Tuesday, 26th November 2024

ಮೋದಿ ಕಾರ‍್ಯಕ್ರಮಕ್ಕೆ ಸರಕಾರದ ದುಡ್ಡಿನಲ್ಲಿ ಜನರನ್ನು ಸೇರಿಸಿದ್ದಾರೆ: ಎಂ.ಬಿ ಪಾಟೀಲ್‌

ತುಮಕೂರು: ಬಿಜೆಪಿಯವರು ಮೋದಿ ಕಾರ‍್ಯಕ್ರಮಕ್ಕೆ ಸರಕಾರದ ದುಡ್ಡಿನಲ್ಲಿ ಜನರನ್ನು ಸೇರಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಂ.ಬಿ ಪಾಟೀಲ್‌ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಅಮೃತಮಹೋತ್ಸವ ಕರ‍್ಯಕ್ರಮಕ್ಕೆ ೧೫ ರಿಂದ ೨೦ ಲಕ್ಷ ಜನರಿದ್ದರು. ಆದರೆ ಮೋದಿ ಕರ‍್ಯಕ್ರಮಕ್ಕೆ ಸರಕಾರವೆ ನೋಡಲ್‌ ಆಫೀಸರ್‌ ನೇಮಕ ಮಾಡಿ ಜನ ಸೇರಿಸಿದ್ದಾರೆ. ಎಲ್ಲ ಗ್ರಾಮ ಪಂಚಾಯಿತಿ ಪಿಡಿಒ, ತಾ.ಪಂ, ಜಿ.ಪಂ ಅಧಿಕಾರಿಗಳ ಮೂಲಕ ಜನ ಸೇರಿದ್ದಾರೆ.

ಒತ್ತಾಯ ಪರ‍್ವಕವಾಗಿ ಸರಕಾರದ ಹಣದಲ್ಲಿ ಜನ ಸೇರಿಸಿದ್ದಾರೆ. ಜನರು ಅಭಿಮಾನಕ್ಕೆ ಬಂದಿಲ್ಲ, ಗ್ರಾಮ ಪಂಚಾಯಿತಿ ಪಿಡಿಒಗಳ ಮೂಲಕ ಊಟ, ಹಣ ನೀಡಿ ಜನರನ್ನು ಕರೆ ತಂದಿದ್ದಾರೆ. ಸರಕಾರದ ಹಣ ಬಳಸಿ ಜನ ಸೇರಿಸಿದ ಬಗ್ಗೆ ನನ್ನ ಬಳಿ ಸಾಕ್ಷ್ಯವಿದೆ ಬಿಡುಗಡೆ ಮಾಡುತ್ತೇನೆ ಎಂದರು.

ಮಠಕ್ಕೆ ಎಲ್ಲರೂ ಬಂದಿದ್ದಾರೆ
ಮುರುಘಮಠಕ್ಕೆ ರಾಹುಲ್‌ ಗಾಂಧಿ ಅವರು ಬಂದ ತಕ್ಷಣ ಕೆಟ್ಟ ಘಟನೆ ನಡೆದಿಲ್ಲ, ಮಠಕ್ಕೆ ಎಲ್ಲಾ ಪಕ್ಷದವರು ಬಂದು ಆಶರ‍್ವಾದ ಪಡೆದಿದ್ದಾರೆ.ಮಠಕ್ಕೆ ಎಲ್ಲ ಪಕ್ಷದವರು ಹೋಗಿದ್ದಾರೆ, ಮುಂದೆನೂ ಕೂಡ ಹೋಗುತ್ತಾರೆ. ಯಡಿಯೂರಪ್ಪ, ಅಮಿತ್‌ ಷಾ, ರಾಹುಲ್‌ ಗಾಂಧಿ ಒಳಗೊಂಡತೆ ನಾನು ಕೂಡ ಮಠಕ್ಕೆ ಹೋಗಿದ್ದೆ. ಮಠದಲ್ಲೇ ತಂಗಿದ್ದೆ, ಮುಂದೆನೂ ಕೂಡ ಮಠಕ್ಕೆ ಹೋಗುತ್ತೇನೆ. ಈಗ ಸ್ವಾಮೀಜಿಯವರದ್ದು ಪ್ರಕರಣ ಕರ‍್ಟ್‌ ನಲ್ಲಿದೆ. ಕರ‍್ಟ್‌ ನಲ್ಲಿ ತನಿಖೆಯಾಗುತ್ತಿದೆ. ಸತ್ಯಾಂಶ ಹೊರಗೆ ಬರಲಿದೆ. ತಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದರು.

ಜಯದೇವ ಸ್ವಾಮೀಜಿ ಕೊಡುಗೆ ಕೊಟ್ಟಿದ್ದಾರೆ

ಚಿತ್ರದುರ್ಗ ಮುರುಘಾ ಮಠ ಬಹಳ ಐತಿಹಾಸಿಕ ಮಠ. ಜಯದೇವ ಸ್ವಾಮಿಗಳು ಬಹಳ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ೫ ಸಾವಿರ ವಿರಕ್ತ ಶಾಖಾ ಮಠ ಹೊಂದಿದ್ದಂತಹ ದೊಡ್ಡ ಮಠ. ಅಲ್ಲಿ ಯಾರು ಇರುತ್ತಾರೆ, ಯಾರು ಇರಲ್ಲ ಅನ್ನೋದು ಮುಖ್ಯವಲ್ಲ. ನಾಳೆ ನಾನು ಚಿತ್ರದರ‍್ಗಕ್ಕೆ ಹೋದರೆ ಮುರುಘಾ ಮಠಕ್ಕೆ ಹೋಗ್ತಿನಿ . ಗದ್ದುಗೆಯಲ್ಲಿ ರ‍್ಶನ ಮಾಡಿ ಆಶರ‍್ವಾದ ಪಡೆಯುತ್ತೇನೆ ಎಂದು ಹೇಳಿದರು.

ಮುದ್ದಹನುಮೇಗೌಡ ಪ್ರಭಾವಿ ರಾಜಕಾರಣಿ: ಕಾಂಗ್ರೆಸ್‌ ಮಾಜಿ ಸಂಸದ ಮುದ್ದಹನುಮೇಗೌಡ ಸ್ಥಳೀಯವಾಗಿ ಪ್ರಭಾವಿ ರಾಜಕಾರಣಿಗಳಿದ್ದಾರೆ.ಅವರು ರಾಜೀನಾಮೆ ನೀಡಿರುವ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌, ಸಿದ್ದರಾಮಯ್ಯ ಎಲ್ಲರು ಕುಳಿತು ಮಾತುಕತೆ ನಡೆಸುತ್ತೇವೆ. ಕೆಪಿಸಿಸಿ ಅಧ್ಯಕ್ಷರು ಈ ಬಗ್ಗೆ ಅಧಿಕೃತವಾಗಿ ಹೇಳುತ್ತಾರೆ ಎಂದರು.

ಪಂಚಮಸಾಲಿ ೨ ಎ ಹೋರಾಟ ವಿಚಾರ ಸಂಬಂಧ ಮಾತನಾಡಿ, ಪಂಚಮಸಾಲಿ ಸಮುದಾಯ ಸಣ್ಣ ಹಿಡುವಳಿದಾರರಿದ್ದಾರೆ. ಮಕ್ಕಳಿಗೆ ಶಿಕ್ಷಣ, ಉದ್ಯೋಗ ಸಿಗಬೇಕೆಂದು ಹೋರಾಟ ಮಾಡುತ್ತಾರೆ. ಅದಕ್ಕೆ ನಾನು ಬೆಂಬಲ ನೀಡಿದ್ದೇನೆ ಅವರಿಗೆ ನ್ಯಾಯ ಸಿಗಬೇಕು, ಪಂಚಮಸಾಲಿ ಸಮುದಾಯ ಸಣ್ಣ ಹಾಗೂ ಮಳೆ ಆಶ್ರಿತ ಕೃಷಿಕರು.

ಅವರಿಗೆ ೨ಎ ಸಿಗಬೇಕು, ಇದು ನ್ಯಾಯಯುತ ಬೇಡಿಕೆ. ಅವರಿಗೆ ೨ಎ ಸಿಗಬೇಕು ಇದು ನನ್ನ ವೈಯಕ್ತಿಕ ಅಭಿಪ್ರಾಯವೇ ಹೊರೆತು ಪಕ್ಷದಲ್ಲ ಎಂದರು.

ಯಡಿಯೂರಪ್ಪನವರನ್ನು ಮತ್ತೇ ಮುಖ್ಯಮಂತ್ರಿ ಮಾಡುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿ ಅವರನ್ನು ಪರ‍್ಣಾವಧಿ ಸಿಎಂ ಆಗಲು ಬಿಡಲಿಲ್ಲ. ಈಗ ಯಡಿಯೂರಪ್ಪ ನವರ ಮೇಲೆ ಪ್ರೀತಿ ಬಂದಿದೆ. ಹಾಗಾದರೆ ಯಡಿಯೂರಪ್ಪ ಅವರನ್ನು ಸಿಎಂ ಕ್ಯಾಂಡಿಡೇಟ್ ಅಂತ ಘೋಷಿಸಲಿ ಅಥವಾ ಈಗಲೇ ಮುಖ್ಯಮಂತ್ರಿ ಮಾಡಲಿ. ಜನರು ದಡ್ಡರಲಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಡಿಸಿಎಂ ಪರಮೇಶ್ವರ್, ಮಾಜಿ ಸಚಿವ ಜಯಚಂದ್ರ, ಮಾಜಿ ಶಾಸಕರಾದ ರಾಜಣ್ಣ, ಷಫಿ ಅಹಮದ್, ರಫೀಕ್ ಅಹಮದ್ ಇತರರಿದ್ದರು.