳ್ಳಿ ವೇಣುಗೋಪಾಲ್ ಹಾಗಲವಾಡಿ ಜುಂಜಪ್ಪನ ಕಥೆಗಳು ಬಗ್ಗೆ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ರಾಜ್ಯ ಜೈವಿಕ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಕೆ.ಎಸ್.ಕಿರಣ್ ಕುಮಾರ್ ಸಾಧಕರಿಗೆ ಸನ್ಮಾನ ಮಾಡಲಿದ್ದಾರೆ. ಈ ಸಂರ‍್ಭ ದಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಪ್ರತಿಶತ ೧೦೦% ಫಲಿತಾಂಶ ಪಡೆದ ಶಾಲಾ ಮುಖ್ಯೋಪಾಧ್ಯಾಯರಿಗೆ ಸನ್ಮಾನ ನಡೆಯಲಿದೆ.

ಬೆಂಗಳೂರಿನ ಕೈಗಾರಿಕಾ ಮತ್ತು ವಾಣಿಜ್ಯ ಇಲಾಕೆಯ ಹೆಚ್ಚುವರಿ ನರ‍್ದೇಶಕ ಸಿ.ಟಿ.ಮುದ್ದುಕುಮಾರ್ ಸ್ನಾತಕೋತ್ತರ ರ‍್ಯಾಂಕ್ ವಿಜೇತರಿಗೆ ಸನ್ಮಾನ ಮಾಡಲಿದ್ದಾರೆ.

ಬಿಇಓ ಹೆಚ್.ಕೆ.ಮನಮೋಹನ್ ಹಾಗೂ ರ‍್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮರ‍್ತಿ ಪ್ರತಿಭಾ ಪುರಸ್ಕಾರ ಮಾಡಲಿ ದ್ದಾರೆ. ಕಸಬಾ ನಗರ ಘಟಕದ ಅಧ್ಯಕ್ಷ ಸಿ.ಹೆಚ್.ಗಂಗಾದರಯ್ಯ ಮಗ್ಗದಮನೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಗೌರವ ಕರ‍್ಯರ‍್ಶಿ ಕಂಟಲಗೆರೆ ಸಣ್ಣಹೊನ್ನಯ್ಯ, ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಕಟ್ಟೆಮನೆ, ಕಸಬಾ ಹೋಬಳಿ ಘಟಕದ ಅಧ್ಯಕ್ಷ ಸಿ.ಹೆಚ್.ಗಂಗಾಧರ್ ಮಗ್ಗದಮನೆ, ಗೌರವ ಕರ‍್ಯರ‍್ಶಿ ಸಿ.ಎ.ನಿರೂಪ್ ರಾವತ್, ಕೋಶಧ್ಯಕ್ಷ ಯೋಗೀಶ ಕುಮಾರ್,ಮಹಿಳಾ ಸಂಚಾಲಕಿ ವರಮಹಾಲಕ್ಷ್ಮಿ, ರಾಜಕುಮಾರ್, ಲೋಕೇಶ್, ನವೀನ್ ರವತ್, ಸಿ ಎನ್.ಮಂಜುನಾಥ್, ಶಬ್ಬೀರ್, ಚಂದ್ರಶೇಖರ್, ಧನಂಜಯ ಸೇರಿದಂತೆ ಕಸಾಪ ಪದಾಧಿಕಾರಿಗಳು ಹಾಜರಿದ್ದರು.