Thursday, 21st November 2024

ಮಲೆಮಹದೇಶ್ವರ ಬೆಟ್ಟದ ಹುಂಡಿಯಲ್ಲಿ 28 ಲಕ್ಷ ಅಮಾನ್ಯ ನೋಟು ಪತ್ತೆ

ಚಾಮರಾಜನಗರ: ಲಕ್ಷಾಂತರ ರೂಪಾಯಿ ಮೌಲ್ಯದ 500, 1,000 ರೂಪಾಯಿ ಮುಖಬೆಲೆಯ ನೋಟುಗಳು ರಾಜ್ಯದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ಸಿಕ್ಕಿದೆ.

ಸಂಗ್ರಹವಾಗಿದ್ದ ನೋಟುಗಳನ್ನು ಭಾನುವಾರ ಎಣಿಕೆ ಮಾಡಲಾಗಿದೆ. 1,000 ರೂ. ಮುಖಬೆಲೆಯ ನೋಟುಗಳು 677 ಸಿಕ್ಕಿವೆ (ಇದರ ಮೌಲ್ಯ 6,77,000 ರೂ.). 500 ರೂ. ಮುಖಬೆಲೆಯ ನೋಟುಗಳು 4,353 ( 21,76,500 ರೂ.) ಇದ್ದು, ಒಟ್ಟು 28,53,500 ಲಕ್ಷ ಹಣವನ್ನು ಭಕ್ತರು ಹುಂಡಿಯಲ್ಲಿ ಹಾಕಿದ್ದಾರೆ.

2,000 ರೂ. ಮುಖಬೆಲೆಯ ನೋಟುಗಳು 3.56 ಲಕ್ಷದಷ್ಟು ಸಂಗ್ರಹವಾಗಿದ್ದು, ಈ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದಾಗಿದೆ. ಆದರೆ, 28 ಲಕ್ಷ ಹಣ ಹುಂಡಿ ಸೇರಿದರೂ ಪ್ರಾಧಿಕಾರಕ್ಕೆ ಪ್ರಯೋಜನಕ್ಕೆ ಬಾರದಂತಾ ಗಿದೆ.

ಸೆಪ್ಟೆಂಬರ್ ತಿಂಗಳು ನಡೆದ ಹುಂಡಿ ಎಣಿಕೆಯಲ್ಲಿ 2.38 ಕೋಟಿ ರೂ. ಸಂಗ್ರಹವಾಗಿತ್ತು. 36 ದಿನಗಳ ಅವಧಿಗೆ 2,38,43,177 ರೂ. ಸಂಗ್ರಹವಾಗಿತ್ತು. ಭಕ್ತರು 63 ಗ್ರಾಂ ಚಿನ್ನ ಹಾಗೂ 3.173 ಕೆ.ಜಿ ಬೆಳ್ಳಿಯನ್ನು ದೇವರಿಗೆ ಕಾಣಿಕೆ ರೂಪದಲ್ಲಿ ಅರ್ಪಿಸಿದ್ದರು.