Wednesday, 27th November 2024

ಸಾಧನೆಗೆ ಯಾವುದೇ ಅಡ್ಡದಾರಿಗಳು ಇಲ್ಲ : ಉಮಾಶಂಕರ್ ಮಲ್ಲಿಗೆರೆ

ವಿದ್ಯಾರ್ಥಿಗಳು ಸಕಾರಾತ್ಮ ಚಿಂತನೆಗಳ ಮೂಲಕ ಗುರಿ ಕಡೆ ಸಾಗಬೇಕು

ತಿಪಟೂರು : ಪ್ರತಿಯೊಬ್ಬರ ಸಾಧಕರ ಜೀವನದಲ್ಲಿ ಶ್ರಮ, ಕಷ್ಟಗಳು ತುಂಬಿ ರುತ್ತದೆ ಹೊರೆತು ಯಾವುದೇ ಅನ್ಯದಾರಿಗಳು ಇರುವುದಿಲ್ಲ. ಅದ್ದರಿಂದ ವಿದ್ಯಾರ್ಥಿಗಳು ಸಕಾರಾತ್ಮ ಚಿಂತನೆಗಳ ಮೂಲಕ ಗುರಿಯ ಕಡೆ ಸಾಗಬೇಕು ಎಂದು ಬೆಂಗಳೂರಿನ ಅಹನ ಸಿಸ್ಟಮ್ ಅಂಡ್ ಸಲ್ಯೂಶನ್ಸ್ ಮುಖ್ಯ ವ್ಯವಸ್ಥಾ ಪಕ ಉಮಾಶಂಕರ್ ಮಲ್ಲಿಗೆರೆ ತಿಳಿಸಿದರು.

ನಗರದ ಕಲ್ಪತರು ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ಕಲ್ಪತರು ಪ್ರಥಮ ದರ್ಜೆ ವಿಜ್ಞಾನ ಕಾಲೇಜಿನ ಅಂತಿಮ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಪ್ರತಿಭಾಶ್ರೀ-೨೦೨೨ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಕೌಶಲ್ಯಯುತ ಯುವ ಜನತೆಗೆ ಹೆಚ್ಚಿನ ಅವಕಾಶಗಳು ಇದ್ದು, ಯಾವುದೇ ಪದವಿಯನ್ನು ಮಾಡಿದರೂ ಉತ್ತಮ ಕೆಲಸ ದೊರಕುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ವಿದ್ಯಾರ್ಥಿ ದಿಸೆಯಿಂದಲೇ ಉತ್ತಮ ನಾಯಕತ್ವ ಗುಣಗಳನ್ನು ಬೆಳಸಿ ಕೊಂಡು ಪ್ರತಿಯೊಂದು ಕಷ್ಟಗಳನ್ನು ಎದುರಿಸುವಂತಹ ಮನಸ್ಥಿತಿಯನ್ನು ಹೊಂದಿರಬೇಕು.

ಇತ್ತೀಚಿನ ದಿನಗಳಲ್ಲಿನ ವಿದ್ಯಾರ್ಥಿಗಳಿಗೆ ಪೋಷಕರಿಂದ ಉತ್ತಮ ಸೌಕರ್ಯಗಳು ದೊರೆ ಯುತ್ತಿದ್ದು ಸಾಧಿಸುವ ಛಲವನ್ನು ವಿದ್ಯಾರ್ಥಿಗಳು ಹೊಂದ ಬೇಕಿದೆ. ಭಾರತದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳಿದ್ದು ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಚಾಣಾಕ್ಷತೆ ವಿದ್ಯಾರ್ಥಿಗಳಲ್ಲಿ ಇರಬೇಕು. ಇದೆಲ್ಲದರ ಹೊರತಾಗಿ ಉತ್ತಮ ಮಾನವೀಯಮೌಲ್ಯಗಳನ್ನು ಒಳಗಂಡು ಉತ್ತಮ ಪ್ರಜೆಯಾಗಬೇಕು ಎಂದರು.

ಕುಮಾರ ಆಸ್ಪತ್ರೆಯ ವೈದ್ಯ ಡಾ.ಶ್ರೀಧರ್ ಮಾತನಾಡಿ ಜಗತ್ತಿನ ಸಾಧಕರನ್ನು ಮಾತ್ರವೇ ಗುರುತಿಸಿ ಗೌರವಿಸುತ್ತದೆ. ಒಂದು ವೇಳೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡದಿದ್ದರೆ ಗೌರವಯುತ ಜೀವನ ನಿರ್ವಹಣೆ ಆಸಾಧ್ಯ. ಇಂದಿನ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ತ್ಮಕತೆ ಮನೋಭಾವ ಬೆಳವಣಿಗೆ ಆಗಬೇಕು. ಪ್ರತಿಯೊಬ್ಬರಲ್ಲಿಯೂ ವಿಭಿನ್ನ ಕ್ಷೇತ್ರದಲ್ಲಿ ಆಸಕ್ತಿ ಯನ್ನು ಹೊಂದಿರುವುದು ಸಾಮಾನ್ಯ, ಅಂತಹ ಕ್ಷೇತ್ರಗಳಲ್ಲಿ ಸಾಧನೆ ಮಾಡುವಂತಹ ಗುಣವನ್ನು ಬೆಳೆಸಿಕೊಳ್ಳಬೇಕು. ನಮ್ಮಲ್ಲಿರುವ ಶಕ್ತಿಯನ್ನು ನಾವೇ ಕಂಡುಕೊAಡು ಶ್ರಮವಹಿಸುವ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ಕಲ್ಪತರು ವಿದ್ಯಾಸಂಸ್ಥೆಯ ಉಪಾಧ್ಯಕ್ಷರುಗಳಾದ ಜಿ.ಪಿ.ದೀಪಕ್, ಬಾಗೇಪಲ್ಲಿ ನಟರಾಜು, ಬಿ.ಎಸ್.ಉಮೇಶ್, ಕಾರ್ಯದರ್ಶಿ ಎಚ್.ಜಿ.ಸುಧಾಕರ್, ಖಜಾಂಚಿ ಟಿ.ಎಸ್.ಶಿವಪ್ರಸಾದ್, ಕಾಲೇಜಿನ ಪ್ರಾಂಶುಪಾಲ ಡಾ.ಚಿತ್ತರಂಜನ್ ರೈ, ಡಾ.ವಿ.ಮಾಲತಿ, ಗೀತಾಲಕ್ಷಿö್ಮÃ ಸೇರಿದಂತೆ ಉಪನ್ಯಾಸಕರುಗಳು ಇದ್ದರು.