ಬಸ್ ಸ್ಟಾಂಡ್‌ನಲ್ಲಿ ವಾಲ್ಮೀಕಿ ವೃತ್ತ ಎಂದು ಹೆಸರು ಇರುವ ನಾಮಫಲಕ ಇಟ್ಟು ತೆರವುಗೊಳಿಸಿ ಪೊಲೀಸರು
ಪೊಲೀಸರು ಹಾಗೂ ಸಮುದಾಯದ ಮುಖಂಡರ ನಡುವ ಕೆಲ ಕಾಲ ತಳ್ಳಾಟ
ಕೊರಟಗೆರೆ: ಮಹರ್ಷಿ ವಾಲ್ಮೀಕಿ ಜಯಂತಿ ದಿನದೊಂದು ಕೊರಟಗೆರೆ ಪಟ್ಟಣದ ಮುಖ್ಯ ವೃತ್ತದಲ್ಲಿ ವಾಲ್ಮೀಕಿ ಪ್ರತಿಮೆಯನ್ನ ಅನಾವರಣ ಮತ್ತು ನಾಮಫಲಕ ಆಳವಳಡಿಸಿರುವುದನ್ನು ತೆರವುಗೊಳಿಸಿದ ಹಿನ್ನಲೆ ವಾಲ್ಮೀಕಿ ಸಮುದಾಯದಿಂದ ಪ್ರತಿಭಟನೆ ನಡೆಸಿದ ಪರಿಣಾಮ ಪೊಲೀಸರು ಹಾಗೂ ಸಮುದಾಯದ ಮುಖಂಡರ ನಡುವ ಕೆಲ ಕಾಲ ತಳ್ಳಾಟ ನಡೆದಿರುವ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ಕೊರಟಗೆರೆ ಪಟ್ಟಣದ ಎಸ್.ಎಸ್.ಆರ್ ವೃತ್ತದಲ್ಲಿ ಬುಧವಾರ ರಾತ್ರಿ ಮಹರ್ಷಿ ವಾಲ್ಮೀಕಿ ಪುತ್ತಳಿಯನ್ನ ಅನಾವರಣ ಮಾಡಲಾಗಿತ್ತು. ನಂತರ ಅದನ್ನ ಪಪಂ ಮುಖ್ಯಾಧಿಕಾರಿಗಳು ತೆರವುಗೊಳಿಸಿದ್ದಾರೆ ಎಂದು ವಾಲ್ಕೀಕಿ ಸಮುದಾ ಯದ ಮುಖಂಡರು ರಾತ್ರಿ ೧೧ ಗಂಟೆಯಿAದ ಪ್ರತಿಭಟನೆ ನಡೆಸಿದರು. ತಡರಾತ್ರಿ ತುಮಕೂರು ಜಿಲ್ಲಾ ವರಿಷ್ಠಾಧಿ ಕಾರಿ ಆಶೋಕ್ ಹಾಗೂ ತಹಶೀಲ್ದಾರ್ ಮಂಜುನಾಥ್ ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಕಾರರನ್ನ ಮನವಲಿಸಲು ಪ್ರಯತ್ನಿಸಿದರು. ಪುತ್ತಳಿಯನ್ನ ವಾಪಸ್ಸು ತರಿಸುವುದಾಗಿ ತಿಳಿಸಿದರು ಅವರ ಮನವಿಗೆ ಒಪ್ಪದ ಪ್ರತಿಭಟನಕಾರರು ಬೆಳಿಗ್ಗೆವರೆಗೂ ಪ್ರತಿಭಟನೆ ನಡೆಸಿದರು.
ಪ್ರತಿವರ್ಷವು ನಾಯಕ ಸಮುದಾಯ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ವಿಜೃಂಭಣೆಯಿಂದ ವಾಲ್ಮೀಕಿ ಜಯಂತಿಯನ್ನ ಆಚರಣೆ ಮಾಡಿಕೊಂಡು ಬರುತ್ತಿದ್ದರು, ಆದರೆ ಪಟ್ಟಣದ ಮುಖ್ಯ ವೃತ್ತವನ್ನು ವಾಲ್ಮೀಕಿ ವೃತ್ತವನ್ನಾಗಿ ನಾಮಕರಣ ಮಾಡಬೇಕೆಂದು ಮತ್ತು ಮಹರ್ಷಿ ವಾಲ್ಮೀಕಿರವರ ಪುತ್ತಳಿಯನ್ನು ಸ್ಥಾಪಿಸಬೇಕೆಂದು ಸಮುದಾಯದ ಹಲವು ವರ್ಷಗಳ ಬೇಡಿಕೆಯಾಗಿತ್ತು, ಇದೇ ವೃತ್ತಕ್ಕೆ ಹಲವು ಸಮುದಾಯಗಳು ಸಹ ಅವರವರ ಸಮುದಾಯದ ನೇತಾರರ ಹೆಸರಿಡಲು ಪಟ್ಟಣ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು.
ಈ ಬಗ್ಗೆ ಪಟ್ಟಣ ಪಂಚಾಯಿತಿ ಯಾವ ನಿರ್ಣಯವನ್ನು ಕೈಗೊಂಡಿರಲ್ಲಿಲ್ಲ, ಆದರೆ ಹಲವು ವರ್ಷಗಳ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ವಾಲ್ಮೀಕಿ ಸಮುದಾಯದ ಕೆಲವು ಯುವಕರು ಆ.16 ರ ಬುಧವಾರ ರಾತ್ರಿ ಸುಮಾರು ೧೦ ಗಂಟೆ ಸಮಯದಲ್ಲಿ ಪಟ್ಟಣದ ಮುಖ್ಯ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ರವರ ಪುತ್ತಳಿಯನ್ನು ಸ್ಥಾಪಿಸಿದರು, ಈ ಸುದ್ದಿ ತಿಳಿದ ಪೊಲೀಸರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಉಮೇಶ್ ಪುತ್ತಳಿ ಸ್ಥಾಪನೆಗೆ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಪುತ್ತಳಿಯನ್ನು ಅಲ್ಲಿಂದ ತೆರವರುಗೊಳಿಸಿ ದೇವಸ್ಥಾನ ಒಂದರಲ್ಲಿ ಇಟ್ಟಿದ್ದರು ಎನ್ನಲಾಗಿತ್ತು.
ತೆರವುಗೊಳಿಸಿರುವ ವಾಲ್ಮೀಕಿ ಪುತ್ತಳಿಯನ್ನು ಪುನರ್ ಸ್ಥಾಪಿಸುವಂತೆ ಪಟ್ಟು ಹಿಡಿದ ಸಮಾಜದ ಪ್ರತಿಭಟನಾ ಕಾರರು ಬೆಳಿಗ್ಗೆ ಕಳೆದರು ಪ್ರತಿಭಟನೆ ಅಲ್ಲಿಂದ ಕದಲದೆ ಬಸ್ಟಾಂಡ್ ವೃತ್ತದ ಒಂದು ಭಾಗದಲ್ಲಿ ಪ್ರತಿಭಟನೆ ಮುಂದುವರೆಸಿದರು. ಈ ಸಂದರ್ಭದಲ್ಲಿ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ಮಹಿಳೆಯರು, ಮಕ್ಕಳು, ವೃದ್ದರು, ಯುವಕರು ಪ್ರತಿಭಟನೆ ಮುಂದುವರೆಸಿದರು, ಈ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗ ದಂತೆ ಪೊಲೀಸ್ ವ್ಯವಸ್ಥೆ ಮಾಡಲಾಗಿತ್ತು,
ಬೆಳಿಗ್ಗೆ ೧೦-೩೦ ಕ್ಕೆ ತಹಶೀಲ್ದಾರ್ ಮಂಜುನಾಥ್, ಡಿವೈಎಸ್ಪಿ ಚಂದ್ರಶೇಖರ್, ಸಿಪಿಐ ಅನಿಲ್ ಸೇರಿದಂತೆ ಹಲವು ಅಧಿಕಾರಿಗಳು ಪ್ರತಿಭಟನಾಕಾರರ ಮನವಲಿಸಿ ಪಟ್ಟಣ ಪಂಚಾಯಿತಿ ಸಭೆಯಲ್ಲಿ ವಾಲ್ಮೀಕಿ ಪುತ್ತಳಿ ಸ್ಥಾಪಿಸುವ ಬಗ್ಗೆ ನಡವಳಿ ಬರೆಸಿ ನಿಯಮಾವಳಿಯಂತೆ ಪುತ್ತಳಿಯನ್ನು ಸ್ಥಾಪಿಸಿಕೊಳ್ಳುವಂತೆ ಮನವಿ ಮಾಡಿದರು. ಇದಕ್ಕೆ ಪಪಂ ಹಲವು ಸದಸ್ಯರು ಸಹ ಒಪ್ಪಿಗೆ ಸೂಚಿಸಿದರು. ತಕ್ಷಣ ವಾಲ್ಮೀಕಿ ಪುತ್ತಳಿಯನ್ನು ಉತ್ಸವದ ಮೂಲಕ ಮುಖ್ಯ ವೃತ್ತಕ್ಕೆ ತರಿಸಿ ಪೂಜೆ ಸಲ್ಲಿಸಿ ಕಣ್ಣಪ್ಪ ದೇವಾಲಯಕ್ಕೆ ಕಳುಹಿಸಿ ಕೊಡಲಾಯಿತು ಮತ್ತು ಆ ಕ್ಷಣದಲ್ಲಿ ವಾಲ್ಮೀಕಿ ವೃತ್ತ ಎಂಬ ನಾಮಫಲಕವನ್ನು ಅಳವಡಿಸಲಾಯಿತು, ಎಲ್ಲಾರೂ ಸಂತೋಷದಿಂದ ಪ್ರತಿಭಟನೆಯನ್ನು ಹಿಂಪಡೆದು ವಾಲ್ಮೀಕಿ ಜಯಂತಿ ಆಚರಣೆಗೆ ತೆರಳಿದರು
ನಂಬಿಸಿ ಮೋಸ ಮಾಡಿದ್ದಾರೆ ಎಂದು ಮಹಿಳೆಯರ ಆಕ್ರೋಶ:
ನಮಗೆ ಅಧಿಕಾರಿಗಳು ಮತ್ತು ಪೊಲೀಸರು ಮುಂಬರುವ ದಿನಗಳಲ್ಲಿ ವಾಲ್ಮೀಕಿ ಪುತ್ತಳಿಯನ್ನು ಸ್ಥಾಪಿಸುತ್ತೇವೆ ಹಾಗೂ ಈಗ ವೃತ್ತವನ್ನು ವಾಲ್ಮೀಕಿ ವೃತ್ತದ ನಾಮಕರಣ ಮಾಡುತ್ತೇವೆ ಎಂದು ನಮಗೆ ಭರವಸೆ ನೀಡಿ ನಂಬಿಸಿ ವಾಲ್ಮೀಕಿ ವೃತ್ತ ಎನ್ನವ ನಾಮಫಲಕವನ್ನು ತೆರವು ಮಾಡಿ ನಮ್ಮ ನಂಬಿಕೆಗೆ ಮೋಸ ಮಾಡಿದ್ದಾರೆ, ಮಹಿಳೆಯರಿಗೆ ಈ ರೀತಿ ನಂಬಿಸಿ ಮೋಸ ಮಾಡುವ ನಿಯಮ ಯಾವ ಕಾನೂನಿನಲ್ಲಿದೆ ಈ ಸಂಬಂಧ ತಕ್ಷಣ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ರವರು ಕ್ಷೇತ್ರಕ್ಕೆ ಬಂದು ನಮಗೆ ನ್ಯಾಯ ದೊರಕಿಸಿ ಕೊಡುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಮುದಾಯದ ಮುಖಂಡರುಗಳು, ಮಹಿಳೆಯರು ಹಾಗೂ ಕೆಲ ಪ.ಪಂ.ಸದಸ್ಯರು ಹಾಜರಿದ್ದರು.
ಪ್ರತಿಭನಾ ಸ್ಥಳಕ್ಕೆ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್, ಎಸ್ಪಿ ಆಶೋಕ್, ಮರಿಯಪ್ಪ, ತಹಸೀಲ್ದಾರ್ ಮಂಜುನಾಥ್, ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿಯೇ ಮೋಕ್ಕಂ ಹೂಡಿದರು.
ನಾಮಫಲಕ ತೆರವು ಬುಗಿಲ್ಲೆದ್ದ ಆಕ್ರೋಶ
ಪ್ರತಿಭಟನಾಕಾರರು ತೆರಳಿದ ನಂತರ ಪೊಲೀಸರು ಮಹರ್ಷಿ ವಾಲ್ಮೀಕಿ ನಾಮಫಲಕವನ್ನು ತಕ್ಷಣ ತೆರವುಗೊಳಿಸಿ ವೃತ್ತದ ಸುತ್ತಲೂ ಪೊಲೀಸ್ ಬ್ಯಾರಿಕೆಟ್‌ನ್ನು ಭದ್ರವಾಗಿ ಅಳವಡಿಸಿದರು, ಸುದ್ದಿ ತಿಳಿದ ವಾಲ್ಮೀಕಿ ಸಮುದಾಯದ ಮುಖಂಡರು ಮುಖ್ಯ ವೃತ್ತಕ್ಕೆ ಬಂದು ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ವಾಗ್ವಾವಾದಕ್ಕೆ ಇಳಿದರು. ತಕ್ಷಣ ಪೊಲೀಸರು ಸಮುದಾಯದ ಮುಖಂಡರು ಮತ್ತು ಅಲ್ಲಿ ಜಮಾಯಿಸಿದ್ದ ಯುವಕರನ್ನು ಬಲವಂತವಾಗಿ ಖಾಲಿಗೊಳಿಸಿದರು, ಇದರಿಂದ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: Shri Maharshi Valmiki Award: ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಐವರು ಸಾಧಕರ ಹೆಸರು ಪ್ರಕಟ