ಮಂಗಳೂರು: ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅದಾನಿ ತೆಕ್ಕೆಗೆ ಸೇರಿದೆ. ಅ.31ರಿಂದ ಇಡೀ ಏರ್ ಪೋರ್ಟ್ ಅದಾನಿ ಗ್ರೂಪ್ ಪಾಲಾ ಗಲಿದ್ದು, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಜೊತೆಗಿನ ಒಪ್ಪಂದ ಕೊನೆಗೊಳ್ಳಲಿದೆ. ಈ ಮೂಲಕ ಪ್ರಾಧಿಕಾರದಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳೂ ಬೇರೆ ಬೇರೆ ವಿಮಾನ ನಿಲ್ದಾಣಗಳಿಗೆ ವರ್ಗಾವಣೆಯಾಗಿದ್ದಾರೆ.
ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಸಂಪೂರ್ಣವಾಗಿ ಅದಾನಿ ಕೈ ಪಾಲಾಗುವ ದಿನಕ್ಕೆ ಕ್ಷಣಗಣನೆ ಆರಂಭವಾಗಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಆದಾನಿ ಜಂಟಿ ಆಡಳಿತದ ಅವಧಿ ಅ.31ರಂದು ಕೊನೆಯಾಗ ಲಿದೆ. ಈ ಮೂಲಕ ಸರ್ಕಾರಿ ಸ್ವಾಮ್ಯದ ಉದ್ಯಮ ಈಗ ಸಂಪೂರ್ಣವಾಗಿ ಖಾಸಗಿ ಪಾಲಾಗಲಿದೆ. ವಿಮಾನ ನಿಲ್ದಾಣದ ಅಭಿವೃದ್ಧಿಯ ದೃಷಿಯಿಂದ ಕೇಂದ್ರ ಸರ್ಕಾರ ದೇಶದಲ್ಲಿ ಪ್ರಥಮ ಬಾರಿಗೆ ಮಂಗಳೂರು ವಿಮಾನ ನಿಲ್ದಾಣವನ್ನು ಖಾಸಗಿ ಕಂಪನಿಗೆ ನೀಡಿತ್ತು.
2020ರ ಅಕ್ಟೋಬರ್ 31ರಂದು ಮಂಗಳೂರು ವಿಮಾನ ನಿಲ್ದಾಣವನ್ನು ಆದಾನಿ ಗ್ರೂಪ್‌ಗೆ ನಿರ್ವಹಣೆಗೆ ನೀಡಲಾ ಗಿತ್ತು. ಬಳಿಕ ಮೂರು ವರ್ಷಗಳ ಕಾಲ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಆದಾನಿ ಗ್ರೂಪ್ ಜಂಟಿ ಆಡಳಿತ ಮಾಡಲು ಒಪ್ಪಂದ ಮಾಡಲಾಗಿತ್ತು.