ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದ ಬಗ್ಗೆ ಮುಖ್ಯಮಂತ್ರಿಗಳ ಟ್ವೀಟ್ ಬಗ್ಗೆ ಹೆಮ್ಮೆಯಿದೆ
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ನಾನು ಹಮ್ಮಿಕೊಂಡಿರುವ ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದ ಬಗ್ಗೆ ಮಾಧ್ಯಮಗಳಲ್ಲಿ ಬಂದ ಸುದ್ದಿನೋಡಿದ ಮುಖ್ಯಮಂತ್ರಿಗಳು ಈ ಬಗ್ಗೆ ನನ್ನ ಬಳಿ ಕೇಳಿದಾಗ ನನ್ನ ಕಾರ್ಯವೈಖರಿ ಬಗ್ಗೆ ತಿಳಿಸಿದ್ದೆ. ಇದನ್ನು ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿ ಮೆಚ್ಚುಗೆ ವ್ಯಕ್ತಪಡಿಸಿರುವುದು ನನ್ನ ಸೌಭಾಗ್ಯ.ಇದೊಂದು ವಿಶೇಷ ಕಾರ್ಯಕ್ರಮವಾಗಿದ್ದು ಮುಂದುವರೆಸು ಎಂದು ಬೆನ್ನು ತಟ್ಟಿದ್ದಾರೆ ಎನ್ನುವ ಮೂಲಕ ಯಾವ ಕಾರಣಕ್ಕೂ ಇದನ್ನು ನಿಲ್ಲಿಸುವ ಮಾತೇಯಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.
ಪೋಶೆಟ್ಟಿಹಳ್ಳಿ ವ್ಯಾಪ್ತಿಯ ಕಾಮರೆಡ್ಡಿಹಳ್ಳಿ ಗ್ರಾಮದಲ್ಲಿ ವಿಶ್ವವಾಣಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಈವರೆಗೆ ೭೭ ಹಳ್ಳಿಗಳಲ್ಲಿ ನಮ್ಮೂರಿಗೆ ನಮ್ಮ ಶಾಸಕ ಪೂರ್ಣಗೊಳಿಸಿ ದ್ದೇನೆ. ಮುಂದಿನ ದಿನಗಳಲ್ಲಿ ಉಳಿದ ಗ್ರಾಮಗಳಲ್ಲಿ ಕಾರ್ಯಕ್ರಮ ಮುಂದುವರೆಸಲಗುವುದು ಎಂದರು.
ಮೆಟ್ರೋ ತರುವುದೇ ನನ್ನ ಗುರಿ
ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಬೆಂಗಳೂರಿಗೆ ಪರ್ಯಾಯ ನಗರವಾಗಿ ರೂಪಿಸುವುದು ನನ್ನ ಗುರಿಯಾಗಿದೆ.ಮೆಟ್ರೋ ರೈಲು ಸಂಪರ್ಕವನ್ನು ಚಿಕ್ಕಬಳ್ಳಾಪುರಕ್ಕೆ ತರಲು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳೊ0ದಿಗೆ ಮಾತನಾಡಿ ದ್ದೇನೆ ಎಂದ ಅವರು ಕೈಗಾರಿಕೆಗಳನ್ನು ಎಚ್ಚರಿಕೆಯಿಂದ ತರುವತ್ತ ಚಿತ್ತ ಹರಿಸಿದ್ದೇನೆ ಎಂದರು.
ಯೋಜಿತ ಕೈಗಾರಿಕೀಕರಣಕ್ಕೆ ಒತ್ತು
ಸುಮ್ಮನೆ ರೈತರ ಹತ್ತಿರ ಜಮೀನು ಕಿತ್ತುಕೊಂಡು ಯಾರನ್ನೋ ಉದ್ದಾರ ಆಗಲು ಕೊಡುವುದಲ್ಲ.ಅದನ್ನು ತುಂಬಾ ಕೇರ್‌ಪುಲ್ ಆಗಿ ವಿಷನ್ ಇಟ್ಟುಕೊಂಡು ಮಾಡಬೇಕು. ಎಂ.ಜಿ ರಸ್ತೆ ಅಗಲೀಕರಣ ೨೦೦೭ರಲ್ಲಿ ಪ್ರಾರಂಭವಾಗಿದೆ. ನಾನು ಬಂದೇ ಅದನ್ನು ಒಡೆಸಬೇಕಾಯಿತಾ,ಕಾರಣ ಮುಟ್ಟಕ್ಕೆ ಭಯ, ಎಲ್ಲಾ ಮತರಾಜಕಾರಣ.ನಾನು ಇಂತಹವಕ್ಕೆಲ್ಲಾ ಹೆದರಲ್ಲ.ಈಗ ಎಂ.ಜಿ.ರಸ್ತೆ ನೋಡಿ ನಾನು ಬರಲಿಲ್ಲ ಎಂದರೆ ಇದನ್ನು ಒಡೆಸಲು ೩-೪ ವರ್ಷ ಬೇಕಾಗುತ್ತಿತ್ತು. ಬಜಾರ್ ರಸ್ತೆ ಮೀಟಿಂಗ್ ಮಾಡಿದ್ದೇವೆ.೩ ನೋಟೀಸು ಕೊಟ್ಟಿದ್ದೇವೆ.ಕಾನೂನು ರೀತಿ ಕ್ರಮ ತೆಗೆದುಕೊಳ್ಳತ್ತೇವೆ.ಇಲ್ಲವಾದಲ್ಲಿ ಕೋರ್ಟಿನಲ್ಲಿ ಸ್ಟೇ ಬಂದು ಬಿಡುತ್ತದೆ ಎಂದು ತಮ್ಮ ಅಭಿವೃದ್ಧಿ ಯೋಜನೆಗಳನ್ನು ಮಾಧ್ಯಮದ ಮುಂದೆ ತೆರೆದಿಟ್ಟರು.
ಅಮಿತ್‌ಶಾಗೆ ಅಂಬೇಡ್ಕರ್ ಪ್ಯಾಶನ್
ಅಮಿತ್ ಶಾ ಹೇಳಿಕೆ ಬಹಳ ನೋವಿನ ಸಂಗತಿ.ಅAಬೇಡ್ಕರ್ ಹೆಸರೇಳುವುದು ಅಮಿತ್ ಶಾ ಅವರಿಗೆ ಪ್ಯಾಶನ್ ಇರಬಹುದು.ನಮ್ಮಂತಹವರಿಗೆ ಈ ದೇಶದ ಕೋಟ್ಯಾಂತರ ಮಂದಿಗೆ ಅಂಬೇಡ್ಕರ್ ಅವರೇ ದೇವರು.ಬಿಜೆಪಿ ಅವರು ಸಂಸ್ಕತಿ ಬಗ್ಗೆ ಮಾತನಾಡುತ್ತಾರೆ.ಸಿ.ಟಿ.ರವಿ ಅವರು ಸಂಸ್ಕೃತಿ ಬಗ್ಗೆ ದೊಡ್ಡ ದೊಡ್ಡ ಭಾಷಣ ಬಿಗಿಯುತ್ತಾರೆ. ರಾಜ್ಯದ ಜನಪ್ರಿಯ ಸಚಿವೆಯಾದ ಲಕ್ಷಿö್ಮÃ ಹೆಬ್ಬಾಳ್‌ಕರ್ ಬಗ್ಗೆ ತಪ್ಪು ಮಾತಾಡಿದ್ದಾರೆ, ಬಂಧನಕ್ಕೆ ಒಳಗಾಗಿದ್ದಾರೆ. ಬಾಬಾ ಸಾಹೇಬರ ಬಗ್ಗೆ ಮಾತನಾಡಲು ಬಿಜೆಪಿಯರು ವೇಸ್ಟ್.ನಿಜ ಹೇಳಬೇಕೆಂದರೆ ಸಂವಿಧಾನ ಮತ್ತು ಬಾಬಾ ಸಾಹೇಬ ಅಂಬೇಡ್ಕರ್ ಬಗ್ಗೆ ಬಿಜೆಪಿ ಮಂದಿಗೆ ಎಳ್ಳಷ್ಟೂ ಗೌರವವಿಲ್ಲ.ಇಂತಹವರ ಬಗ್ಗೆ ನಾವೇಕೆ ಮಾತಾಡಬೇಕು ಬಿಡಿ ಎಂದರು.
ವಾಹನ ದಟ್ಟಣೆ
ನಗರದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ನಾಗರೀಕರ ಸಹಕಾರ ಇದ್ದರೆ ಮಾತ್ರ ಸಾಧ್ಯ.ಸಿಂಗಾಪುರ ಸ್ವಚ್ಛ ನಗರ ಆಗಬೇಕಾದರೆ ಅಲ್ಲಿನ ಜನರ ಸಹಕಾರ, ಅಧಿಕಾರಿಗಳ ಕರ್ತವ್ಯ ಪ್ರಜ್ಞೆ ಕೆಲಸ ಮಾಡಿದೆ.ಅಲ್ಲಿ ಎಲ್ಲೆಂದರಲ್ಲಿ ಕಸ ಹಾಕಿದರೆ ತಕ್ಷಣವೇ ದಂಡ ಹಾಕುತ್ತಾರೆ. ಇಲ್ಲಿಯೂ ಅದೇ ರೀತಿ ಕಾನೂನು ಇದೆ. ಆದರೆ ಅಧಿಕಾರಿಗಳು ದಂಡ ಹಾಕಿದರೆ, ಜನಪ್ರತಿನಿಧಿಗಳಿಗೆ ದೂರು ನೀಡುತ್ತಾ,ಅಧಿಕಾರಿಗಳ ಮೇಲೆ ಅಂಕುಶ ಹಾಕುತ್ತಾರೆ. ನಾನು ಇದನ್ನು ಬದಲಾವಣೆ ಮಾಡಲು ಮುಂದಾಗಿದ್ದೇನೆ.ಸ್ವಲ್ಪ ಸಮಯ ಹಿಡಿಯಬಹುದು ಆಗುತ್ತದೆ ಎನ್ನುವ ಮೂಲಕ ನಗರ ದಲ್ಲಿ ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವ ಮಂದಿಗೆ ಎಚ್ಚರಿಕೆ ರವಾನೆ ಮಾಡಿದರು.