ತುಮಕೂರು: ವಿದ್ಯಾರ್ಥಿ ಸಂಘ ಎಂಬುದು ಬೆಳೆಯುವ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಿಕೊಳ್ಳಲು ಸಹಕಾರಿ ಯಾಗಲಿವೆ ಎಂದ ತುಮಕೂರು ಮಹಾನಗರಪಾಲಿಕೆಯ ವಿರೋಧಪಕ್ಷದ ನಾಯಕ ಜೆ.ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಆರ‍್ಯನ್ ಸ್ಕೂಲ್ನಲ್ಲಿ ಆಯೋಜಿಸಿದ್ದ ವಿದ್ಯರ‍್ಥಿ ಸಂಘದ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಆರ‍್ಯನ್ ಶಾಲೆಯ ಹಳೆಯ ವಿದ್ಯಾರ್ಥಿಯಾಗಿ ಈ ಶಾಲೆಯಲ್ಲಿ ಸನ್ಮಾನ ಸ್ವೀಕರಿಸುತ್ತಿರುವುದು ಆತ್ಯಂತ ಸಂತಸ ನೀಡಿದೆ. ೮-೯ ಮತ್ತು ೧೦ನೇ ತರಗತಿಯಲ್ಲಿ ಇಲ್ಲಿ ವಿದ್ಯಾರ್ಥಿ ನಾಯಕನಾಗಿ, ಸ್ಕೌಟ್ಸ್ ಮತ್ತು ಗೈಡ್ಸ್ ನ ಮುಖ್ಯಸ್ಥನಾಗಿ ರೂಢಿಸಿಕೊಂಡ ಬಂದ ತತ್ವಗಳು ಇಂದು ನನ್ನನ್ನು ಪಾಲಿಕೆಯ ವಿಪಕ್ಷ ನಾಯಕನಾಗಿ ರೂಪಿಸಿದೆ.
ಇಲ್ಲಿನ ಶಿಕ್ಷಕರು ಮತ್ತು ಸಿಬ್ಬಂದಿಗಳು ಅಂದು ನನ್ನಲ್ಲಿ ತುಂಬಿದ್ದ ಆರ‍್ಶದ ಗುಣಗಳು ರ‍್ವ ಉತ್ತಮ ಜನಪ್ರತಿನಿಧಿಯಾಗಿ ಹೆಸರು ಮಾಡಲು ಸಹಾಯಕವಾಗಿವೆ. ಹಾಗಾಗಿ ಶಾಲೆಯ ಎಲ್ಲ ಸಿಬ್ಬಂದಿ ರ‍್ಗದವರಿಗೂ, ಶಿಕ್ಷಕ ವೃಂದದವರಿಗೂ ಹೃಪರ‍್ವಕ ಅಭಿನಂದನೆ ಸಲ್ಲಿಸುವು ದಾಗಿ ಜೆ.ಕುಮಾರ್ ತಿಳಿಸಿದರು.
ರ‍್ಯನ್ ಶಾಲೆಗೆ ತನ್ನದೇ ಆದ ಇತಿಹಾಸವಿದೆ. ಈ ಶಾಲೆಯನ್ನು ಉದ್ಘಾಟಿಸಿದ್ದು, ದೇಶದ ಮೊದಲ ಪ್ರಧಾನಿ ನೆಹರು ಅವರು, ಆರ‍್ಯನ್ ಶಾಲೆಯ ವಿದ್ಯಾರ್ಥಿ ಸಂಘಟನೆಗೆ ಚಾಲನೆ ನೀಡಿದವರು ಉಕ್ಕಿನ ಮಹಿಳೆಯೆ ಎಂದು ಕರೆಯಿಸಿಕೊಳ್ಳುವ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ, ಇ೦ತಹ ಭವ್ಯ ಇತಿಹಾಸ ಇರುವ ಶಾಲೆಯಲ್ಲಿ ಕಲಿತ ನೂರಾರು ವಿದ್ಯಾರ್ಥಿಗಳು ರಾಜಕೀಯ ಕ್ಷೇತ್ರದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಇದಕ್ಕೆ ಶಾಲೆಯ ವಿದ್ಯಾರ್ಥಿ ಸಂಘವೇ ಕಾರಣ. ಶಾಲೆಯ ಒಳಗೆ ಯಾವುದೇ ಜಾತಿ, ರ‍್ಮದ ಭೇಧ, ಭಾವವಿಲ್ಲದೆ ಕಲೆತು ಕಲಿಯುವ ಮಕ್ಕಳು ಶಾಲೆಯ ಹೊರಗೂ ಇದೇ ವಾತಾವರಣದಲ್ಲಿ ಬದುಕುವಂತಹ ಉದ್ದಾತ್ತ ಗುಣಗಳನ್ನು ಮಕ್ಕಳ ಮನಸ್ಸಿನಲ್ಲಿ ತುಂಬು ವಂತೆ ಜೆ.ಕುಮಾರ್ ಮನವಿ ಮಾಡಿದರು.
ಆರ‍್ಯನ್ ಹೈಸ್ಕೂಲ್ ಅಸೋಸಿಯೇಷನ್ನ ಉಪಾಧ್ಯಕ್ಷ ಹೆಚ್.ಎನ್. ಚಂದ್ರಶೇಖರ್, ಸಂಸತ್ತಿನ ರೀತಿಯಲ್ಲಿಯೇ ಮಕ್ಕಳಿಗೆ ವಿವಿಧ ಇಲಾಖೆಗಳ ಕರ‍್ಯವೈಖರಿಯನ್ನು ಪರಿಚಯಿಸಬೇಕೆಂಬುದು ನಮ್ಮ ಕೋರಿಕೆಯಾಗಿದೆ.ಆಗ ಮಾತ್ರ ಮಕ್ಕಳಿಗೆ ದೇಶದ ರಾಜಕೀಯ ವ್ಯವಸ್ಥೆಯ ಪರಿಚಯವಾಗಲಿದೆ.ಅದು ಭವಿಷ್ಯದ ನಾಯಕರಾಗಿ ಗುರುತಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಕರ‍್ಯಕ್ರಮದಲ್ಲಿ ಆರ‍್ಯನ್ ಹೈಸ್ಕೂಲ್ ಅಸೋಸಿಯೇಷನ್ನ ಕರ‍್ಯರ‍್ಶಿ ಆರ್.ಎನ್.ಸತ್ಯನಾರಾಯಣ್, ಖಜಾಂಚಿ ಕೆ.ವಿ.ಕುಮಾರ್, ನಿರ್ದೇಶಕರಾದ ಟಿ.ಎಸ್.ರಾಮಶೇಷ, ಎಂ.ಹೆಚ್.ಮಂಜುನಾಥ್, ಡಿ.ಎನ್.ಜಯರಾ೦, ಮುಖ್ಯಶಿಕ್ಷಕರಾದ ಟಿ.ಆರ್. ಅನಿತ, ಟಿ.ಸಿ.ಉಮಾದೇವಿ, ಟಿ,ಆರ್.ಗೋಪಾಲ್ ಸೇರಿದಂತೆ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.