Thursday, 28th November 2024

ಕನ್ನಡ ಕಲಿಕೆಗೆ ಉತ್ತೇಜನ: ಶಾಸಕ ಜ್ಯೋತಿ ಗಣೇಶ್

ತುಮಕೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಮೇಲೆ ಕನ್ನಡ ಕಲಿಕೆಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಾಥಮಿಕ ಪಾಠ ಶಾಲೆ ಗಳ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ ಎಂದು ಶಾಸಕ ಜ್ಯೋತಿಗಣೇಶ್ ತಿಳಿಸಿದರು.
ಕರ್ನಾಟಕ ಸಂಸ್ಕೃತಿ ರಕ್ಷಣಾ ವೇದಿಕೆ ವತಿಯಿಂದ 9ನೇ ವರ್ಷದ 67ನೇ ಕನ್ನಡ ರಾಜ್ಯೋ ತ್ಸವವನ್ನು ಆಚರಣೆಯಲ್ಲಿ ಧ್ವಜಾ ರೋಹಣ ನೆರವೇರಿಸಿ ಮಾತನಾಡಿ, ಮಾತೃಭಾಷೆಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಕಾನೂನು ರೂಪಿಸಲಾಗಿದೆ ಎಂದರು.
ಕೇ0ದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ ಎನ್ನುವ ತಪ್ಪು ಅಭಿಪ್ರಾಯ ಎಲ್ಲರಲ್ಲಿಯೂ ಇದೆ, ಆದರೆ ಮೋದಿ ಅವರು, ಅಮಿತ್ ಶಾ ಅವರು ಮಾತೃಭಾಷೆಯಲ್ಲಿಯೇ ಎಲ್ಲ ರೀತಿಯ ಶಿಕ್ಷಣದೊರೆಯುವಂತಾಗಬೇಕೆ0ಬ ಉದ್ದೇಶದಿಂದಲೇ ನೂತನ ಶಿಕ್ಷಣ ನೀತಿ ಯನ್ನು ಜಾರಿಗೆ ತಂದಿದ್ದಾರೆ, ಮಾತೃಭಾಷೆಗೆ ಜಾಗತಿಕ ಮನ್ನಣೆಯನ್ನು ದೊರಕಿಸಲು ಕೇಂದ್ರ ಸರ್ಕಾರ ಕಟಿಬದ್ಧವಾಗಿದೆ ಎಂದರು.
ಸ್ಫೂರ್ತಿ ಡೆವಲರ‍್ಸ್ನ ಎಸ್.ಪಿ.ಚಿದಾನಂದ್ ಅವರು ಮಾತನಾಡಿ, ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರು ಇಂದು ನಮ್ಮೊಂದಿಗೆ ಇಲ್ಲದೇ ಇದ್ದರೂ ಅವರು ರಾಜ್ಯಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ, ಅವರ ದಾರಿಯಲ್ಲಿಯೇ ನಾವೆಲ್ಲರೂ ಸಾಗುವ ಮೂಲಕ ಅವರಿಗೆ ಗೌರವ ಸಲ್ಲಿಸುವ ಕಾಯಕ ಮಾಡಬೇಕಿದೆ ಎಂದು ಹೇಳಿದರು.
ನಾಡು-ನುಡಿ ರಕ್ಷಣೆ ವಿಚಾರದಲ್ಲಿ ಕನ್ನಡ ಪರ ಸಂಘಟನೆಗಳ ಪಾತ್ರ ಮಹತ್ವದಾಗಿದ್ದು, ನಾಡಿಗೆ ಕಂಟಕವಾಗಿರುವ ಪ್ಲಾಸ್ಟಿಕ್ ಅನ್ನು ನಿಷೇಧಿಸುವ ಮೂಲಕ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕೆಂಬ ಪುನೀತ್ ಅವರ ಸಂಕಲ್ಪವನ್ನು ನಾವೆಲ್ಲರೂ ಒಟ್ಟಾಗಿ ನನಸಾಗಿಸೋಣ ಎಂದು ಕರೆ ನೀಡಿದರು.
ಕರ್ನಾಟಕ ಸಂಸ್ಕೃತಿ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ವೈ.ಎನ್.ಹೊಸಕೋಟೆ ನಟರಾಜ್ ಮಾತನಾಡಿ 750 ವರ್ಷಗಳ ನಂತರ
ಒಗ್ಗೂಡಿ ಕರ್ನಾಟಕವಾಗಿರುವ ರಾಜ್ಯವನ್ನು ರಾಜಕೀಯ ಕಾರಣಗಳಿಗಾಗಿ ಇಬ್ಭಾಗ ಮಾಡುವ ಹೇಳಿಕೆಗಳು ಪದೆಪದೇ ಕೇಳಿಬರುತ್ತಿದ್ದು ಇಂತಹ ಪ್ರಯತ್ನಗಳನ್ನು ಎಲ್ಲರೂ ಒಗ್ಗೂಡಿ ವಿರೋಧಿಸಬೇಕಿದೆ ಎಂದು ಹೇಳಿದರು.
ಈ ವೇಳೆ ಜಿಲ್ಲಾಧ್ಯಕ್ಷ ಧ್ರುವಕುಮಾರ್, ಬೊಂಬು ಮೋಹನ್, ನಗರಾಧ್ಯಕ್ಷ ಕಿರಣ್, ಉಪ್ಪಾರಹಳ್ಳಿ ಶಂಕರ್, ಗಿರೀಶ್, ರಾಜ್‌ ಕುಮಾರ್, ವಿಷ್ಣು, ವೆಂಕಟೇಶ್, ಮಲ್ಲಪ್ಪಣ್ಣ, ದೇವರಾಜು, ಗಜ ಇನ್ನು ಮುಂತಾದವರು ಉಪಸ್ಥಿತರಿದ್ದರು.