Thursday, 5th December 2024

Cyclone: ಫೆಂಗಲ್ ಚಂಡಮಾರುತ: ನಾಳೆ ಶಾಲಾ ಕಾಲೇಜುಗಳಿಗೆ ರಜೆ

ಚಿಕ್ಕಬಳ್ಳಾಪುರ: ಫೆಂಗಲ್ ಚಂಡಮಾರುತದ ಅಬ್ಬರದ ಕಾರಣ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಒಂದು ದಿನದ ಮಟ್ಟಿಗೆ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಭಾನುವಾರ ತಡ ರಾತ್ರಿ ರಜೆ ಘೋಷಣೆ ಮಾಡಿರುವ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ರಜೆಯಿಂದ ಪಾಠ ಪ್ರವಚನಗಳಿಗೆ ಆಗುವ ತೊಂದರೆಯನ್ನು ತರಗತಿ ಪ್ರಾರಂಭವಾದ ನಂತರ ಸರಿದೂಗಿಸಲು ತಿಳಿಸಿದ್ದಾರೆ.

ಇದನ್ನೂ ಓದಿ: chikkaballapur