Wednesday, 27th November 2024

ಡಿವೈಎಸ್ಪಿ ರವೀಶ್ ನೇತೃತ್ವದಲ್ಲಿ ಲೋಕಾಯುಕ್ತ ಭರ್ಜರಿ ಬೇಟೆ

ತುಮಕೂರು: ಲಂಚ ಸ್ವೀಕರಿಸುತ್ತಿದ್ದ ಕಾರ್ಮಿಕ ಇಲಾಖೆಯ ಅಧಿಕಾರಿಯನ್ನು ಲೋಕಾಯುಕ್ತ ಅಧಿಕಾರಿಗಳು ರಣರೋಚಕ ರೀತಿಯಲ್ಲಿ ಬೇಟೆಯಾಡಿದ್ದಾರೆ.
ಅಂಗಡಿ ಪರವಾನಗಿ ನೀಡಲು ಕಚೇರಿಯಲ್ಲಿ ಕುಳಿತು 5 ಸಾವಿರ ಲಂಚ ಪಡೆಯುತ್ತಿದ್ದ ಲೇಬರ್ ಇನ್ಸ್ಪೆಕ್ಟರ್ ಕಿರಣ್ ಮೇಲೆ, ಲೋಕಾಯುಕ್ತ  ಡಿವೈಎಸ್ಪಿ   ರವೀಶ್ ಅವರ ನೇತೃತ್ವದಲ್ಲಿ ದಾಳಿ ಮಾಡಿ ಲಂಚಸಮೇತ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಸಿಡಿದೆದ್ದಿರುವುದು ಭ್ರಷ್ಟ ಅಧಿಕಾರಿಗಳಿಗೆ ನಡುಕ ಉಂಟಾಗಿದೆ.