ತುಮಕೂರು: ಸಿದ್ಧಗಂಗಾ ಆಸ್ಪತ್ರೆ ವತಿಯಿಂದ ಅಕ್ಟೋಬರ್ 1ರಂದು ನಡೆಯಲಿರುವ ಐತಿಹಾಸಿಕ ಸಿದ್ಧಗಂಗಾ ಹೆಲ್ತ್ ರನ್ 10 ಕೆ. ಮ್ಯಾರಥಾನ್ ನೊಂದಣಿ ಆರಂಭವಾಗಿದೆ. ಸಾರ್ವಜನಿಕರು ಕ್ಯೂರ್ ಕೋಡ್ ಸ್ಕ್ಯಾನ್ ಮಾಡಿ ಇಲ್ಲವೇ ಆಸ್ಪತ್ರೆ ಕರೆ ಮಾಡಿ ಅಥವಾ ಆಸ್ಪತ್ರೆಯಲ್ಲಿಯೇ ನೇರ ನೊಂದಣಿ ಮಾಡಿಸಬಹುದು ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್. ಪರಮೇಶ್ ತಿಳಿಸಿದರು.
ಸಿದ್ಧಗಂಗಾ ಆಸ್ಪತ್ರೆಯಲ್ಲಿ ಅವರು ಮ್ಯಾರಥಾನ್ ನೊಂದಣಿಗೆ ಚಾಲನೆ ನೀಡಿ ಮಾತ ನಾಡಿ ಈಗಾಗಲೇ ನೂರಾರು ಜನರು ಅಸ್ಪತ್ರೆಗೆ ಕರೆಮಾಡಿ ನೊಂದಣಿ ಮಾಡಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮ್ಯಾರಥಾನ್ ನಲ್ಲಿ ಭಾಗವಹಿಸಿ ಕಾರ್ಯ ಕ್ರಮ ಯಶಸ್ಸಿನಲ್ಲಿ ಪಾಲುದಾರರಾಗಬೇಕು ಎಂದರು.
ಹೃದ್ರೋಗ ತಜ್ಞ ಡಾ.ಭಾನುಪ್ರಕಾಶ್ ಮಾತನಾಡಿ ಹೃದಯದ ಜಾಗೃತಿಯ ಜೊತೆಗೆ ಸಾರ್ವಜನಿಕರಲ್ಲಿ ಹೃದ್ರೋಗದ ಬಗ್ಗೆ ಇರುವ ಆತಂಕ ಹಾಗೂ ತಪ್ಪು ನಂಬಿಕೆಗಳನ್ನು ಕೂಡ ತೊಡೆದುಹಾಕಬೇಕುವುದು ಈ ಮ್ಯಾರಥಾನ್ ಉದ್ದೇಶ. ನಮ್ಮ ಈ ಹೆಲ್ತ್ ರನ್ ಗೆ ಚಿತ್ರನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟು ಪ್ರಿಯಾಮೋಹನ್ ಅ.1 ರ ಬೆಳಗ್ಗೆ 6 ಗಂಟೆಗೆ ಆಸ್ಪತ್ರೆ ಆವರಣದಲ್ಲಿ ಚಾಲನೆ ನೀಡಲಿದ್ದಾರೆ ಎಂದರು.
ಹೃದ್ರೋಗ ತಜ್ಞ ಡಾ.ಶರತ್ ಕುಮಾರ್ ಜೆ.ವಿ. ಎಸ್ ಐಟಿ ದೈಹಿಕ ಶಿಕ್ಷಕ ಯೋಗೀಶ್,ಪಿಆರ್ ಓ ಕಾಂತರಾಜು ಇದ್ದರು.