Saturday, 21st September 2024

Tumkur News: ಸಾಲ ಮರುಪಾವತಿಯಾದಾಗ ಸಹಕಾರಿ ಸಂಘಗಳು ಅಭಿವೃದ್ಧಿ-ಶ್ರೀನಿವಾಸ್

ತುಮಕೂರು: ಸಾಲ ಸಮರ್ಪಕವಾಗಿ ಮರುಪಾವತಿಯಾದಾಗ ಸಹಕಾರಿ ಸಂಘಗಳ ಅಭಿವೃದ್ಧಿ ಸಾಧ್ಯ ಎಂದು ಬೀರೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಟಿ.ಶ್ರೀನಿವಾಸ್ ತಿಳಿಸಿದರು.

ನಗರದ ಶ್ರೀ ಬೀರೇಶ್ವರ ಪತ್ತಿನ ಸಹಕಾರ ಸಂಘದ ದಶಮಾನೋತ್ಸವ ಹಾಗೂ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು, ಸಾಲಪಡೆದವರಿಂದ ತಾಯಿಯ ಪ್ರತಿಯಿಂದ ಸಾಲ ಮರುಪಾವತಿ ಮಾಡಿಸುವು ದಲ್ಲದೆ, ತಂದೆಯಂತೆ ಕಾನೂನಿನ ಪಾಠವನ್ನು ಮಾಡಬೇಕಾಗುತ್ತದೆ ಎಂದರು.

10 ವರ್ಷಗಳಲ್ಲಿ ಬೀರೇಶ್ವರ ಪತ್ತಿನ ಸಹಕಾರ ಸಂಘ ಅಭಿವೃದ್ದಿಯ ಪಥದತ್ತ ಸಾಗಿದೆ. ಆದರೆ ಇದು ಹೆಮ್ಮರವಾಗಿ ಬೆಳೆಯಬೇಕೆಂದರೆ, ಈಗಾಗಲೇ ಷೇರು ಖರೀದಿಸಿರುವವರು ತಮ್ಮ ಪತ್ನಿ,ಮಕ್ಕಳ ಹೆಸರಿನಲ್ಲಿ ಷೇರು ಖರೀದಿಸುವುದರ ಜತೆಗೆ, ಠೇವಣಿಯಿಡುವ ಮೂಲಕ ಸಂಘ ಹೆಚ್ಚು ಹೆಚ್ಚು ಸಾಲ ಒದಗಿಸುವಂತೆ ಮಾಡಿದರೆ, ಅರ್ಥಿಕವಾಗಿ ಸಬಲ ರಾಗಲು ಸಾಧ್ಯ. ತುರುವೇಕೆರೆ ತಾಲೂಕು ದಬ್ಬೆಘಟ್ಟ ಹೋಬಳಿಯನ್ನು ಹೊರತುಪಡಿಸಿ ಇಡೀ ಜಿಲ್ಲೆಗೆ ಸಂಘವನ್ನು ವಿಸ್ತರಿಸಲು ಅನುಮೋದನೆ ಪಡೆದುಕೊಂಡಿದೆ.ಇದರ ಲಾಭವನ್ನು ಎಲ್ಲರೂ ಪಡೆಯುವಂತೆ ಸಲಹೆ ನೀಡಿದರು.

ಶ್ರೀರೇವಣಸಿದ್ದೇಶ್ವರ ಮಠದ ಶ್ರೀ ಬಿಂದುಶೇಖರ ಓಡೆಯರ್ ಸ್ವಾಮೀಜಿ ಆಶೀರ್ವಚನ ನೀಡಿ , ಹಾಲುಮತ ಸಮಾಜ ಸಾಮಾಜಿಕವಾಗಿ,ಶೈಕ್ಷಣಿಕವಾಗಿ,ಅರ್ಥಿಕವಾಗಿ,ರಾಜಕೀಯವಾಗಿ ಬೆಳೆಯಬೇಕು. ಅರ್ಥಿಕವಾಗಿ ಸಬಲರಾಗಲು ಪ್ರೇರೆ ಪಿಸಿವೆ. ಸಮುದಾಯದ ಉಳ್ಳವರು ಸಂಘದಲ್ಲಿ ಠೇವಣಿ ಇಡಬೇಕು.ಹಾಗೆಯೇ ಸಾಲ ಪಡೆದವರು ಅದನ್ನು ಸರಿ ಯಾದ ಉದ್ದೇಶಕ್ಕೆ ಬಳಕೆ ಮಾಡಿಕೊಂಡು, ಸಕಾಲಕ್ಕೆ ಮರುಪಾವತಿ ಮಾಡುವುದರಿಂದ ಸಂಘದ ಏಳಿಗೆ ಸಾಧ್ಯ ಎಂದರು.

ಬೀರೇಶ್ವರ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸಿ.ಡಿ.ಶ್ರೀನಿವಾಸ್, ಮಾಜಿ ನಿರ್ದೇಶಕ ದೇವರಾಜು,
ಪತ್ರಕರ್ತ ಎಚ್.ಎನ್.ಮಲ್ಲೇಶ್, ವಕೀಲರಾದ ಎಸ್.ವೆಂಕಟೇಶ್, ಶಿವಶಕ್ತಿ ಶೈಕ್ಷಣಿಕ ಆಶ್ರಮದ ಲೇಪಾಕ್ಷಯ್ಯ ಸಂಘದ ಬೆಳವಣಿಗೆ ಕುರಿತು ಮಾತನಾಡಿದರು. ಸಿಇಒ ಆರ್.ಎಸ್.ಗೀತಾ ವಾರ್ಷಿಕ ವರದಿ ಮಂಡಿಸಿದರು.

ಸಭೆಯಲ್ಲಿ ಬೀರೇಶ್ವರ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ಗುರುಡಯ್ಯ, ನಿರ್ದೇಶಕರಾದ ಸಿ.ಟಿ.ಶ್ರೀನಿವಾಸ್, ಕೆ.ಶಿವರಾಜ್, ಎಂ.ತಿಮ್ಮಪ್ಪ, ಆರ್.ಬೀರಯ್ಯ, ವಿ.ಎನ್.ಪ್ರಕಾಶ್, ಎಲ್.ಕೆ.ಸತೀಶ್ ಕುಮಾರ್, ಬಿ.ಎ.ರಂಗರಾಜು, ವರದರಂಗಯ್ಯ, ವಿಜಯಲಕ್ಷ್ಮಿ, ಕೆ.ವಿ.ಸೌಭಾಗ್ಯ ಪಾಲ್ಗೊಂಡಿದ್ದರು.

ಇದನ್ನೂ ಓದಿ: Tumkur News: ಶಿಕ್ಷಣ ಸರ್ವ ಸಮಸ್ಯೆಗಳಿಗೆ ರಾಮಬಾಣ- ವೀರೇಶಾನಂದ ಸ್ವಾಮೀಜಿ