Thursday, 28th November 2024

ಲೋಕೇಶ್ವರ್‌ಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಘೋಷಣೆ ಮಾಡಿ: ಅಭಿಮಾನಿಗಳ ಒತ್ತಾಯ

ಜನಪರವಾಗಿ ಕೆಲಸ ಮಾಡುವರಿಗೆ ಶಕ್ತಿ ತುಂಬುವ ಕೆಲಸ ಮಾಡಿಯೆಂದು ರಾಜ್ಯ ಕೈ ನಾಯಕರಿಗೆ ಮನವಿ

ತಿಪಟೂರು : ತಿಪಟೂರು ವಿಧಾನಸಭಾ ಕ್ಷೇತ್ರದ ಮುಂಬರುವ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷದಿಂದ ನಿವೃತ್ತ ಎಸಿಪಿ ಲೋಕೇಶ್ವರಗೆ ಟಿಕೆಟ್ ನೀಡ ಬೇಕೆಂದು ಲೋಕೇಶ್ವರ ಅಭಿಮಾನಿಗಳು, ಬೆಂಬಲಿಗರು ಒತ್ತಾಯಿಸಿದ ಘಟನೆ ನಡೆದಿದೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಕೆ.ಪಿ.ಸಿ.ಸಿ. ಹೈಕಮಾಂಡ್ ಸೇರಿದಂತೆ ರಾಜ್ಯದ ನಾಯಕರು ಗಳಿಗೆ ನಿವೃತ್ತ ಎಸಿಪಿ ಲೋಕೇಶ್ವರಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಬೆಂಬಲಿಗರು ಒತ್ತಾಯಿಸಿದರು.

ಲೋಕೇಶ್ವರ ಅಭಿಮಾನಿ ಬಳಗದ ಅಧ್ಯಕ್ಷ ನಾಗರಾಜು ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ತಾಲ್ಲೂಕಿನಲ್ಲಿ ಸಮಾಜ ಸೇವೆ ಮಾಡುತ್ತಾ ಬಂದಿದ್ದು ಕುಂದುಕೊರತೆ, ಅನ್ಯಾಯಗಳನ್ನು ತಡೆಗಟ್ಟಲು ಧನಿಯಾಗಿ ನಿಂತಿದ್ದಾರೆ.

ಎರಡು ಬಾರಿ ಚುನಾವಣೆಯಲ್ಲಿ ಸ್ಫರ್ಧಿಸಿದ್ದು ಪರಾಭವಗೊಂಡರೂ ಜನಸೇವೆಯಲ್ಲಿ ನಿರತರಾಗಿದ್ದಾರೆ. ರಾಜಕೀಯದಲ್ಲಿ ಇಲ್ಲದಿದ್ದಾಗಲೇ ಇಷ್ಟೊಂದು ಸೇವೆ ಸಲ್ಲಿಸುತ್ತಿರುವ ಇವರು ಅಧಿಕಾರ ಸಿಕ್ಕರೆ ಜನರ ಧನಿಯಾಗಿ ಕಾರ್ಯನಿರ್ವಹಣೆ ಮಾಡುತ್ತಾರೆ. ತಾಲ್ಲೂಕಿನ ಯುವ ಜನತೆ ಸಂಪೂರ್ಣವಾಗಿ ಲೋಕೇಶ್ವರರ ಬೆಂಬಲಿಗರಾಗಿದ್ದು ಬಣ ರಾಜಕೀಯ ವನ್ನು ಹತೋಟಿಗೆ ತರುವ ನಾಯಕ ಇವರಾಗಿದ್ದು ಕಾಂಗ್ರೆಸ್ ಹೈಕಮಾಂಡ್ ಉತ್ಸಾಹಿಗಳಿಗೆ ಟಿಕೆಟ್ ನೀಡಿದರೆ ಬಹುಮತದಿಂದ ಚುನಾವಣೆಯಲ್ಲಿ ಗೆಲ್ಲಿಸಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಕೊಡುಗೆ ನೀಡುವುದಾಗಿ ತಿಳಿಸಿದರು.

ನಗರಸಭಾ ಸದಸ್ಯೆ ಯಮುನಾ ಧರಣೀಶ್ ಮಾತನಾಡಿ ಸಮಾಜದ ಎಲ್ಲಾ ವರ್ಗದವರಿಂದ ಉತ್ತಮ ಮನ್ನಣೆ ಪಡೆದಿರುವ ವ್ಯಕ್ತಿ ಲೋಕೇಶ್ವರ ಆಗಿದ್ದು, ಕಾಂಗ್ರೆಸ್ ಟಿಕೆಟ್ ದೊರೆತರೆ ಸಾವಿರಾರು ಮತಗಳಿಂದ ಗೆಲ್ಲುವ ವಿಶ್ವಾಸವಿದೆ. ತಾಲ್ಲೂಕಿನ ಜನತೆಯೂ ಈ ಬಾರಿ ಹೊಸಬರನ್ನು ಆಯ್ಕೆ ಮಾಡುವ ಹಂಬಲದಲ್ಲಿದ್ದು ಪಕ್ಷದ ಮುಖಂಡರು ಟಿಕೆಟ್ ನೀಡುವ ಮೇಲೆ ತಿಪಟೂರಿನ ಭವಿಷ್ಯ ನಿರ್ಧಾರವಾಗಲಿದೆ ಎಂದರು.

ಅಗ್ರೋಪಾಸ್ಟ್ ಮಧುಸೂದನ್ ಮಾತನಾಡಿ ಲೋಕೇಶ್ವರರವರು ತಿಪಟೂರು ನಗರದಲ್ಲಿ ಹುಟ್ಟಿ ಶಿಕ್ಷಣವನ್ನು ಪಡೆದು ಪೋಲೀಸ್ ನೌಕರಿಯನ್ನು ಪಡೆದು ರಾಜ್ಯದ ವಿವಿಧ ಸ್ಥಳಗಳಲ್ಲಿ ಹಲವಾರು ರಾಜಕೀಯ ನಾಯಕರ ಜೊತೆ ಕೆಲಸ ನಿರ್ವಹಿಸಿ ತದನಂತರ ಸರ್ಕಾರಿ ನೌಕರಿಗೆ ರಾಜೀನಾಮೆಯನ್ನು ನೀಡಿ ಯಡಿಯೂರಪ್ಪ ನೇತೃತ್ವದ ಕೆ.ಜೆ.ಪಿ ಪಕ್ಷದಿಂದ ಹಾಗೂ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷದಿಂದ ಏರಡು ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜನರ ನಾಡಿಮಿಡಿತವನ್ನು ತಿಳಿದು ಕೊಂಡಿದ್ದಾರೆ ಹಾಗೂ ಕೋವಿಡ್ ಸಮಯದಲ್ಲಿ ಪ್ರತಿನಿತ್ಯ ಸಂಕಷ್ಟದಲ್ಲಿರುವರೆಗೆ  ದಾಸೋಹ ನೀಡಿ, ಅಗತ್ಯದ ಸಮಯದಲ್ಲಿ ಸಾವಿರಾರು ದಿನಸಿ ಕಿಟ್‌ಗಳು ಹಾಗೂ ಆಕ್ಸಿಜನ್‌ನನ್ನು ಸಿಲಿಂqರ್ ವ್ಯವಸ್ಥೆಯನ್ನು ಮಾಡಿದ್ದು, ಸುಮಾರು ಇಪ್ಪತ್ತು ವರ್ಷ ಗಳಿಂದ ತಾಲ್ಲೂಕಿನಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟಗಳನ್ನು ನೆಡೆಸುತ್ತಾ ಬಂದಿದ್ದು ಆದ್ದರಿಂದ ಮುಂಬರುವ ವಿಧಾನ ಸಭಾ ಚುನಾ ವಣೆಯಲ್ಲಿ ಕಾಂಗ್ರೇಸ್ ಪಕ್ಷದ ಕೈ ಆಭ್ಯರ್ಥಿಯಾಗಿ ಸ್ಪರ್ಥೆ ಮಾಡಲು ರಾಜ್ಯದ ಕೈನಾಯಕರು ಇವರಿಗೆ ಅವಕಾಶ ಮಾಡ ಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನಗರಸಭೆಯ ಉಪಾಧ್ಯಕ್ಷ ಸೊಪ್ಪು ಗಣೇಶ್, ಸದಸ್ಯರುಗಳಾದ ಭಾರತಿ ಮಂಜುನಾಥ್, ಆಶ್ರಿಫಾ ಬಾನು, ಮಾಜಿ ಸದಸ್ಯ ಎಂ.ನಿಜಗುಣ, ರೇಣು, ಅನಗೊಂಡನಹಳ್ಳಿ ಪ್ರಭುಸ್ವಾಮಿ, ಶಶಿಭೂಷಣ್, ಶಿವಶಂಕರ್, ಅಗ್ರೋಪಾಸ್ಟ್ ಮಧುಸೂದನ್, ಸಾರ್ಥವಳ್ಳಿ ಶಿವಕುಮಾರ್, ಮಾಗೇನಹಳ್ಳಿ ಪರಮೇಶ್, ಕೆರಗೋಡಿ ಶಂಕರಮೂರ್ತಿ, ಕೆ.ಬಿ ಕ್ರಾಸ್ ಕಿರಣ್, ತಿಮ್ಮೆಗೌಡ, ಮನೋಜ್ ಬಂಡಿಹಳ್ಳಿ, ಅಶೋಕ್‌ಕುಮಾರ್ ಮತ್ತಿಹಳ್ಳಿ ಓಂಕಾರಮೂರ್ತಿ, ಧರಣೀಶ್, ಪಂಚವಟಿ ಶಿವಶಂಕರ್ ಸೇರಿದಂತೆ ಹಲವಾರು ಬೆಂಬಲಿಗರು ಇದ್ದರು.