ಬೆಂಗಳೂರು: ಇತ್ತೀಚೆಗೆ ನಡೆದ 2024 ರ ET ನೌ ವಿಮಾ ಶೃಂಗಸಭೆ ಮತ್ತು ಪ್ರಶಸ್ತಿಗಳು ಕಾರ್ಯಕ್ರಮದಲ್ಲಿ ಭಾರತದ ಪ್ರಮುಖ ಸಾಮಾನ್ಯ ವಿಮಾ ಕಂಪನಿಗಳಲ್ಲಿ ಒಂದಾದ ಲಿಬರ್ಟಿ ಜನರಲ್ ಇನ್ಶುರೆನ್ಸ್ ಸಂಸ್ಥೆಯು ತನ್ನ ಚುರುಕು ಸೇವೆಗಾಗಿ “ಪ್ರಾಂಪ್ಟ್ ಇನ್ಶುರೆರ್” ಪ್ರಶಸ್ತಿಯ ಗೌರವವನ್ನು ಪಡೆಯಿತು. ಈ ಮನ್ನಣೆಯು ಲಿಬರ್ಟಿಯ ಬದ್ಧತೆಯ ಕಾರ್ಯಾನಿರ್ವಹಣೆ ಮತ್ತು ಸಮಯೋಚಿತ, ಗ್ರಾಹಕ-ಕೇಂದ್ರಿತ ಕ್ಲೈಮ್ಗಳ ಇತ್ಯರ್ಥ ಗೊಳಿಸುವಿಕೆಯಲ್ಲಿನ ದಕ್ಷತೆ ಯನ್ನು ಒತ್ತಿ ಹೇಳುತ್ತದೆ.
ಮಾನ್ಯತೆಯ ಕುರಿತು, ಲಿಬರ್ಟಿ ಜನರಲ್ ಇನ್ಶೂರೆನ್ಸ್ ಸಂಸ್ಥೆಯ ಸಿಇಓ ಮತ್ತು ಪೂರ್ಣಾವಧಿ ನಿರ್ದೇಶಕರಾಗಿರುವ ಶ್ರೀ. ಪರಾಗ್ ವೇದ್ ಮಾತನಾಡಿ, “ಈ ಪ್ರಶಸ್ತಿಯು ನಮ್ಮ ಪಾಲಿಸಿದಾರರಿಗೆ ಸಮರ್ಥ ಮತ್ತು ಪಾರದರ್ಶಕ ಕ್ಲೈಮ್ ರೆಸಲ್ಯೂಶನ್ಗಳನ್ನು ಒದಗಿಸಲು ನಮ್ಮ ನಿರಂತರ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ. ಮೋಟಾರು ಮತ್ತು ಆರೋಗ್ಯ ವಿಮೆ ಎರಡರಲ್ಲೂ ನಾವು ಸಾಧಿಸಿದ ಫಲಿತಾಂಶಗಳು ಸೇವಾ ವಿತರಣೆಯನ್ನು ಸುಧಾರಿಸುವ ಮತ್ತು ಗ್ರಾಹಕರ ನಿರೀಕ್ಷೆಗಳನ್ನು ಪೂರೈಸುವ ನಮ್ಮ ಸಾಧನೆಗೆ ಸಾಕ್ಷಿಯಾಗಿದೆ.
ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಮತ್ತು ಗ್ರಾಹಕ-ಕೇಂದ್ರಿತ ವಿಧಾನವನ್ನು ನಿರ್ವಹಿಸುವ ಮೂಲಕ, ನಮ್ಮ ಪಾಲಿಸಿದಾರರಿಗೆ ನಾವು ಒದಗಿಸುವ ಮೌಲ್ಯವನ್ನು ನಿರಂತರವಾಗಿ ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ.” ಎಂದು ಹೇಳಿದರು.