ಮಧುಗಿರಿ : ತಾಲ್ಲೂಕಿನ ಕಸಬಾ ವ್ಯಾಪ್ತಿಯ ಡಿ.ವಿ.ಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆಯಾಗಿ ಮಂಜುಳ ತಿಮ್ಮರಾಜು ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಉಪಾಧ್ಯಕ್ಷರಾಗಿದ್ದ ಆರ್ ಶಿವಕುಮಾರ ಸ್ವಾಮಿ ರವರು ಸ್ವ ಇಚ್ಚೆಯಿಂದ ರಾಜೀನಾಮೆ ನೀಡಿದ್ದರು. ತುಂಗೋಟಿ ಕ್ಷೇತ್ರದ ಮಂಜುಳಾ ರವರ ವಿರುದ್ಧ ಯಾವುದೇ ಅಭ್ಯರ್ಥಿಯು ನಾಮಪತ್ರವನ್ನು ಸಲ್ಲಿಸದೆ ಇರುವುದರಿಂದ ಚುನಾವಣಾಧಿಕಾರಿ ಟಿ.ಜಿ ಸುರೇಶ್ ಆಚಾರ್ ರವರು ಉಪಾಧ್ಯಕ್ಷರನ್ನಾಗಿ ಘೋಷಣೆ ಮಾಡಿದರು.
ಉಪಾಧ್ಯಕ್ಷೆ ಮಂಜುಳ ಮಾತನಾಡಿ ಈ ಹಿಂದೆಯೇ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದು ಅದರಂತೆಯೇ ಈಗ ನನ್ನನ್ನು ಎಲ್ಲಾ ಸದಸ್ಯರು ಸೇರಿ ಆಯ್ಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಅಧ್ಯಕ್ಷ ರವಿಕುಮಾರ್ ಮಾತನಾಡಿ ಈಗಾಗಲೇ ನಮ್ಮ ಗ್ರಾ.ಪಂಗೆ ಅಮೃತ ಯೋಜನೆ ಯಡಿಯಲ್ಲಿ ಸುಮಾರು ೪೦೦ ಮನೆಗಳ ನಿರ್ಮಾಣಕ್ಕೆ ಸಕಲ ಸಿದ್ದತೆ ನಡೆದಿದೆ. ನೂತನ ಉಪಾಧ್ಯಕ್ಷೆಯಾಘಿ ಆಯ್ಕೆಯಾಗಿರುವ ಮಂಜುಳ ಹಾಗೂ ಗ್ರಾಮ ಪಂಚಾಯತಿ ಯಲ್ಲಿ ಎಲ್ಲಾ ಸದಸ್ಯರ ಸಹಕಾರ ದಿಂದ ಇನ್ನೂ ಹೆಚ್ಚು ಜನ ಪರವಾದ ಯೋಜನೆಗಳನ್ನು ಜಾರಿ ಮಾಡಲಾಗುವುದು ಈಗಾಗಲೇ ಹಲವಾರು ಯೋಜನೆಯ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
ಗ್ರಾ.ಪA. ಸದಸ್ಯರಾದ ಆರ್ ಟಿ ಪ್ರಭು, ಗಂಗಮ್ಮ, ಓಬಳಮ್ಮ, ಆರ್ ಶಿವಕುಮಾರಸ್ವಾಮಿ, ಬಾಣದರಂಗಯ್ಯ, ರಾಧಮ್ಮ, ಮಹಾ ಲಕ್ಷಮ್ಮ, ಮಂಜಮ್ಮ, ಈರಮ್ಮ, ಗಿರಿಜಮ್ಮ, ಡಿ.ನಾಗರಾಜು, ಟಿ.ಹೆಚ್.ಜಯರಾಂ, ಮುಖಂಡರಾದ ಎ.ಜಿ.ಗೋಪಾಲಯ್ಯ, ನಾಗಭೂಷಣ, ರಾಜಕುಮಾರ್, ಟಿ.ಕೆ.ನಾಗೇಶ್, ಅದ್ದೂರಿ ಗೌಡ, ಮಾಜಿ ತಾಪಂ ಸದಸ್ಯೆ ಯಶೋಧಮ್ಮರಾಜಣ್ಣ, ಆನಂದ್, ಲಂಕೇಶ್, ಚಿಕ್ಕಣ್ಣ, ಟಿ.ಎನ್ ರವಿ, ಎಂ.ತಿಮ್ಮಯ್ಯ, ಪಿಡಿಓ ಅಂಬಿಕಾ, ಗ್ರಾ.ಪಂ ನ ನೌಕರರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.