ತುಮಕೂರು: ಸಾಮಾಜಿಕ ನ್ಯಾಯದ ಪರಿಕಲ್ಪನೆ ಸಾರಿದ ಬಸವಣ್ಣ ಅವರು ವೀರಶೈವ,ಲಿಂಗಾಯಿತರು ಇಂತಹ ಸಮುದಾಯ ದಲ್ಲಿ ಹುಟ್ಟಿದವರೆಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದು ಶಾಸಕ ಹಾಗೂ ಅಖಿಲ ಭಾರತ ವೀರಶೈವ, ಲಿಂಗಾಯಿತ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ತಿಳಿಸಿದರು.
ಸಿದ್ದಗಂಗಾ ಮಠದ ವಸ್ತುಪ್ರದರ್ಶನದ ಆವರಣದಲ್ಲಿ ಅಖಿಲ ಭಾರತ ವೀರಶೈವ, ಲಿಂಗಾ ಯಿತ ಮಹಾಸಭಾವತಿಯಿಂದ ಆಯೋಜಿಸಿದ್ದ ಬೆಂಗಳೂರು ವಿಭಾಗೀಯ ಮಟ್ಟದ ಮಹಿಳಾ ಮತ್ತು ಯುವ ಕಾರ್ಯಕರ್ತರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ ದರು.
ಎಲ್ಲಾ ಧರ್ಮ,ಜಾತಿಗಳಿಗೂ ಪ್ರಪಂಚದ ಮೊದಲ ಸಂಸತ್ತು ಎನಿಸಿಕೊಂಡಿರುವ ಅನುಭವ ಮಂಟಪದಲ್ಲಿ ಅವಕಾಶ ಕಲ್ಪಿಸಿ ದವರು ಬಸವೇಶ್ವರರು ಮೌಢ್ಯದಿಂದ ಸಮಾಜವನ್ನು ಹೊರತರಬೇಕೆಂಬುದು ಅವರ ಕನಸಾಗಿತ್ತು. ಇಂತಹ ಕನಸನ್ನು ನನಸು ಮಾಡಲು ನಾವೆಲ್ಲರೂ ಕಟಿಬದ್ದರಾಗಬೇಕಿದೆ ಎಂದರು.
ಹಾಗನಲ್ ಕುಮಾರಸ್ವಾಮಿಗಳಿಂದ ಸಮಾಜದ ಐಕ್ಯತೆ ಮತ್ತು ಅಭಿವೃದ್ದಿಯ ಮಂತ್ರ ದೊಂದಿಗೆ ಆರಂಭವಾದ ಅಖಿಲ ಭಾರತ ಲಿಂಗಾಯಿತ ಮಹಾಸಭಾ ಅಲ್ಪಸಂಖ್ಯಾತರನ್ನು ಒಳಗೊಂಡಂತೆ ಎಲ್ಲಾ ಧರ್ಮಿಯರಿಗೂ ಮಾರ್ಗದರ್ಶನ ಮಾಡುತ್ತಾ ಬಂದಿದೆ.
ಶೈಕ್ಷಣಿಕವಾಗಿ,ಅರ್ಥಿಕವಾಗಿ ಮುಂದುವರೆದ ಸಮಾಜ ಒಂದು ರೀತಿಯಲ್ಲಿ ನಿಂತ ನೀರಾಗಿದೆ. ಇದನ್ನು ಮತ್ತೆ ಪುನಶ್ಚೇತನ ಗೊಳಿಸಿ, ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂಚೂಣಿಗೆ ತರುವುದು ಮಹಾಸಭಾದ ಉದ್ದೇಶವಾಗಿದೆ. ಪಾಶ್ಚಾತ್ಯ ಸಂಸ್ಕೃತಿ ಅನುಸರಿಸು ತ್ತಿರುವ ನಮ್ಮ ಯುವಜನಾಂಗಕ್ಕೆ ಸರಿಯಾದ ಮಾರ್ಗದರ್ಶನ ಮಾಡಿ ಅವರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವ ಕೆಲಸ ಆಗಬೇಕಿದೆ ಎಂದು ನುಡಿದರು.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಉಪಾಧ್ಯಕ್ಷ ವೀರಣ್ಣ ಮಾತನಾಡಿ,ಪ್ರಸ್ತುತ 2.50ಲಕ್ಷದಷ್ಟಿರುವ ಸದಸ್ಯ ರನ್ನು 10 ಲಕ್ಷಕ್ಕೆ ಹೆಚ್ಚಿಸುವ ಗುರಿ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಸದಸ್ಯತ್ವದ ಅರ್ಜಿಗಳ ವಿತರಣೆ ಆರಂಭವಾಗಿದೆ. ಎಲ್ಲರೂ ಸದಸ್ಯತ್ವ ಪಡೆದುಕೊಳ್ಳಬೇಕಿದೆ.ಮಹಾಸಭಾದ 23ನೇ ಅಧಿವೇಶನದ ಮುಂದಿನ ಡಿಸೆಂಬರ್ 24-25 ಮತ್ತು 26 ರಂದು ದಾವಣ ಗೆರೆಯಲ್ಲಿ ನಡೆಯಲಿದೆ. ಆ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗಸ್ವಾಮೀಜಿ ಅಶೀರ್ವಚನ ನೀಡಿ, ವೀರಶೈವ, ಲಿಂಗಾಯಿತ ಸಮುದಾಯದ ಭವಿಷ್ಯದ ಚಿಂತನೆಯೊಂದಿಗೆ ಆರಂಭಗೊಂಡ ಈ ಸಂಸ್ಥೆಗೆ ಒಂದು ಶತಮಾನ ಕಳೆದಿದೆ.
ಅರ್ಥಿಕ,ಸಾಮಾಜಿಕ,ಶೈಕ್ಷಣಿ ಕ,ಕೈಗಾರಿಕಾ ಕ್ಷೇತ್ರ ವೀರಶೈವ, ಲಿಂಗಾಯಿತ ಸಮುದಾಯ ಸಾಕಷ್ಟು ಕೊಡುಗೆ ನೀಡಿದೆ. ಆದರೂ ಇನ್ನು ಬಲಗೊಳ್ಳುವ ಅಗತ್ಯವಿದೆ.ಹೆಸರಿಗೆ ಮಾತ್ರ ಲಿಂಗಾಯಿತರಾದರೆ ಸಾಲದು,ಆಚರಣೆಯಲ್ಲಿಯೂ ಲಿಂಗಾಯಿತರಾಗ ಬೇಕು. ಸಂಸ್ಕಾರಯುತ ಬದುಕು ನಮ್ಮದಾಗಬೇಕು.ಸ್ವಧರ್ಮ ನಿಷ್ಠೆ,ಪರಧರ್ಮ ಸಹಿಷ್ಠತೆ ನಮ್ಮ ಮಂತ್ರವಾಗಬೇಕು, ಐಕ್ಯತೆ ಮಂತ್ರ ನಮ್ಮದಾಗಬೇಕೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಬೆಂಗಳೂರು ವಿಭಾಗೀಯ ಕಾರ್ಯ ಕ್ರಮದ ಪ್ರಧಾನ ಕಾರ್ಯದರ್ಶಿ ನಟರಾಜು ಸಾಗರನಹಳ್ಳಿ, ಮಹಿಳೆಯರು ಮತ್ತು ಯುವಕರಿಗೆ ನಮ್ಮ ಸಂಸ್ಕೃತಿ, ಪರಂಪರೆ ಯನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಆಯೋಜಿಸಲಾಗಿದೆ. ಇದರಲ್ಲಿ ಕೃಷಿ, ಕೈಗಾರಿಕೆ, ಸಂಸ್ಕೃತಿ, ಪರಂಪರೆಗಳ ಕುರಿತು ಗೋಷ್ಠಿಗಳು ನಡೆಯಲಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಹಿರಿಯ ಉಪಾಧ್ಯಕ್ಷ ಡಾ.ಎನ್.ತಿಪ್ಪಣ್ಣ ವಹಿಸಿದ್ದರು.ಕಾರ್ಯಾಗಾರ ಸಮಿತಿಯ ಅಧ್ಯಕ್ಷ ಎಸ್.ಕೆ.ರಾಜಶೇಖರ್,ಯುವ ಘಟಕದ ಅಧ್ಯಕ್ಷ ಮನೋಹರ್ ಅಬ್ಬಿಗೆರೆ,ಮಹಿಳಾ ಘಟಕದ ರಾಜ್ಯಾಧ್ಯಕ್ಷ ಬಿ.ವೈ.ಅರುಣಾದೇವಿ,ಟಿ.ಬಿ.ಶೇಖರ್,ಎಂ .ಎನ್.ಶಶಿಧರ್, ಗೋವರ್ಧನ್, ಲೋಕೇಶ್ವರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಯಿಂದ ವಸ್ತುಪ್ರದರ್ಶನದ ಆವರಣ ದವರೆಗೂ ಬೆಳ್ಳಿ ರಥದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಹಿರಿಯ ಉಪಾಧ್ಯಕ್ಷ ಡಾ.ಎನ್.ತಿಪ್ಪಣ ಮತ್ತು ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರವನ್ನು ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ಮುಖೇನ ಕರೆದೊಯ್ಯ ಲಾಯಿತು.